ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಮರ್ಪಕವಾದ ನೀರು ಸೇವನೆ ಉತ್ತಮ ಆರೋಗ್ಯದ ಗುಟ್ಟು. ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಟ ಎಂಟು ಗ್ಲಾಸ್ ನೀರು ಕುಡಿಯಲೇ ಬೇಕು. ನೀರು ಸೇವನೆ ದೇಹದ ವಿಷಕಾರಿ ಅಂಶಗಳು ಆಚೆದೂಡುತ್ತವೆ. ಇನ್ನು ಬೆಳಗಿನ ಜಾವ ನಿತ್ಯಕರ್ಮಗಳನ್ನು ಮುಸಿಕೊಂಡ ನಂತರ ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರು ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೆ ಇನ್ನಿಲ್ಲದ ಚಮತ್ಕಾರ ಆಗುತ್ತದೆ. ಹೀಗೆ ನಿರಂತವಾಗಿ ಬೆಳಗ್ಗೆ ಒಂದು ಗ್ಲಾಸ್ ಬಿಸಿ ನೀರು ಸೇವಿಸುತ್ತಾ ಬನ್ನಿ, ನಿಮ್ಮ ದೇಹದ ಮೇಲಾಗುವ ಉತ್ತಮ ಪರಿಣಾಮಗಳನ್ನು ನೀವೇ ಕಂಡುಕೊಳ್ಳುವಿರಿ.
ಬಿಸಿ ನೀರು ಸೇವಿಸಿದರೆ ನಿಮ್ಮ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಲಭಗೊಳಿಸಿ ಮಲಬದ್ಧತೆ ಸಮಸ್ಯೆಯಿಂದ ದೂರ ಉಳಿಯುವಂತೆ ಮಾಡುತ್ತದೆ.
ಬಿಸಿ ನೀರು ಕುಡಿದಾಗ ನೀವು ಬೆವರಲು ಶುರು ಮಾಡುತ್ತೀರಿ. ಈ ಬೆವರಿನ ಮೂಲಕ ದೇಹದ ಕಲ್ಮಷ ಹೊರ ಹೋಗುತ್ತದೆ. ಬೆಚ್ಚಗಿನ ನೀರನ್ನು ನಿತ್ಯವೂ ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹೀಗೆ ಬಿಸಿ ನೀರು ಸೇವಿಸಿದರೆ ರಕ್ತನಾಳದಲ್ಲಿ ಅತ್ಯಧಿಕ ರಕ್ತಸಂಚಾರ ಉಂಟಾಗಿ ಚರ್ಮದ ಜೀವಕೋಶಗಳಿಗೆ ಪೌಷ್ಟಿಕ ಸತ್ವ ನೀಡುತ್ತದೆ. ಒಟ್ಟಾರೆ ಬಿಸಿ ನೀರಿನಿಂದ ಆರೋಗ್ಯಕರ ಚರ್ಮವನ್ನು ಪಡೆಯಬಹುದು. ಪ್ರತಿ ದಿನ ಬಿಸಿ ನೀರು ಸೇವಿಸಿದರೆ ಚರ್ಮ ಸದಾ ತಾಜಾತನದಿಂದ ಇರುತ್ತದೆ.
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿದರೆ ಕರುಳು ನೈಸರ್ಗಿಕವಾಗಿ ಶುದ್ಧವಾಗುತ್ತದೆ. ಹೀಗಾಗಿ ಕರುಳಿನ ಚಲನೆ ಉತ್ತಮವಾಗಿ ದೇಹದ ಅಂಗಾಗಗಳು ಸಹ ಸ್ವಚ್ಛವಾಗುತ್ತವೆ. ಹೀಗೆ ದಿನವೂ ಬಿಸಿ ನೀರು ಸೇವಿಸಿ ಇಡೀ ದೇಹದ ಒಳಭಾಗವನ್ನೆಲ್ಲಾ ಆರೋಗ್ಯವಾಗಿರಿಕೊಳ್ಳಬಹುದು.
ದಿನಕ್ಕೊಂದು ಬಾರಿ, ಅದು ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರು ಸೇವಿಸಿದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ದೇಹದ ಮೆಟಾಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ದೇಹದಲ್ಲಿ ಬೊಜ್ಜನ್ನು ಕಡಿಮೆ ಮಾಡಲು ದಿನಕ್ಕೆ ಒಂದು ಗ್ಲಾಸ್ ಬಿಸಿ ನೀರು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದೆಷ್ಟೋ ಜನ ಹೀಗೆಯೇ ತಮ್ಮ ದೇಹದ ತೂಕ ಇಳಿಸಿಕೊಂಡಿದ್ದಾರೆ. ಬೆಚ್ಚಗಿನ ನೀರಿಗೆ ಜೇನುತುಪ್ಪ ಅರ್ಧ ನಿಂಬೆ ರಸ ಹಾಕಿ ಕಲಿಸಿ ಕುಡಿದರೆ ದೇಹದ ತೂಕವನ್ನೂ ಮತ್ತಷ್ಟು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು.