ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಹಜವಾಗಿ ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆಯಲ್ಲಿ ರೋಸ್ ವಾಟರ್ ಬಳಸುತ್ತಾರೆ. ಇದು ಒಂದು ನೈಸರ್ಗಿಕವಾದ ಕಾಸ್ಮೆಟಿಕ್ ಅಂದರೂ ತಪ್ಪಿಲ್ಲ. ಚರ್ಮದ ಆರೈಕೆಗೆ ಫೇಸ್ ಪ್ಯಾಕ್ ಮಾಡಿಕೊಳ್ಳುವಾಗ ರೋಸ್ ವಾಟರ್ ಬಳಸಲು ತಜ್ಞರು ಸಲಹೆ ನೀಡುತ್ತಾರೆ. ಇದರ ನಿಯಮಿತವಾದ ಬಳಕೆಯಿಂದ ಚರ್ಮಕ್ಕೆ ಯಾವುದೇ ಹಾನಿ ಇಲ್ಲ ಎಂಬ ಮಾತಂತೂ ಸತ್ಯ. ಬನ್ನಿ ಹಾಗಿದ್ದರೆ ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಎಷ್ಟು ಪ್ರಾಮುಖ್ಯ ಹಾಗು ಇದರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ.
ಜಿಡ್ಡಿನ ಚರ್ಮ ಹಾಗು ಒಣ ಚರ್ಮಕ್ಕೂ ರೋಸ್ ವಾಟರ್ ಬಳಕೆ ಮಾಡಬಹುದು. ಇದಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ. ಹೊರಗಡೆಯಿಂದ ಬಂದ ತಕ್ಷಣ ಹತ್ತಿಯನ್ನು ರೋಸ್ ವಾಟರ್‌ನಲ್ಲಿ ಅದ್ದಿ ಮುಖವನ್ನು ಒರೆಸಿಕೊಂಡರೆ ಸೂಕ್ಷ್ಮವಾಗಿ ಅಂಟಿಕೊಂಡಿರು ಧೂಳಿನ ಚಿಕ್ಕ ಚಿಕ್ಕ ಕಣಗಳು ತೆಗೆಯಬಹುದು.
ಮೇಕಪ್ ರಿಮೂವರ್ ಆಗಿ ರೋಸ್ ವಾಟರ್ ಬಳಸಬಹುದು. ಮೇಕಪ್ ಹಚ್ಚಿ ತೆಗೆಯುವಾಗ ಹತ್ತಿಯನ್ನು ಇದರಲ್ಲಿ ಅದ್ದಿ ಮೇಕಪ್ ಒರೆಸಿಕೊಂಡರೆ ಚರ್ಮಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.
ಮುಖಕ್ಕೆ ರೋಸ್ ವಾಟರ್ ಹಚ್ಚಿದರೆ ಸಣ್ಣ ಧೂಳಿನ ಕಣಗಳು ತೆಗೆದು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಇದು ತಡೆಗಟ್ಟುತ್ತದೆ. ಮೊಡವೆ ಬಾರದಂತೆ ಹಾಗು ಮೊಡವೆ ನಿವಾರಣೆಗೆ ರೋಸ್ ವಾಟರ್ ಬಳಕೆ ಅತ್ಯುತ್ತಮ.
ತುಟಿಯ ರಕ್ಷಣೆಗೂ ರೋಸ್ ವಾಟರ್ ಬೆಸ್ಟ್. ಚಳಿಗಾಲದಲ್ಲಿ ತುಟಿಯ ಚರ್ಮ ಶುಷ್ಕತೆಯಿಂದ ಒಡೆದುಹೋಗುತ್ತವೆ. ಇನ್ನು ರೋಸ್ ವಾಟರನ್‌ನಲ್ಲಿ ಫೆನೋಲಿಕ್ ಅಂಶ ಇದ್ದು ತುಟಿಗಳಿಗೆ ಇದನ್ನು ಚಳಿಗಾಲದಲ್ಲಿ ಹಚ್ಚಿದರೆ ತುಟಿ ಒಡೆಯುವುದು ಕಡಿಮೆಯಾಗಿ ತುಟಿಗಳು ಮೃದುವಾಗುತ್ತವೆ.
ರೋಸ್ ವಾಟರ್ ಚರ್ಮದಲ್ಲಿನ ತೇವಾಂಶವನ್ನು ನಿಯಂತ್ರಿಸುತ್ತದೆ. ಅಂದರೆ ಚರ್ಮದಲ್ಲಿ ನೀರಿನಾಂಶ ಹೆಚ್ಚು ಕಾಲದ ವರೆಗೆ ಇರುವಂತೆ ನೋಡಿಕೊಳ್ಳುತ್ತದೆ. ಒಟ್ಟಾರೆ ಒಣ ಚರ್ಮದ ಸಮಸ್ಯಗೆ ರೋಸ್ ವಾಟರ್ ಸೂಕ್ತ ಪರಿಹಾರ ನೀಡುತ್ತದೆ. ತ್ವಚೆಯನ್ನು ಮಾಶ್ಚರೈಸ್ ಮಾಡುತ್ತದೆ. ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ಗ್ಲಿಸರಿನ್ ಜೊತೆ ರೋಸ್ ವಾಟರ್ ಬೆಸರಿ ಮುಖಕ್ಕೆ ಹಚ್ಚಿದರೆ ಚರ್ಮದ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ರೋಸ್ ವಾಟರ್ ಅನ್ನು ಕೊಂಡುಕೊಳ್ಳುವಾಗ ಉತ್ಕೃಷ್ಟ ಗುಣಮಟ್ಟದನ್ನೇ ಆಯ್ಕೆ ಮಾಡಿಕೊಳ್ಳಿ. ಇಲ್ಲದಿದ್ದರೆ ಕಳಪೆ ಮಟ್ಟದ ರೋಸ್ ವಾಟರ್ ಚರ್ಮಕ್ಕೆ ಹಾನಿಯುಂಟು ಮಾಡಬಹುದು ಎಚ್ಚರ.