ಕಲಬುರ್ಗಿ: ಜಿಲ್ಲೆಯಲ್ಲಿ ನಡೆಯುತ್ತಿದ್ದಂತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗೋದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನು ಇದೀಗ ಹೈಕೋರ್ಟ್ ತೆರವುಗೊಳಿಸಿ ಆದೇಶಿಸಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಇಂದು ನಮೋ ಬ್ರಿಗೇಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿತ್ತು. ಅಲ್ಲದೇ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗೋದಕ್ಕೆ ನಿರ್ಬಂಧ ವಿಧಿಸಿತ್ತು.
ಕಲಬುರ್ಗಿಯ ಚಿತ್ತಾಪುರ ತಾಲೂಕಿನ ಸ್ಥಳೀಯ ಆಡಳಿತ ವಿಧಿಸಿದ್ದಂತ ನಿರ್ಬಂಧ ತೆರವುಗೊಳಿಸುವಂತೆ ಕಲಬುರ್ಗಿ ವಿಭಾಗಿಯ ಹೈಕೋರ್ಟ್ ನ್ಯಾಯಪೀಠಕ್ಕೆ ಚಕ್ರವರ್ತಿ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದರು.
ಇಂತಹ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿಯ ಹೈಕೋರ್ಟ್ ನ್ಯಾಯಪೀಠವು ಚಕ್ರವರ್ತಿ ಸೂಲಿಬೆಲೆ ಪ್ರವೇಶಕ್ಕೆ ಹೇರಿದ್ದಂತ ನಿರ್ಬಂಧವನ್ನು ತೆರವುಗೊಳಿಸಿ ಆದೇಶಿಸಿದೆ. ಅಲ್ಲದೇ ಚಕ್ರವರ್ತಿ ಸೂಲಿಬೆಲೆಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆಯೂ ಹೈಕೋರ್ಟ್ ಸೂಚಿಸಿದೆ.
ಚಿತ್ರದುರ್ಗದಲ್ಲಿ ‘PDO’ ದುರ್ವರ್ತನೆ: ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರಿಂದ ಸಾಮೂಹಿಕ ರಾಜೀನಾಮೆ
BREAKING: ಕೊನೆಗೂ ‘ರಾಜ್ಯ ಸರ್ಕಾರ’ಕ್ಕೆ ‘ಜಾತಿಗಣತಿ ವರದಿ’ ಸಲ್ಲಿಸಿದ ‘ಹಿಂದುಳಿದ ಆಯೋಗದ ಅಧ್ಯಕ್ಷ’.!