ಬೆಂಗಳೂರು: ರಾಮೇಶ್ವರಂ ಕೆಫೆ ಬಳಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಹಿಂದೆ ದೊಡ್ಡ ಕಾರ್ಯತಂತ್ರ ಅಡಗಿದೆ.ರಾಜ್ಯ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಿದರೆ, ಭಯೋತ್ಪಾದಕರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರೂ ಅದರ ಗಂಭೀರತೆ ಸರ್ಕಾರಕ್ಕೆ ಇಲ್ಲ. ಅದು ಲಘು ಬಾಂಬ್ ಅಂತ ಹೇಳುತ್ತಾರೆ. ಗಂಭೀರವಾಗಿ ಪರಿಗಣಿಸಲು ಸಾವು ನೋವು ಆಗಬೇಕೆ. ಇದರ ಹಿಂದೆ ದೊಡ್ಡ ಸ್ಲೀಪರ್ ಸೆಲ್ ಇದೆ. ಒಂದು ಕಡೆ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಾರೆ. ಇದೆಲ್ಲದರ ಹಿಂದ ದೊಡ್ಡ ಕಾರ್ಯತಂತ್ರ ಅಡಗಿದೆ. ಈ ಪ್ರಕರಣವನ್ನು ತಕ್ಷಣ ಎನ್ ಐಎ ಗೆ ವಹಿಸಬೇಕು. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಲಿಂಕ್ ಇರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಅವರಿಗೆ ಪ್ರೊತ್ಸಾಹ ಕೊಟ್ಡಂತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ 50 ಕೋಟಿ ಆಫರ್ ಕೊಟ್ಡಿರುವ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ, ಸಿಎಂ ಸಿದ್ದರಾಮಯ್ಯ ಅವರು ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಯಾರು ಆಫರ್ ಮಾಡಿದ್ದರು. ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಕೊಡಬೇಕು. ಹಿಟ್ ಆಂಡ್ ರನ್ ಮಾಡುವುದು ಬೇಡ ಎಂದು ಹೇಳಿದರು.
BREAKING: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ ನಾಲ್ವರು ಪೊಲೀಸ್ ವಶಕ್ಕೆ