ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಆಲುಗಡ್ಡೆ ಜಾತಿಗೆ ಸೇರಿಸ ಸಿಹಿ ಗೆಣಸನ್ನು ಸಿಹಿ ಆಲುಗಡ್ಡೆ ಎಂತಲೂ ಕರೆಯುತ್ತಾರೆ. ಸಂಕ್ರಾತಿಯ ಹಬ್ಬದ ಸಮಯದಲ್ಲಿ ಸಿಹಿ ಗೆಣಸು ಹೇರಳವಾಗಿ ಸಿಗುತ್ತವೆ. ಈ ಸಮಯದಲ್ಲಿ ಗೆಣಸಿನ ಬಗೆ ಬಗೆಯ ಅಡುಗೆ ಮಾಡಿ ಸವಿದಿರುತ್ತೀರಿ ಆದರೆ ಚಳಿಗಾಲದಲ್ಲಿ ನೀವು ಸೇವಿಸುವ ಈ ಸಿಹಿ ಗೆಣಸಿನ ಪ್ರಯೋಜನೆಗಳು ಅನೇಕ ಅನ್ನೋ ವಿಷಯವೂ ನಿಮಗೆ ತಿಳಿದಿರಲಿ. ಸಿಹಿ ಗೆಣಸು ಅನೇಕ ಪೋಷಕಾಂಶಗಳನ್ನು ಹೊಂದಿದ್ದು. ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಸಿಹಿ ಗೆಣಸಿನಲ್ಲಿ ಫೈಬರ್, ಅನೇಕ ಜೀವಸತ್ವಗಳು, ಮತ್ತು ಖನಿಜಗಳು ಹೇರಳವಾಗಿವೆ. ವಿಟಮಿನ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಸಹ ಇದರಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಇಷ್ಟೆಲ್ಲಾ ಪೋಷಕಾಂಶ ಇರುವ ಸಿಹಿ ಗೆಣಸಿನ ಸೇವನೆ ಮಾಡಿದರೆ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ವಯಸ್ಸಾದವರಿಗೆ ಸಿಹಿ ಗೆಣಸಿನ ಸೇವನೆ ತುಂಬಾ ಪ್ರಯೋಜನಕಾರಿ. ಇದು ವಯಸ್ಕರ ಹೃದ್ರೋಗ ಸಮಸ್ಯೆಗಳನ್ನು ತಡೆಹಿಡಿಯುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯ ಕಾಪಾಡುತ್ತದೆ. ಆಂಟಿ ಆಕ್ಸಿಡೆಂಟ್‌ಯುಕ್ತ ಆಹಾರ ಸೇವನೆ ನಿಮ್ಮ ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿದೆ.
ಗೆಣಸಿನಲ್ಲಿರುವ ಹೇರಳವಾದ ಫೈಬರ್ ಅಂಶ ಕರುಳಿನ ಆರೋಗ್ಯವನ್ನು ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಇದರ ಸೇವನೆ ಜೀರ್ಣಕ್ರಿಯೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ. ಸುಲಭವಾಗಿ ಹಾಗು ಮೃದುವಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ಅಷ್ಟೆ ಅಲ್ಲದೇ ಸಿಹಿ ಗೆಣಸು ಕರುಳಿನ ಒಳಪದರದ ಜೀವಕೋಶಗಳನ್ನು ಉತ್ತೇಜಿಸಿ ಮತ್ತು ಅವುಗನ್ನು ಆರೋಗ್ಯವಾಗಿರವಂತೆ ನೋಡಿಕೊಳ್ಳುತ್ತದೆ.
ಸಿಹಿ ಗೆಣಸು ವಿವಿಧ ಬಗೆಯ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಕ್ಯಾನ್ಸರ್ ವಿರುದ್ಧ ಹೋರಾಡಲು ತುಂಬಾ ಸಹಾಯ ಮಾಡುತ್ತವೆ. ಹಾಗು ಇದು ಮೂತ್ರಕೋಶ, ಕೊಲೊನ್, ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಕೆಲ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸಂಶೋಧನೆ ಮೂಲಕ ತಿಳಿದಬಂದ ವಿಷಯವಾಗಿದೆ.