ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿ ಆದೇಶಿಸಿದೆ. ಈ ಮೂಲಕ ಹೆಚ್ಎಎಲ್ ಪೊಲೀಸರಿಂದ ಸಿಸಿಬಿ ಪೊಲೀಸರ ತನಿಖೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶಿಸಿದ್ದು ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಪೋಟ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸುತ್ತಿರೋದಾಗಿ ತಿಳಿಸಿದೆ. ಹೆಚ್ ಎಎಲ್ ಠಾಣೆಯಿಂದ ಪ್ರಕರಣವನ್ನು ಸಿಸಿಬಿಯ ನವೀನ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.
ನಿನ್ನೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ 10 ಮಂದಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಭೇಟಿಯಾದಂತ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಆರೋಗ್ಯ ವಿಚಾರಿಸಿದ್ದರು.
ನಿನ್ನೆ ಮಧ್ಯಾಹ್ನದ ವೇಳೆಯಲ್ಲಿ ನಡೆದಿದ್ದಂತ ಈ ಘಟನೆಯಿಂದಾಗಿ ಬೆಂಗಳೂರು ಜನತೆ ಬೆಚ್ಚಿ ಬಿದ್ದಿದ್ದರು. ಆರಂಭದಲ್ಲಿ ಸಿಲಿಂಡರ್ ಬ್ಲಾಸ್ಟ್ ಎನ್ನಲಾಗಿತ್ತು. ಆದ್ರೇ ಸುಧಾರಿತ ಐಇಡಿ ಬಳಸಿ ಸ್ಪೋಟಿಸಿರೋದು ತನಿಖೆಯಲ್ಲಿ ಪತ್ತೆಯಾಗಿತ್ತು. ಜೊತೆಗೆ ಇಡ್ಲಿ ತಿಂದು ಬ್ಯಾಗ್ ಇಟ್ಟು ಹೋಗಿದ್ದಂತ ಶಂಕಿತ ವ್ಯಕ್ತಿಯೊಬ್ಬ ಟೈಮರ್ ಬಳಸಿ ಬ್ಲಾಸ್ಟ್ ಮಾಡಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು. ಈ ದೃಶ್ಯಾವಳಿಯನ್ನು ಆಧರಿಸಿ ಶಂಕಿತ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಮಹಾ ಶಿವರಾತ್ರಿ 2024: ದಿನಾಂಕ, ಇತಿಹಾಸ, ಮಹತ್ವ, ಪೂಜಾ ಸಮಯ, ಇತರ ಮಹತ್ವದ ಮಾಹಿತಿ ಇಲ್ಲಿದೆ!