ಕೆಎನ್ಎನ್ಡಿಜಿಟಲ್ಡೆಸ್ಕ್: ಮುಖದ ಅಂದ ಹೆಚ್ಚಿಸಿಕೊಳ್ಳಲು ಫೇಸ್ ಪ್ಯಾಕ್ ತುಂಬಾ ಉಪಯುಕ್ತ. ಆದರೆ ನೀವು ಹಾಕುವ ಫೇಸ್ ಪ್ಯಾಕ್ ಆದಷ್ಟು ಕೆಮಿಕಲ್ ಫ್ರೀ ಆಗಿರಲಿ. ಹಾಗು ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನೇ ಬಳಿಸಿ ಫೇಸ್ ಪ್ಯಾಕ್ ಮಾಡಿಕೊಂಡರೆ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ. ಮತ್ತು ನಿಮ್ಮ ತ್ವಚೆ ದೀರ್ಘಕಾಲದ ವರೆಗೂ ಆರೋಗ್ಯವಾಗಿರಿಸುತ್ತದೆ.
ನಾವಿಂದು ಹೇಳಿಕೊಡುವ ಹೊಸ ಫೇಸ್ ಪ್ಯಾಕ್ ಎಲ್ಲಾ ವಯಸ್ಕರೂ ಹಾಕಿಕೊಳ್ಳಬಹುದು. ತುಂಬಾ ಚಿಕ್ಕ ಮಕ್ಕಳಿಗೆ ಇದು ಬೇಡ. ಟೀನೇಜ್ ಹುಡುಗಿಯರಿಂದ ಹಿಡಿದು ವಯಸ್ಕರೂ ಸಹ ಈ ಫೇಸ್ ಪ್ಯಾಕ್ ಬಳಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
ಇಂದಿನ ಫೇಸ್ ಪ್ಯಾಕ್ನ ಮುಖ್ಯ ಪದಾರ್ಥ ಟೊಮೆಟೊ. ಟೊಮೆಟೊದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಬಳಕೆ ಚರ್ಮದ ಮೇಲಿನ ಸುಕ್ಕು, ಮೊಡವೆ, ಹಾಗು ಮೊಡವೆಯ ಕಲೆಗಳು ನಿವಾರಣೆಯಾಗಿ ಚರ್ಮಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ.
ಟೊಮೆಟೊ ಬಳಸಿ ಫೇಸ್ ಪ್ಯಾಕ್ ಮಾಡುವ ಬಗೆ ಹೇಗೆಂದರೆ, ಚಿಕ್ಕ ಅರ್ಧ ಲೋಟದಷ್ಟು ಟೊಮೆಟೊ ಪೇಸ್ಟ್ ತೆಗೆದುಕೊಳ್ಳಿ ಇದಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಎರಡನ್ನೂ ಚೆನ್ನಾಗಿ ಬೆರಸಿ. ಈ ಪೇಸ್ಟ್ ಹಚ್ಚುವ ಮುನ್ನ ಮುಖವನ್ನು ಶುಭ್ರವಾಗಿ ತೊಳೆಯಿರಿ. ನಂತರ ರೆಡಿ ಮಾಡಿಕೊಂಡ ಟೊಮೆಟೊ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕೇವಲ ಹದಿನೈದು ನಿಮಿಷ ಮಾತ್ರ ಈ ಪ್ಯಾಕ್ ಅನ್ನು ಮುಖದಲ್ಲಿ ಇರಿಸಿ. ನಂತರ ನೀರಿನಿಂದ ಮುಖ ತೊಳೆಯಿರಿ. ಪ್ಯಾಕ್ ತೆಗೆದ ನಂತರ ಸಾಬೂನಿನ ಬಳಕೆ ಬೇಡ.
ಸ್ವಲ್ಪ ಟೊಮೆಟೊಗೆ ಫ್ರೆಶ್ ಮಜ್ಜಿಗೆ ಕಲಿಸಿ ಹಚ್ಚಿಕೊಂಡು ಇಪ್ಪತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ. ಟೊಮೆಟೊ ರಸವನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಸೇರಿಸಿ ಮುಖಕ್ಕೆ ಪ್ಯಾಕ್ ಹಾಕಿಕೊಳ್ಳಿ. ಪ್ಯಾಕ್ ಒಣಗಿದ ಮೇಲೆ ಮುಖ ತೊಳೆಯಿರಿ. ತುಂಬಾ ಹೊತ್ತು ಈ ಪ್ಯಾಕ್ ಅನ್ನು ಮುಖದ ಮೇಲೆ ಇರಿಸಿದರೆ ತ್ವಚೆಗೆ ತೊಂದರೆಯಾಗಬಹುದು.
ಮೊತ್ತೊಂದು ವಿಧಾನ ಟೊಮೆಟೊ ಪೇಸ್ಟ್ಗೆ ಎರಡು ಸ್ಪೂನ್ ಕಡಲೆ ಹಿಟ್ಟು, ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ಅಲ್ಲೇ ಮುಖದಲ್ಲಿ ಮೃದುವಾಗಿ ಮಸಾಜ್ ಮಾಡಿಕೊಂಡು ಸ್ವಲ್ಪ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡಿದರೆ ಮುಖದಲ್ಲಿನ ಜಿಡ್ಡಿನಾಂಶ ಹೋಗಿ, ಮುಖ ಹೊಳೆಯುವಂತಾಗುತ್ತದೆ.