ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಿವಿ ನೋವು ಒಮ್ಮೆಯಾದರೂ ನಿಮಗೆ ಬಂದು ಹೋಗಿರುತ್ತದೆ. ಸಾಮಾನ್ಯವಾಗಿ ಈ ನೋವು ಹೆಚ್ಚು ರಾತ್ರಿಹೊತ್ತು ಕಾಟ ಕೊಡುತ್ತದೆ. ಕಿವಿ ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದಾಗ, ಕಿವಿಯಲ್ಲಿ ನೀರು ತುಂಬಿಕೊಂಡಾಗ, ಅಥವಾ ಹೊರಗಿನ ಧೂಳು. ಹೊಗೆ ಸೇರಿಕೊಂಡು ಕಿವಿಯಲ್ಲಿ ಬ್ಯಾಕ್ಟೀರಿಯ ಉಂಟಾಗಿ ಅಥವಾ ಕೆಲವೊಮ್ಮೆ ಫಂಗಸ್ ಉಂಟಾಗಿ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿಗೆ ಸೊಂಕು ಉಂಟಾಗಿ ನಿಮಗೆ ಹೆಚ್ಚು ನೋವು ಕೊಟ್ಟಾಗೆ ಈ ಕೆಳಗಿನ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ. ನಾವು ಹೇಳುವ ಮನೆಮದ್ದನ್ನು ಟ್ರೈ ಮಾಡಿದ ಮೇಲೆಯೂ ನಿಮಗೆ ಇನ್ನೂ ಹೆಚ್ಚು ಕಿವಿ ನೋವು ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
ಸಾಸಿವೆ ಎಣ್ಣೆ: ಕೆವೊಮ್ಮೆ ಸಾಸಿವೆ ಎಣ್ಣೆ ಅಷ್ಟಾಗಿ ಲಭ್ಯ ಇರುವುದಿಲ್ಲ. ಒಂದು ವೇಳೆ ಸಾಸಿವೆ ಎಣ್ಣೆ ನಿಮ್ಮಗೆ ಲಭ್ಯವಿದ್ದರೆ, ನಿಮಗೆ ಕಿವಿ ನೋವು ಕಾಣಿಸಿಕೊಂಡಾಗ ಈ ಸಾಸಿವೆ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ಎರಡು ಹನಿ ನೋವಿದ್ದ ಕಿವಿ ಹೊಳ್ಳಕ್ಕೆ ಹಾಕಿದರೆ ಕಿವಿ ನೋವು ಶಮನವಾಗುತ್ತದೆ.
ಬೆಳ್ಳುಳ್ಳಿ ರಸ: ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿವೆ. ಕಿವಿಗೆ ಸೋಂಕು ತಗುಲಿ ಕಿವಿ ನೋವಾದಾಗ ಬೆಳ್ಳುಳ್ಳು ಜಜ್ಜಿ, ಇದರ ರಸವನ್ನು ಕಿವಿಗೆ ಹಿಂಡಿಕೊಂಡರೆ ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣಗಳು ಕಿವಿಯಲ್ಲಾದ ಸೋಂಕನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
ಈರುಳ್ಳಿ ರಸ: ಈರುಳ್ಳು ರಸ ಅನೇಕ ರೋಗಗಳಿಗೆ ಮನೆಮದ್ದಾಗಿದೆ. ಚಳಿಗಾಲದಲ್ಲಿ ಕಿವಿನೋವು ಕಾಣಿಸಿಕೊಂಡರೆ ಒಂದರಡು ಹನಿ ಈರುಳ್ಳಿ ರಸ ಕಿವಿಗೆ ಹಾಕಿಕೊಂಡರೆ ಕಿವಿ ನೋವು ಕಡಿಮೆಯಾಗುತ್ತದೆ. ಎಚ್ಚರ ಈರುಳ್ಳಿ ರಸ್ ಕಿವಿಗೆ ಹಾಗುವ ಮುನ್ನ ಆ ರಸ ತುಂಬಾ ಶುಭ್ರವಾಗಿರಬೇಕು. ಇಲ್ಲದಿದ್ದರೆ ಕಿವಿಯ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಉಪ್ಪನ್ನು ಬಿಸಿ ಮಾಡಿ ಅದನ್ನು ಬಟ್ಟೆಗೆ ಕಟ್ಟಿ ನೋವಿದ್ದ ಕಿವಿಯ ಹತ್ತಿರ ಬಿಸಿ ಇದ್ದಾಗಲೇ ಅದನ್ನು ಮುಟ್ಟಿಸಿ. ಉಪ್ಪಿನ ಬಟ್ಟೆಯಿಂದ ಹೊರಹೊಮ್ಮುವ ಶಾಖ ನೋವನ್ನು ನಿವಾರಣೆಗೊಳಿಸುತ್ತದೆ. ಹಾಗು ಶಾಖಕ್ಕೆ ಕಿವಿಯಲ್ಲಿರು ಕಲ್ಮಷ ಕರಿಗಿ ಹೊರಬರುತ್ತದೆ. ಇರಿಂದಲೂ ನೋವು ನಿಧಾನವಾಗಿ ಕಡಿಮೆಯಾಗುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.