ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ಸೇವೆಗಳನ್ನು ಮತ್ತಷ್ಟು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆ ಇರಿಸಿದೆ. ಅದೇ ಪಂಚಮಿತ್ರ ಪೋರ್ಟಲ್ ಅನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಈ ಪೋರ್ಟಲ್ ಅಡಿಯಲ್ಲಿ ಗ್ರಾಮ ಪಂಚಾಯ್ತಿ ಕೆಲ ಸೇವೆಗಳು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರದಂದು ಪಂಚಮಿತ್ರ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ಪೋರ್ಟಲ್ ನಲ್ಲಿ ಗ್ರಾಮ ಪಂಚಾಯ್ತಿ ಸೇವೆಗಳನ್ನು ಆನ್ ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಿಕೊಡಲಿದೆ.
ಗ್ರಾಮೀಣ ಜನರು ತಮ್ಮ ಕಟ್ಟಡ ನಿರ್ಮಾಣ ಅನುಮತಿ, ಹೊಸ ನೀರು ಸರಬರಾಜು ಸಂಪರ್ಕ, ಬೀದಿ ದೀಪ ನಿರ್ವಹಣೆ, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಸೇವೆಗಳನ್ನು ಈ ಪಂಚಮಿತ್ರ ಪೋರ್ಟಲ್ ಮೂಲಕವೇ ಪಡೆಯಬಹುದಾಗಿದೆ.
ಗ್ರಾಮ ಪಂಚಾಯ್ತಿ ಈ ಎಲ್ಲಾ ಸೇವೆಗಳು ಈಗ ಆನ್ ಲೈನ್ ನಲ್ಲೇ ಲಭ್ಯ
- ರಸ್ತೆ ಅಗೆಯಲು ಅನುಮತಿ
- ಸ್ವಾಧೀನ ಪ್ರಮಾಣ ಪತ್ರ
- ನಿರಾಕ್ಷೇಪಣಾ ಪತ್ರ
- ಕೈಗಾರಿಕಾ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
- MGNREGA ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
- ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಅರ್ಜಿ
- ದೂರ ಸಂಪರ್ಕ ಗೋಪುರಕ್ಕೆ ಅನುಮತಿ
- ನಮೂನೆ 9/11ಎ
- ನಮೂನೆ 11ಬಿ
- ಭೂಗತ ಕೇಬಲ್ ಮೂಲಕ ಸೌಕರ್ಯಗಳ ಅನುಮತಿ