ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಾಮಾನ್ಯವಾಗ ದಾಂಪತ್ಯ ಜೀವನ ಹೊಸದರಲ್ಲಿ ಇದ್ದ ಹಾಗೆ ಕಾಲ ಕಳೆದ ಹಾಗೆ ಇರುವುದಿಲ್ಲ. ಬರಬರುತ್ತಾ ದಾಂಪತ್ಯದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ. ಹಾಗೆಯೇ ಲೈಂಗಿಕ ಆಸಕ್ತಿಯಲ್ಲೂ ಕೂಡ ಅಷ್ಟೇ, ಮೊದಲಿದ್ದ ಆಸಕ್ತಿ ದಿನಕಳೆದಂತೆ ಇರುವುದಿಲ್ಲ. ಆ ಕಾರಣಗಳು ಈ ಮುಂದಿನಂತೆ ಇರಬಹುದು.
ಲೈಂಗಿಕ ಆಸಕ್ತಿ ಕಡಿಮೆಯಾಗಲು ಮನಸ್ಸಿನ ಅಸಮಧಾವನೂ ಒಂದು ಕಾರಣವಾಗಬಹುದು. ಇದರ ಹಿಂದೆ ಕೆಲ ಕಾರಣಗಳಿರಬಹುದು. ಮೊದಲು ಆ ವಿಷಯಗಳನ್ನು ತಿಳಿದುಕೊಳ್ಳಿ. ನಿಮ್ಮ ಸಂಗಾತಿ ಲೈಂಗಿಕವಾಗಿ ಆಸಕ್ತಿ ತೋರಿಸುತ್ತಿಲ್ಲ ಎಂತಾದರೆ ಅದಕ್ಕೆ ಕಾರಣ ಹುಡುಕಿ. ಒಬ್ಬರಿಗೊಬ್ಬರು ಕೂತು ಮಾತನಾಡಿ.
ಎಲ್ಲರೂ ಒಂದೇ ರೀತಿಯಾಗಿ ಲೈಂಗಿಕ ಆಸಕ್ತಿ ಹೊಂದಿರುವುದಿಲ್ಲ. ಎಲ್ಲ ಸಮಯದಲ್ಲೂ ಒಂದೇ ಬಗೆಯ ಲೈಂಗಿಕ ಆಸಕ್ತಿ ಹೊಂದಿರಲು ತುಸು ಕಷ್ಟ. ಕೆಲಸದ ಒತ್ತಡ. ಇನ್ನಾವುದೋ ಕಾರಣವಾಗಿರಬಹುದು. ಹಾಗಾಗಿ ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮುಕ್ತವಾಗಿ ಚರ್ಚಿಸಿ. ಒತ್ತಾಯಪೂರ್ವಕವಾದ ಲೈಂಗಿಕ ಸಂಪರ್ಕ ಒಳ್ಳೆಯದಲ್ಲ.
ಕೆಲವೊಮ್ಮೆ ಮಹಿಳೆಯರಿಗೆ ಲೈಂಗಿಕತೆಯ ಮೇಲೆ ಆಸಕ್ತಿ ಕುಗ್ಗುತ್ತಾ ಹೋಗುತ್ತದೆ. ಕಾರಣ ಆಕೆ ಮನೆ ಮತ್ತು ಆಫೀಸ್ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿರುತ್ತಾಳೆ. ಹೀಗೆ ಎರಡೂ ಕೆಲಸವನ್ನೂ ಇಟ್ಟಿಗೆ ನೋಡಿಕೊಳ್ಳುವ ಹೊತ್ತಿಗೆ ಆಕೆ ಮಾನಸಿಕವಾಗಿ ಹಾಗು ದೈಹಿಕವಾಗಿ ಒತ್ತಡಕ್ಕೆ ಒಳಗಾಗಬಹುದು. ಈ ಕಾರಣದಿಂದ ಆಕೆಗೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಾ ಬರುವ ಸಾಧ್ಯತೆ ಹೆಚ್ಚು. ಇನ್ನು ಕೆಲವೊಮ್ಮೆ ಪುರುಷರೂ ಸಹ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಲೈಂಗಿಕ ಆಸಕ್ತಿ ಕಳೆದುಕೊಳ್ಳುತ್ತಾರೆ.
ದಂಪತಿಗಳ ಮಧ್ಯೆ ಭಾವನೆಗಳು ಅಂದರೆ ಭಾವನಾತ್ಮಕ ಸಂಬಂಧಗಳ ಸಂಪರ್ಕಗಳು ತುಂಬಾ ಮುಖ್ಯವಾಗುತ್ತವೆ. ಒಂದೊಮ್ಮೆ ಇಬ್ಬರ ನಡುವೆಯೂ ಭಾವನೆಗಳು ಇಲ್ಲದೇ ಇದ್ದಾಗ. ಇಬ್ಬರೂ ಭಾವನಾತ್ಮವಾಗಿ ದೂರ ವಿದ್ದಾಗ ಇಬ್ಬರಲ್ಲೂ ಲೈಂಗಿಕ ಆಸಕ್ತಿ ಕುಗ್ಗುತ್ತಾ ಹೋಗುತ್ತದೆ. ಹಾಗಾಗಿ ಸಂಗಾತಿಗಳು ಪರಸ್ಪರ ಮನಸ್ಸು ಬಿಚ್ಚಿ ಮಾತನಾಡಿ ಭಾವನಾತ್ಮಕವಾಗಿ ಹತ್ತಿರವಾದಾಗಲೇ ಇಬ್ಬರಲ್ಲೂ ಉತ್ತಮ ಲೈಂಗಿಕ ಆಸಕ್ತಿ ಬರಲು ಸಾಧ್ಯ.
ದಾಂಪತ್ಯದಲ್ಲಿ ಜಗಳ ಕಾಮನ್, ಆದರೆ ಇದು ಅತಿರೇಕಕ್ಕೆ ಹೋಗಬಾರದು. ಕೆಲವೊಮ್ಮೆ ಸಣ್ಣಪುಟ್ಟ ಜಗಳಗಳು ಇಬ್ಬರನ್ನೂ ಮಾನಸಿಕವಾಗಿ ಹಾಗು ದೈಹಿಕವಾಗಿ ದೂರವಿರುವಂತೆ ಮಾಡುತ್ತವೆ. ಇಂತಹ ನೆಗೆಟಿವ್ ಆಲೋಚನೆಗಳಿದ್ದಾಗ ನಿಮ್ಮವರ ಮೇಲೆ ಲೈಂಗಿ ಆಸಕ್ತಿ ಹೇಗೆ ಬರಲು ಸಾಧ್ಯ..? ಹಾಗಾಗಿ ನಿಮ್ಮ ನಿಮ್ಮ ವಿರಸಗಳನ್ನು ಸರಸದೊಂದಿಗೆ ಮುಕ್ತಿಗೊಳಿಸಿ.
ಇನ್ನು ಕೆವೊಮ್ಮೆ ದೇಹದ ಅನಾರೋಗ್ಯ ಕೂಡ ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತದೆ. ಯಾವಾಗಲೂ ಅನಾರೋಗ್ಯದಿಂದ ಬಳಲುವುದು. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುವುದು. ಹೀಗೆ ಸಂಗಾತಿಗಳಲ್ಲಿನ ಅನಾರೋಗ್ಯ ಸಮಸ್ಯೆ ಕೂಡ ಲೈಂಗಿಕ ಆಸಕ್ತಿ ಕುಗ್ಗಿಸುತ್ತದೆ. ತಮ್ಮ ರೋಗದಿಂದ ಮುಕ್ತವಾಗಲು ನೋಡುವವರಿಗೆ, ರೋಗದ ಭಾದೆ ತಾಳದೇ ಇರುವವರಿಗೆ ಲೈಂಗಿಕ ಆಸಕ್ತಿ ಬರುವುದೇ ಇಲ್ಲ. ಹಾಗಾಗಿ ನಿಮ್ಮನ್ನು ಆದಷ್ಟು ರೋಗಮುಕ್ತರನ್ನಾಗಿ ಮಾಡಿಕೊಂಡು, ಸಧೃಢವಾಗಿದ್ದು. ಉತ್ತಮ ಲೈಂಗಿಕ ಜೀವನವನ್ನು ಪಡೆದುಕೊಳ್ಳಿ .
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.