ಬೆಂಗಳೂರು: ನಿನ್ನೆ ಮಧ್ಯಾಹ್ನ ಬೆಂಗಳೂರಿನ ಕುಂದಲಹಳ್ಳಿ ಬಳಿಯಿರುವಂತ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಸಿಲುಕಿ ಗಾಯಗೊಳ್ಳಬೇಕಿದ್ದಂತ ಆ ಯುವಕನ ಜೀವವನ್ನು ಅಮ್ಮನ ಆ ಒಂದು ಪೋನ್ ಕರೆ ಉಳಿಸಿದೆ.
ಈ ಕುರಿತಂತೆ ಯುವಕ ಕುಮಾರ್ ಎಂಬಾತ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನನ್ನನ್ನು ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಲ್ಲಿ ಸಿಲುಕಿ ಗಾಯಗೊಳ್ಳಬೇಕಾಗಿದ್ದನ್ನು ಅಮ್ಮನ ಕರೆ ಕಾಯಿತು ಎಂದಿದ್ದಾನೆ.
ರಾಮೇಶ್ವರಂ ಕೆಫೆಗೆ ನಿನ್ನೆ ತಿನ್ನೋಕೆ ಹೋಗಿದ್ದೆನು. ದೋಸೆ ತೆಗೆದುಕೊಂಡು ತಿನ್ನೋಕೆ ಕುಳಿತೆ. ದೋಸೆ ತಿನ್ನುತ್ತಿದ್ದಾಗ ಅಮ್ಮನ ಪೋನ್ ಬಂತು. ಕೆಫೆಯಲ್ಲಿ ಜನರ ಸದ್ಧಿನಿಂದ ಸರಿಯಾಗಿ ಕೇಳಿಸದ ಕಾರಣ, ಅಮ್ಮನ ಜೊತೆಗೆ ಮಾತನಾಡೋಕೆ ಆಚೆ ಬಂದೆ ಎಂದಿದ್ದಾನೆ.
ನಾನು ರಾಮೇಶ್ವರಂ ಕೆಫೆಯಿಂದ 10 ಮೀಟರ್ ದೂರ ಅಮ್ಮನ ಜೊತೆಗೆ ಮಾತನಾಡೋದಕ್ಕೆ ದೋಸೆ ತಿನ್ನೋದು ಬಿಟ್ಟು ಸಾಗುತ್ತಿದ್ದಂತೇ ಬ್ಲಾಸ್ಟ್ ಆಯಿತು. ಅದೃಷ್ಠ ವಶಾತ್ ಅಮ್ಮನ ಪೋನ್ ಕರೆಯ ಕಾರಣದಿಂದ ನಾನು ಬ್ಲಾಸ್ಟ್ ನಲ್ಲಿ ಗಾಯಗೊಳ್ಳುವುದರಿಂದ ಪಾರಾದೆ ಎಂಬುದಾಗಿ ಹೇಳಿಕೊಂಡಿದ್ದಾನೆ.
I grabbed my Dosa from the counter and planned to sit at my usual spot. But today my MOM called me so I thought to go out in quite area, I moved 10m away from the place I usually sit(BOMB SITE) and Blast took place, I ran outside. MOM=GOD 🙏🏼 #RameshwaramCafe #RameshwaramCafeBlast https://t.co/s17G1By4Mv
— Kumar Alankrit (@kumaralankrit01) March 1, 2024
ಒಟ್ಟಾರೆಯಾಗಿ ಯುವಕ ಕುಮಾರ್ ನನ್ನು ರಾಮೇಶ್ವರಂ ಕೆಫೆಯ ಬ್ಲಾಸ್ಟ್ ನಿಂದ ಆ ಮಹಾತಾಯಿಯ ಒಂದು ಪೋನ್ ಕರೆಯಿಂದ ಬಚಾವ್ ಮಾಡಿದಂತೆ ಆಗಿದೆ.
ರಾಜ್ಯದಲ್ಲಿ ‘ಗ್ರಾಮ ಪಂಚಾಯ್ತಿ ಸೇವೆ’ಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಜಸ್ಟ್ ‘ವಾಟ್ಸಾಪ್’ ಮಾಡಿ ಸಾಕು