ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆಯಲ್ಲಿ ಗಾಯಗೊಂಡಿದ್ದಂತ ಓರ್ವ ಗಾಯಾಳು ಗುಣಮುಖರಾಗಿದ್ದು, ಅವರನ್ನು ಇಂದು ಬ್ರೂಕ್ ಫೀಲ್ಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ವೈದ್ಯ ಡಾ.ಪ್ರದೀಪ್ ಕುಮಾರ್ ಅವರು, ಈಗ ಸದ್ಯಕ್ಕೆ ಮೂರು ಜರ ಆಸ್ಪತ್ರೆಯಲ್ಲಿ ಅಡ್ಮಿಟ್ ಗಿದ್ದರು. ಒಂದು ಪೇಷೆಂಟ್ ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ. 23 ವರ್ಷದ ದೀಪಾಂಶು ಆಗಿದ್ದಾರೆ. ಅವರು 2 ಕಿವಿಗೆ ಪ್ರಾಬ್ಲಂ ಆಗಿ ಬಂದಿದ್ದರು ಎಂದರು.
ದೀಪಾಂಶು ಅವರನ್ನು ಕಿವಿಯ ಪರದೆ ಒಡೆದಿರೋ ಬಗ್ಗೆ ಪರಿಶೀಲನೆಯನ್ನು ನಡೆಸಿದರು. ಅವರ ಕಿವಿಗೆ ಹಾನಿಯಾಗಿರೋ ಬಗ್ಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಹಂತದಲ್ಲೂ ಪರೀಕ್ಷೆ ನಡೆಸಿ, ದೀಪಾಂಶು ಆರೋಗ್ಯದಲ್ಲಿ ಚೇತರಿಕೆ ಕಂಡಬಂದ ಕಾರಣ, ಅವರನ್ನು ಡಿಸ್ಚಾರ್ಜ್ ಮಾಡುತ್ತಿರೋದಾಗಿ ತಿಳಿಸಿದರು.
ಇನ್ನೂ ದೀಪಾಂಶು ಮಾತನಾಡಿ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವೈದ್ಯರು ಎಲ್ಲಾ ಪರೀಕ್ಷೆ ನಡೆಸಿದ್ದಾರೆ. ನಾನು ಸೈಕ್ಯಾಟ್ರಿಸ್ಟ್ ಅನ್ನು ಸಂಪರ್ಕಿಸಿ ಸಲಹೆ ಪಡೆದಿದ್ದೇನೆ. ಇದೀಗ ಗುಣಮುಖರಾಗಿರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳುತ್ತಿರೋದಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ಮದ್ಯಪ್ರವೇಶ: ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ‘Naukri, 99acres ಆ್ಯಪ್’ ಮರು ಸೇರ್ಪಡೆ