ಕೆಎನ್ಎನ್ಡಿಜಿಟಲ್ಡೆಸ್ಕ್: ಮೊಸರು ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಮೊಸರಿನಲ್ಲಿ ಅನೇಕ ಬ್ಯೂಟಿ ಟಿಪ್ಸ್ ಹಾಗು ಬ್ಯೂಟಿ ಸೀಕ್ರೇಟ್ಗಳಿವೆ. ಸೌಂಧರ್ಯವರ್ಧಕವಾಗಿ ಮೊಸರಿನ ಬಳಕೆ ಅಜ್ಜಿ ಕಾಲದಿಂದಲೂ ಇದೆ. ಹೆಚ್ಚು ಮೊಸರು ಸೇವನೆ ಮಾಡಿದರೆ ಚರ್ಮ ಹೊಳಯುತ್ತದೆ. ಇದರಲ್ಲಿರುವ ಉತ್ತಮ ಪೋಷಕಾಂಶಗಳು ಚರ್ಮದ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಮೊಸರಿನ ಸೇವನೆ ಜೊತೆ ಮೊಸರಿನ ಫೇಸ್ ಪ್ಯಾಕ್ ಬಳಕೆ ಹಾಗು ಅದರ ಉಪಯೋಗಗಳನ್ನು ಮುಂದೆ ತಿಳಿದುಕೊಳ್ಳೋಣ.
ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ, ಲ್ಯಾಕ್ಟಿಕ್ ಆಮ್ಲ ಹೇರಳವಾಗಿದೆ ಹಾಗಾಗಿ ಇದನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲು ತಜ್ಞರು ಸಲಹೆ ನೀಡುತ್ತಾರೆ ಈ ಎಲ್ಲ ಅಂಶಗಳು ಚರ್ಮಕ್ಕೆ ಹೊಳಪನ್ನು ನೀಡುತ್ತದೆ, ಸುಕ್ಕು, ಟ್ಯಾನ್ ಸ್ಕಿನ್ ನಿವಾರಣೆ ಮಾಡುತ್ತದೆ. ಮೊಡವೆಗಳಿಗೆ ರಾಮಬಾಣ ಇದಾಗಿದೆ. ಬ್ಯೂಟಿ ಪಾರ್ಲರ್ಗಳಲ್ಲಿ ಮೊಸರನ್ನು ಮಾಯಿಶ್ಚರೈಸರ್ ಆಗಿ ಹಾಗು ಕ್ಲೈಂಜರ್ ಆಗಿ ಬಳಸುತ್ತಾರೆ.
ಮೊಸರಿನಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕ ತುಂಬಾ ಪೂರಕವಾಗಿವೆ. ಇದರಲ್ಲಿರುವ ಸತು, ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಬಿ ಚರ್ಮಕ್ಕೆ ಯವ್ವನ ನೀಡುತ್ತದೆ. ಹಾಗಾಗಿ ಮೊಸರನ್ನು ಫೇಸ್ ಮಾಸ್ಕ್ಗಳಲ್ಲಿ ಮತ್ತು ಹೇರ್ ಪ್ಯಾಕ್ಗಳಲ್ಲೂ ಬಳಸುತ್ತಾರೆ. ಹೇರ್ ಪ್ಯಾಕ್ನಲ್ಲಿ ಮೊಸರನ್ನು ಬಳಸುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗಿ ಕೂದಲು ದಟ್ಟವಾಗಿ ಬೆಳಯುತ್ತದೆ.
ಮುಖ್ಯವಾಗಿ ಮೊಸರಿನ ಬಳಕೆ ಮೊಡವೆ, ಚರ್ಮದ ಸುಕ್ಕು ಶುಷ್ಕತೆಯ ವಿರುದ್ಧ ಹೋರಾಡುವ ಕೆಲಸ ಮಾಡುತ್ತದೆ. ಹಾಗು ಚರ್ಮ ಬಿಳಿಯಾಗಿಸಿ ಹೋಳೆಯುವಂತೆ ಮಾಡುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಚರ್ಮದ ಮೇಲಿನ ಎಂತಹ ಹಳೆಯ ಕಲೆಗಳನ್ನು ನಿಧಾನವಾಗಿ ಕಡಿಮೆ ಮಾಡುವ ಶಕ್ತಿ ಇದೆ.
ಮೊಸರು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಸತು ಅಂಶ ಚರ್ಮದ ಎಲ್ಲಾ ರೀತಿಯ ಅಲರ್ಜಿಯಿಂದ ಪಾರು ಮಾಡುತ್ತದೆ. ಚರ್ಮದಲ್ಲಿನ ಜಿಡ್ಡಿನಾಂಶವನ್ನು ಮೊಸರು ತೆಗೆದು ಹಾಕುತ್ತದೆ.
ಚರ್ಮದ ಎಣ್ಣೆ ಅಥವಾ ಜಿಡ್ಡಿನಾಂಶ ಇರುವವರು ಮೊಸರಿನ ಸೇವನೆ ಹೆಚ್ಚು ಮಾಡಬೇಕು. ಹಾಗು ಮೊಸರಿನ ಪ್ಯಾಕ್ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ಬ್ಯಾಕ್ಟೀರಿಯಾಯುಕ್ತ ಮೊಡವೆಗಳನ್ನು ಬೇಗನೆ ವಾಸಿ ಮಾಡುತ್ತದೆ.
ಒತ್ತಡದ ಅಥವಾ ನಿದ್ರಾಹೀನತೆ ಕಾರಣದಿಂದಾಗಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆಗಳಾಗಿದ್ದರೆ ಮೊದರು ಅದಕ್ಕೆ ಸೂಕ್ತ ಪರಿಹಾರ ನೀಡುತ್ತದೆ. ಮೊಸರನ್ನು ಹೆಚ್ಚಾಗಿ ಸೇವಿಸಿದರೆ ಕಣ್ಣಿನ ಕೆಳಗಿನ ಕಲೆ ನಿವಾರಣೆಯಾಗುತ್ತದೆ. ನಿಮಗಿದು ಗೊತ್ತಿರಲಿ ಮೊಸರಿಗೆ ಚರ್ಮದ ಮೇಲಿನ ಕಪ್ಪು ಕಲೆಯನ್ನು ಹೋಗಲಾಡಿಸುವ ಅಘಾದ ಶಕ್ತಿ ಇದೆ.
ಸೂರ್ಯನ ಅತಿಯಾದ ಶಾಖದಿಂದ ನಿಮ್ಮ ಮೈಬಣ್ಣ ಅಥವಾ ಮುಖದ ಬಣ್ಣ ಸುಕ್ಕಾಗಿ ಕಪ್ಪಾದರೆ ಅದಕ್ಕೆ ಬೆಸ್ಟ್ ಮನೆನದ್ದು ಎಂದರೆ ಮೊಸರು. ಸನ್ ಬರ್ನ್ ಆದ ಜಾಗಕ್ಕೆ ಮೊಸರು ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಂಡು ನಂತರ ತೊಳೆಯಿರಿ. ಸುಕ್ಕು ಕಲೆ ಬೇಗ ವಾಸಿಯಾಗುತ್ತದೆ. ಮತ್ತೊಂದು ವಿಷಯ, ಕೆಲವರಿಗೆ ಮೊಸರಿನ ಅಲರ್ಜಿ ಇರುತ್ತದೆ ಅಂತವರು ಸ್ವ ಪರೀಕ್ಷೆ ಮಾಡಿಕೊಂಡು ನಂತರ ಮೊಸರನ್ನು ಬಳಸಲು ಅಡ್ಡಿಯಿಲ್ಲ. ಇಲ್ಲದ್ದಿದ್ದರೆ ಮೊಸರು ಕೆಲವೊಮ್ಮೆ ನಿಮಗೆ ಹಾನಿಯುಂಟು ಮಾಡಬಹುದು ಎಚ್ಚರ.