ಬೇಗುಸರಾಯ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ಬೆಗುಸರಾಯ್ ಜಿಲ್ಲೆಯಿಂದ ದೇಶಾದ್ಯಂತ ಸುಮಾರು 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ವಲಯದ ಸರಣಿ ಯೋಜನೆಗಳನ್ನ ಅನಾವರಣಗೊಳಿಸಿದರು.
ಈ ಯೋಜನೆಗಳು ಕರ್ನಾಟಕ, ಬಿಹಾರ, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್’ದಂತಹ ವಿವಿಧ ರಾಜ್ಯಗಳಲ್ಲಿ ಹರಡಿವೆ.
ದಾನಾಪುರ-ಜೋಗ್ಬಾನಿ ಎಕ್ಸ್ಪ್ರೆಸ್ (ದರ್ಭಾಂಗ-ಸಕ್ರಿ ಮೂಲಕ) ಸೇರಿದಂತೆ ನಾಲ್ಕು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಜೋಗ್ಬಾನಿಯಿಂದ ಸಹರ್ಸಾ ಮತ್ತು ಸಿಲಿಗುರಿ ಮತ್ತು ಸೋನ್ಪುರ್-ವೈಶಾಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಾಯಿತು.
ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆಜಿ ಜಲಾನಯನ ಪ್ರದೇಶದಿಂದ ‘ಮೊದಲ ತೈಲ’ವನ್ನ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ, ಒಎನ್ ಜಿಸಿ ಕೃಷ್ಣ ಗೋದಾವರಿ ಆಳ ನೀರಿನ ಯೋಜನೆಯಿಂದ ಮೊದಲ ಕಚ್ಚಾ ತೈಲ ಟ್ಯಾಂಕರ್’ಗೆ ಹಸಿರು ನಿಶಾನೆ ತೋರಿದರು.
‘ಪರ್ಸ್’ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ‘ಹಣಕಾಸಿನ ಸಮಸ್ಯೆ’ ಬರುವುದೇ ಇಲ್ಲ, ‘ಆದಾಯ ಡಬಲ್’.!
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಸಾರಿಗೆ ಬಸ್ ಸೌಲಭ್ಯ ಮಾ.04 ರಿಂದ
IPL-2024ಕ್ಕೂ ಮುನ್ನ ಹೈದರಾಬಾದ್ ತಂಡದ ನೂತನ ನಾಯಕನಾಗಿ ‘ಪ್ಯಾಟ್ ಕಮಿನ್ಸ್’ ನೇಮಕ