ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆ 2024 ಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದ್ದು, ಪ್ರಧಾನಿ ಮೋದಿ ಸೇರಿ 195 ಅಭ್ಯರ್ಥಿಗಳನ್ನ ಒಳಗೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ಅದ್ರಂತೆ, ಈ ಬಾರಿಯೂ ಪ್ರಧಾನಿ ಮೋದಿಯವ್ರು ವಾರಾಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಇನ್ನು ಈ ಮೊದಲ ಪಟ್ಟಿಯಲ್ಲಿ 28 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ದೆಹಲಿಯಲ್ಲಿ ತಡರಾತ್ರಿ ನಡೆದ ಪಕ್ಷದ ಸಭೆಯ ನಂತರ ಬಹುನಿರೀಕ್ಷಿತ ಅಭ್ಯರ್ಥಿಗಳ ಮೊದಲ ಪಟ್ಟಿ ಬಂದಿದೆ.
ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತ್ರ ಮಾತಾನಾಡಿದ ಬಿಜೆಪಿ ನಾಯಕ ವಿನೋದ್ ತಾವ್ಡೆ, “ಕಳೆದ ಒಂದು ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸುತ್ತಿದ್ದೇವೆ. ಈ ಬಾರಿ ಬಿಜೆಪಿ 400 ಕ್ಷೇತ್ರಗಳನ್ನ ಗುರಿ ಹೊಂದಿದೆ. ಕೇಂದ್ರದಲ್ಲಿ ಮತ್ತೆ ಮೋದಿಯವ್ರ ಸರ್ಕಾರ ರಚನೆಯಾಗಲಿದೆ” ಎಂದು ಹೇಳಿದರು.
BJP releases first list of 195 candidates for Lok Sabha elections pic.twitter.com/ms1zTtzLfL
— ANI (@ANI) March 2, 2024
ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳು
- ಉತ್ತರ ಪ್ರದೇಶ: 51 ಸ್ಥಾನಗಳು
- ಪಶ್ಚಿಮ ಬಂಗಾಳ: 20
- ಮಧ್ಯಪ್ರದೇಶ: 24
- ಗುಜರಾತ್: 15
- ರಾಜಸ್ಥಾನ: 15
- ಕೇರಳ: 12
- ತೆಲಂಗಾಣ: 9
- ಅಸ್ಸಾಂ: 11
- ಜಾರ್ಖಂಡ್: 11
- ಛತ್ತೀಸ್ ಗಢ: 11
- ದೆಹಲಿ: 5
- ಜಮ್ಮು ಮತ್ತು ಕಾಶ್ಮೀರ: 2
- ಉತ್ತರಾಖಂಡ: 3
- ಅರುಣಾಚಲ ಪ್ರದೇಶ: 2
- ಗೋವಾ: 1
- ತ್ರಿಪುರಾ: 1
- ಅಂಡಮಾನ್ ಮತ್ತು ನಿಕೋಬಾರ್: 1
- ದಮನ್ ಮತ್ತು ದಿಯು: 1
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!
- ಗಾಂಧಿನಗರದಿಂದ ಅಮಿತ್ ಶಾ
- ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ
- ತಿರುವನಂತಪುರಂನ ರಾಜೀವ್ ಚಂದ್ರಶೇಖರ್
- ಸಿಂಗ್ಭುಮ್ನ ಗೀತಾ ಕೋಡಾ
- ದುರ್ಗ್ ನಿಂದ ವಿಜಯ್ ಬಘೇಲ್
- ರಾಯ್ಪುರದ ಬ್ರಿಜ್ಮೋಹನ್ ಅಗರ್ವಾಲ್
- ಚಾಂದನಿ ಚೌಕ್ ನ ಪ್ರವೀಣ್ ಖಂಡೇಲ್ವಾಲ್
- ನವದೆಹಲಿಯಿಂದ ಬಾನ್ಸುರಿ ಸ್ವರಾಜ್
- ನವಸಾರಿಯಿಂದ ಸಿ.ಆರ್.ಪಾಟೀಲ್
- ಉಧಂಪುರದ ಡಾ.ಜಿತೇಂದ್ರ ಸಿಂಗ್
- ಹಜಾರಿಬಾಗ್ ನ ಮನೀಶ್ ಜೈಸ್ವಾಲ್
- ಖುಂಟಿಯ ಅರ್ಜುನ್ ಮುಂಡಾ
- ವಿದಿಶಾದ ಶಿವರಾಜ್ ಸಿಂಗ್ ಚೌಹಾಣ್
- ಬಿಕಾನೇರ್ ನ ಅರ್ಜುನ್ ರಾಮ್ ಮೇಘವಾಲ್
- ಅಲ್ವಾರ್ ನಿಂದ ಭೂಪೇಂದ್ರ ಯಾದವ್
- ನಾಗೌರ್ ನಿಂದ ಸ್ಪರ್ಧಿಸಲಿರುವ ಜ್ಯೋತಿ ಮಿರ್ಧಾ
- ಜೋಧಪುರದ ಗಜೇಂದ್ರ ಸಿಂಗ್ ಶೇಖಾವತ್
- ಚಿತ್ತೋರ್ಗಢದಿಂದ ಸಿಪಿ ಜೋಶಿ
- ಝಾಲಾವರ್-ಬರಾನ್ ನ ದುಶ್ಯಂತ್ ಸಿಂಗ್ (ವಸುಂಧರಾ ರಾಜೇ ಅವರ ಮಗ)
- ಕೋಟಾದ ಓಂ ಬಿರ್ಲಾ
- ಮಲ್ಕಾಜ್ಗಿರಿಯ ಎಟೆಲಾ ರಾಜೇಂದರ್
- ದಿಬ್ರುಗಢದ ಸರ್ಬಾನಂದ ಸೋನೊವಾಲ್
- ತ್ರಿಪುರಾ ಪಶ್ಚಿಮದಿಂದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್ ಸ್ಪರ್ಧೆ
- ಮುಜಾಫರ್ ನಗರದ ಡಾ.ಸಂಜೀವ್ ಕುಮಾರ್ ಬಲಿಯಾನ್
- ಗೌತಮ್ ಬುದ್ಧ ನಗರದ (ನೋಯ್ಡಾ) ಡಾ.ಮಹೇಶ್ ಶರ್ಮಾ
- ಮಥುರಾದಿಂದ ಹೇಮಾ ಮಾಲಿನಿ
- ಖೇರಿಯ ಅಜಯ್ ಮಿಶ್ರಾ ತೆನಿ
- ಉನ್ನಾವೊದ ಸಾಕ್ಷಿ ಮಹಾರಾಜ್
- ಲಕ್ನೋದಿಂದ ರಾಜನಾಥ್ ಸಿಂಗ್
- ಅಮೇಥಿಯಿಂದ ಸ್ಮೃತಿ ಜುಬಿನ್ ಇರಾನಿ
- ಫತೇಪುರದಿಂದ ಸಾಧ್ವಿ ನಿರಂಜನ್ ಜ್ಯೋತಿ
- ದೊಮರಿಯಾಗಂಜ್ ನಿಂದ ಜಗದಾಂಬಿಕಾ ಪಾಲ್
- ಅಜಂಗಢದಿಂದ ದಿನೇಶ್ ಲಾಲ್ ಯಾದವ್ ನಿರಾಹುವಾ ಮತ್ತೆ
- ಗೋರಖ್ಪುರದಿಂದ ರವಿ ಕಿಶನ್
- ಬಾಲೂರ್ ಘಾಟ್ ನಿಂದ ಡಾ.ಸುಕಾಂತ ಮಜುಂದಾರ್
- ಹೂಗ್ಲಿಯಿಂದ ಲಾಕೆಟ್ ಚಟರ್ಜಿ
#WATCH | BJP announces first list of 195 candidates for Lok Sabha elections; PM Modi to contest from Varanasi. pic.twitter.com/SSC8H3MSLT
— ANI (@ANI) March 2, 2024
ಅಂದ್ಹಾಗೆ, ಗುರುವಾರ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ, ಪಕ್ಷವು ತನ್ನ ಮೊದಲ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯನ್ನ ನಡೆಸಿತು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ಸದಸ್ಯರು ಲೋಕಸಭಾ ಚುನಾವಣೆಗೆ 17 ರಾಜ್ಯಗಳ ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನ ನಿರ್ಧರಿಸಿದರು. ವರದಿಗಳ ಪ್ರಕಾರ, ಬಿಜೆಪಿ ಸಿಇಸಿ ಸಭೆಯಲ್ಲಿ 155ಕ್ಕೂ ಹೆಚ್ಚು ಸ್ಥಾನಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖ್ಯಮಂತ್ರಿಗಳು, ರಾಜ್ಯ ಅಧ್ಯಕ್ಷರು, ಉಸ್ತುವಾರಿಗಳು, ಸಹ ಉಸ್ತುವಾರಿಗಳು ಮತ್ತು ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
BREAKING : ಚೀನಾದಿಂದ ಪಾಕ್’ಗೆ ತೆರಳುತ್ತಿದ್ದ ಹಡಗಿಗೆ ‘ಭಾರತ’ ತಡೆ, ‘ಪರಮಾಣು ಶಸ್ತ್ರಾಸ್ತ್ರ’ ಸಂಬಂಧಿತ ಸರಕುಗಳು ವಶ
BREAKING : ಚೀನಾದಿಂದ ಪಾಕ್’ಗೆ ತೆರಳುತ್ತಿದ್ದ ಹಡಗಿಗೆ ‘ಭಾರತ’ ತಡೆ, ‘ಪರಮಾಣು ಶಸ್ತ್ರಾಸ್ತ್ರ’ ಸಂಬಂಧಿತ ಸರಕುಗಳು ವಶ
‘ಬೈಜುಸ್’ನ 20,000 ಉದ್ಯೋಗಿಗಳ ವೇತನ ವಿಳಂಬ ; ಹೂಡಿಕೆದಾರರನ್ನ ದೂಷಿಸಿದ ‘CEO’