ಕೆಎನ್ಎನ್ಡಿಜಿಟಲ್ಡೆಸ್ಕ್: ಸಾಮಾನ್ಯವಾಗಿ ತಲೆನೋವು ಆಗಾಗ ಬಂದು ಹೋಗುತ್ತದೆ. ತಲೆನೋವು ಬಾರದೇ ಇರುವ ವ್ಯಕ್ತಿಯೇ ಇಲ್ಲ ಎನ್ನಬಹುದು. ಎಲ್ಲರಿಗೂ ತಲೆನೋವು ಬಂದು ಹೋಗಿಯೇ ಇರುತ್ತದೆ. ಕೆಲಸದ ಒತ್ತಡ, ನಿದ್ರಾಹೀನತೆ, ಸುಸ್ತು, ಪಿತ್ತ, ಊಟ ಸರಿಯಾಗಿ ಆಗದೇ ಇದ್ದಾಗಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಹೀಗೆ ತಲೆನೋವು ಭಾದಿಸಿದಾಗ ಸಾಮಾನ್ಯವಾಗಿ ಮಾತ್ರೆಗಳನ್ನು ತೆಗೆದುಕೊಂಡುಬಿಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ತಲೆನೋವಿನ ಮಾತ್ರೆಗಳ ಅತಿಯಾದ ಸೇವನೆ ತಕ್ಷಣಕ್ಕೆ ನಿಮಗೆ ಪರಿಹಾರ ನೀಡಬಹುದೇ ಹೊರೆತು ಮುಂದಿನ ದೀರ್ಘಕಾಲದ ಆರೋಗ್ಯಕ್ಕೆ ಭಾರಿ ಕೊಡಲಿಪೆಟ್ಟು ಬೀಳುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ ಸಹ.
ಇನ್ನು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೂ ತಲೆಯ ನರಗಳು ಬಿಗಿದಂತೆ ಆಗುತ್ತದೆ. ತಲೆನೋವಿಗೆ ಎಲ್ಲದಕ್ಕಿಂತ ಸೂಕ್ತ ಹಾಗು ನೈಸರ್ಗಿಕ ಪರಿಹಾರವೆಂದರೆ ಒಂದೊಳ್ಳೆ ನಿದ್ರೆ. ತಲೆನೋವು ಬಂದಾಗ ಚೆನ್ನಾಗಿ ನಿದ್ದೆ ಮಾಡಿ ಎದ್ದು ಬಿಡಿ, ಆದ್ರೆ ಆ ನಿದ್ರೆ ಘಾಡವಾದ ನಿದ್ರೆಯಾಗಿರಬೇಕು. ನಿರಂತರವಾಗಿ ಏಳರಿಂದ ಏಂಟಿ ಗಂಟೆಗಳ ಕಾಲ ಸುಖನಿದ್ರೆ ಮಾಡಿದರೆ ತಲೆನೋವು ಮಂಗಮಾಯವಾಗುತ್ತದೆ. ಇನ್ನು ಕೆಲವರಿಗೆ ತಲೆನೋವಿದ್ದರೆ ನಿದ್ರೆಯೇ ಬರುವುದಿಲ್ಲ. ಇಂತಹ ಜನರಿಗೆ ಬೆಸ್ಟ್ ಉಪಾಯವೆಂದರೆ ತಲೆಗೆ ಮಸಾಜ್ ಮಾಡಿಕೊಳ್ಳಿ. ಸ್ವತಃ ನೀವೇ ಮಾಡಿಕೊಳ್ಳುವುದರಿಂದ ಬೇರೊಬ್ಬರೊಟ್ಟಿಗೆ ಒಂದೊಳ್ಳೆ ಮಸಾಜ್ ಮಾಡಿಸಿಕೊಳ್ಳಿ.
ತಲೆಗೆ ಮಸಾಜ್ ಮಾಡುವುದು ಹೇಗೆಂದರೆ ಅದು ವೈದ್ಯಕೀಯ ಪದ್ಧತಿಯಲ್ಲಿ ಮಾಡಬೇಕು. ಮೊದಲಿಗೆ ನೀಲಗಿರಿ ಅಥವಾ ಪುದಿನಾದಂತಹ ನೈಸರ್ಗಿಕ ಎಣ್ಣೆಯನ್ನು ತೆಗೆದುಕೊಂಡು ಹಣೆಗೆ ಹಚ್ಚಿ. ತೋರು ಬೆರಳು ಹಾಗು ಹೆಬ್ಬರಳಿನ ಸಹಾಯದಿಂದ ನೋವಿರುವ ಜಾಗಕ್ಕೆ ಲಘುವಾಗಿ ಒತ್ತಿಕೊಳ್ಳಿ. ತಲೆನೋವು ಜೋರಾಗಿದೆ ಎಂದು ಹಣೆಯನ್ನು ಜೋರಾಗಿ ಒತ್ತಿಕೊಳ್ಳಬೇಡಿ. ಇದರಿಂದ ನರಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಚ್ಚರ. ಮೆತ್ತಗೆ ಲಘುವಾಗಿ ಮಸಾಜ್ ಮಾಡಿಕೊಂಡರೆ ನರಗಳೆಲ್ಲಾ ರಿಲೀಫ್ ಆಗುತ್ತವೆ. ರಕ್ತ ಪರಿಚಲನೆ ಕೂಡ ಸರಳವಾಗಿ ಆಗುತ್ತದೆ. ಹೆಚ್ಚೆಂದರೆ ಹದಿನೈದು ನಿಮಿಷ ಮಾತ್ರ ಮಸಾಜ್ ಮಾಡಿಕೊಳ್ಳಿ. ಹೆಚ್ಚು ಹೊತ್ತು ಬೇಡ. ತಲೆಗೆ ಜೋರಾಗಿ ಹೊಡೆದುಕೊಳ್ಳುವುದು, ತಲೆಗೆ ಬಿಗಿಯಾಗಿ ಬಟ್ಟೆ ಕಟ್ಟುವುದು ಬೇಡವೇ ಬೇಡ. ಇದರಿಂದ ರಕ್ತ ಸಂಚಲನಕ್ಕೆ ಅಡ್ಡಿಯಾಗಿ ದೊಡ್ಡ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದನ್ನು ಮರೆಯಬೇಡಿ. ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ನರಗಳು ಸಡಿಲಗೊಂಡು ತಲೆಗೆ ರಿಲೀಫ್ ಆಗುತ್ತದೆ.
ಮತ್ತೊಂದು ಪರಿಹಾರವೆಂದರೆ ಉಗುಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ ಬೆನ್ನು ಹಾಗು ಭುಜದ ಮೇಲೆ ಬಿಸಿ ನೀರನ್ನು ಹಾಕಿಂಡಾಗ ಮೈಭಾರ ಕಡಿಮೆಯಾಗುತ್ತದೆ. ಸ್ನಾಯುಭಾರ ಕಡಿಮೆಯಾಗಿ ದೇಹದ ಎಲ್ಲ ಭಾಗಗಳಿಗೆ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ.