ಧಾರವಾಡ: ಮಕ್ಕಳು ಅಂದ್ರೇ ಅಳೋದು ಕಾಮನ್. ಅದನ್ನು ಸಹಿಸಿಕೊಳ್ಳುವುದಕ್ಕಿಂತ ಅರ್ಥ ಮಾಡಿಕೊಂಡು ಬೇಕು, ಬೇಡಗಳನ್ನು ನೀಗಿಸೋದು, ಈಡೇರಿಸೋದು ತಂದೆ-ತಾಯಿಗಳ ಕರ್ತವ್ಯ. ಆದ್ರೇ ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅದೇ ಮಗು ಅತ್ತಿದ್ದಕ್ಕೆ ಗೋಡೆಗೆ ಎತ್ತಿ ಎಸೆದು ಪಾಪಿ ತಂದೆಯೊಬ್ಬ ಕೊಂದೇ ಬಿಟ್ಟಿದ್ದಾನೆ.
ಹೌದು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಅದೇ ಮಗು ಅಳುತ್ತಿದೆ ಎಂಬುದಾಗಿ ಅದನ್ನು ಸಹಿಸದಂತ ತಂದೆಯೊಬ್ಬ ಗೋಡೆಗೆ ಮಗುವನ್ನೇ ಎಸೆದು ಕೊಂದಿರೋ ಘಟನೆ ನಡೆದಿದೆ.
ಯಾದವಾಡ ಗ್ರಾಮದ ಶಂಬುಲಿಂಗಯ್ಯ ಶಾಪುರಮಠ ಎಂಬಾತನೇ ಹೀಗೆ ಮಗು ಕೊಂದಿರುವಂತ ಪಾಪಿ ತಂದೆಯಾಗಿದ್ದಾರೆ. ರಾತ್ರಿ ಮಗು ಅಳುತ್ತಿದ್ದಕ್ಕೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದಂತ ಈತ, ಮಗುವಿನ ಕಾಲು ಹಿಡಿದು ಗೋಡೆಗೆ ಎಸೆದಿದ್ದಾರೆ. ಈ ಪರಿಣಾಮ ಮಗುವಿನ ತಲೆಗೆ ಗಂಭೀರವಾದಂತ ಗಾಯವಾಗಿತ್ತು. ಕೂಡಲೇ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದ್ರೇ ಗಂಭೀರವಾಗಿ ತಲೆಗೆ ಪೆಟ್ಟಾಗಿದ್ದಂತ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ತಂದೆ ಶಂಬುಲಿಂಗಯ್ಯನನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್
2008ರಲ್ಲಿ ‘ಚಿನ್ನಸ್ವಾಮಿ’ ಕ್ರೀಡಾಂಗಣದಲ್ಲಿ ‘ಬಾಂಬ್’ ಇಟ್ಟವರೇ ಇಂದು ಪಾಕ್ ಪರ ಘೋಷಣೆ ಕೂಗಿದ್ದಾರೆ :ಮುನಿರತ್ನ ಆರೋಪ