ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಅಡುಗೆ ಮನೆ ಕೆಲಸಕ್ಕೆ ಕೊನಯೇ ಇಲ್ಲ ಬಿಡಿ. ಇದೊಂತರ ನಿರಂತರವಾದ ಕೆಲಸ. ಒಂದು ಕೆಲಸ ಆಯ್ತು ಎನ್ನುವಾಗ ಮತ್ತೊಂದು ಕೆಲಸ ಬಂದೇ ಬಿಡುತ್ತದೆ. ಎಷ್ಟೇ ಕೆಲಸ ಮಾಡಿದರೂ ಮುಗಿಯುವುದೇ ಇಲ್ಲ ಎಂದು ಹೆಣ್ಣುಮಕ್ಕಳು ಹೇಳಿಕೊಂಡಿರುವುದನ್ನು ಅಲ್ಲಲ್ಲಿ ಕೇಳಿರುತ್ತೀರಿ. ಅಂತವರಿಗೆ ಕೆಲ ಉಪಯುಕ್ತ ಟಿಪ್ಸ್. ತಪ್ಪದೇ ಫಾಲೋ ಮಾಡಿ ಆಗ ನೋಡಿ ನಿಮ್ಮ ಅಡುಗೆ ಮನೆ ಕೆಲಸ ಮತ್ತಷ್ಟು ಸುಲಭ ಹಾಗು ಬೇಗನೆ ಆಗುತ್ತದೆ.
ಹಾಲು ಕಾಯಿಸುವಾಗ ಕೆಲವೊಮ್ಮೆ ಎಷ್ಟೇ ಜಾಗರೂಕರರಾಗಿದ್ದೂ ಹಾಲು ಕ್ಷಣಾರ್ಧದಲ್ಲಿ ಉಕ್ಕಿ ಹೋಗುತ್ತದೆ. ಇದಕ್ಕೆ ಒಂದು ಬೆಸ್ಟ್ ಉಪಾಯವಿದೆ. ಹಾಲು ಕಾಯಿಸುವಾಗ ಅದರ ಮೇಲೆ ಒಂದು ಮರದ ಸೌಟು ಇಡಿ. ಆಗ ಹಾಲು ಉಕ್ಕಿ ಚೆಲ್ಲುವುದಿಲ್ಲ. ಈ ಟ್ರಿಕ್ ಮಹಿಳೆಯರಿಗೆ ತುಂಬಾ ಉಪಯುಕ್ತ.
ಆಲುಗಡ್ಡೆ ಸಿಪ್ಪೆ ಸುಲಿಯಲು ಇನ್ನುಮುಂದೆ ಕಷ್ಟ ಪಡಬೇಕಿಲ್ಲ. ಆಲುಗಡ್ಡೆ ಬೇಯಿಸುವಾಗ ಒಂದರಲ್ಲಿ ಎರಡು ಭಾಗ ಮಾಡಿ ಕತ್ತರಿಸಿ ಬೇಯಿಸಲು ಇಡಿ. ಇನ್ನು ಆಲುಗಡ್ಡೆ ಬೆಂದ ನಂತರ ತಣ್ಣೀರಿಗೆ ಅದನ್ನು ವರ್ಗಾಯಿಸಿ ಹೀಗೆ ಮಾಡಿದರೆ ಸುಲಭವಾಗಿ ಹಾಗು ಕಡಿಮೆ ಸಮಯದಲ್ಲಿ ಸಿಪ್ಪೆ ಸುಲಿಯಬಹುದು.
ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಒಗ್ಗರಣೆ ಹಾಕುವಾಗಲೇ ಬೆಳ್ಳುಳ್ಳಿ ಸಿಪ್ಪೆ ಬಿಡಸುತ್ತಾ ನಿಲ್ಲುವುದು ಕೆಲವರಿಗೆ ಹಿಂಸೆ ಎನಿಸಿಬಿಡುತ್ತದೆ. ಅಂತವರಿಗೆ ಒಂದು ಉಪಾಯವೆಂದರೆ ನೀವು ಸಂಜೆ ಖಾಲಿ ಇದ್ದಾಗ ಅಥವಾ ಟಿವಿ ನೋಡುತ್ತಿದ್ದಾಗ ಒಂದು ಮರದಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿಕೊಂಡು ಅದಕ್ಕೆ ಅರ್ದ ಸ್ಪೂನ್ ಅಡುಗೆ ಎಣ್ಣೆ ಮತ್ತು ಒಂದು ಸ್ಪೂನ್ ಜೋಳದ ಅಥವಾ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲಿಸಿ. ಆಗ ನೋಡಿ ಬೆಳ್ಳುಳ್ಳಿ ಸಿಪ್ಪೆ ಬೇಗನೇ ಸುಲಿಯಬಹುದು.
ಮೊಟ್ಟೆ ಬೇಯಿಸಿದ ನಂತರ ಸಿಪ್ಪೆ ತೆಗಯಲು ಕಲವರು ಹರಸಾಹಸ ಪಡುತ್ತಾರೆ. ಅದಕ್ಕೆ ಒಂದು ಟ್ರಿಕ್ ಇದೆ ನೋಡಿ, ಮೊಟ್ಟೆ ಸಂಪೂರ್ಣವಾಗಿ ಬೆಂದ ಮೇಲೆ ಅದನ್ನು ತಣ್ಣನೆಯ ನೀರಿನಲ್ಲಿ ಹಾಕಿ ಅಥವಾ ಹರೆಯುವ ನೀರಿನ ನಲ್ಲಿಯ ಕೆಳಗೆ ಇಡಿ. ನಂತರ ಒಂದು ಬಾಕ್ಸ್‌ನಲ್ಲಿ ಮೊಟ್ಟೆ ಹಾಕಿ ಜೋರಾಗಿ ಅಲ್ಲಾಡಿಸಿ. ಹೀಗೆ ಮಾಡಿದರೆ ಸುಲಭವಾಗಿ ಮೊಟ್ಟೆ ಸಿಪ್ಪೆ ಬಾಕ್ಸ್‌ನಲ್ಲಿಯೇ ತನ್ನಂತಾನೇ ಬಿಚ್ಚಿಕೊಳ್ಳುತ್ತದೆ.
ಮಸಾಲಾ ಪದಾರ್ಥಗಳನ್ನು ಸರಿಯಾಗಿ ಸೂಕ್ತ ಕ್ರಮದಲ್ಲಿ ಇರಿಸಿ. ಎಲ್ಲ ಮಸಾಲಾ ಪದಾರ್ಥಗಳಿಗೆ ಆದಷ್ಟು ಪ್ರತ್ಯೇಕವಾದ ಕಂಟೇನರ್‌ಗಳು ಇರಲಿ. ಇನ್ನು ಉಪ್ಪು ಖಾರ ಮಸಾಲಾ ಡಬ್ಬಗಳು ಅಡುಗೆ ಮಾಡುವಾಗ ಕೈಗೆಟುಕುವ ರೀತಿಯಲ್ಲಿ ಜೋಡಿಸಿ ಇಡಿ. ಹೀಗೆ ಮಾಡಿದರೆ ಅಡುಗೆ ಮಾಡುವಾಗ ನಿಮಗೆ ಸುಲಭವಾಗುತ್ತದೆ.
ಇನ್ನು ಕೆಲ ಟಿಪ್ಸ್‌ಗಳು ಹೀಗಿವೆ. ಆದಷ್ಟು ಪಾತ್ರೆಗಳನ್ನು ಆಗ್ಗಿಂದಾಗಲೇ ತೊಳೆದು ಹಾಕಿ. ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ತೊಳಿದೇ ಇಡಿ. ಅಡುಗೆ ಮಾಡುವಾಗ ಸುಲಭವಾದೀತು. ವಾರಕ್ಕೆ ಆಗುವಷ್ಟು ಶುಂಠಿ ಬೆಳ್ಳುಳ್ಳು ಪೇಸ್ಟ್ ಮಾಡಿಟ್ಟುಕೊಳ್ಳಿ. ಈರುಳ್ಳಿ ಹೆಚ್ಚುವ ಮುನ್ನ ಅರ್ಧ ಕಟ್ ಮಾಡಿ ನೀರಿನಲ್ಲಿ ಎರಡು ನಿಮಿಷ ನೆನಸಿ ಇಡಿ. ಹೀಗೆ ಮಾಡಿದರೆ ಈರುಳ್ಳಿ ಕತ್ತರಿಸುವಾಗ ಸಿಪ್ಪೆ ಬೇಗನೇ ಸುಲಿಯಬಹುದು ಮತ್ತು ಕಣ್ಣೀರು ಬರುವುದು ಕಡಿಮೆಯಾಗುತ್ತದೆ.