ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೂದಲಿನ ಆರೈಕೆಯ ಬಗ್ಗೆ ಅದೆಷ್ಟೋ ಲೇಖನಗಳನ್ನು ಓದಿರುತ್ತೀರಿ. ಆದರೆ ನಾವಿಂದು ಹೇಳುವ ಕೂದಲಿನ ಆರೈಕೆಯ ಕೆಲ ಟಿಪ್ಸ್ ನಿಮ್ಮ ಜೀವನದುದ್ದಕ್ಕೂ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತವೆ. ನಾವು ಹೇಳುವ ಈ ಮುಂದಿನ ಟಿಪ್ಸ್ ಫಾಲೋ ಮಾಡಿ ಕೂದಲಿನ ಆರೋಗ್ಯ ಹೆಚ್ಚಿಸಿಕೊಳ್ಳಿ.
ಕೂದಲು ಹೆಣ್ಣಿನ ಸೌಂದರ್ಯದ ಒಂದು ಭಾಗ. ಸೊಂಪಾದ, ನೀಳವಾದ, ಹಾಗು ಉದ್ದ, ದಟ್ಟವಾದ ಕೂದಲು ಹೊಂದಿದ್ದರೆ ಅವರನ್ನು ಯಾರಾದರೂ ಒಮ್ಮೆ ತಿರುಗಿ ನೋಡಿಯೇ ನೋಡುತ್ತಾರೆ. ಇಂತವರು ನೋಡಲು ಸಿಗುವುದು ತೀರಾ ಅಪರೂಪ. ಬದಲಾದ ಜೀವನಶೈಲಿ ಹಾಗು ಒತ್ತಡ ಜೀವನ ಕೂದಲನ್ನು ತುಂಡಾಗಿಸಿವೆ. ಹಾಗಾಗಿ ಆರೋಗ್ಯಕರ ಕೂದಲನ್ನು ಪಡೆಯಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ಕೂದಲಿನ ಆರೋಗ್ಯಕ್ಕೆ ಮುಖ್ಯವಾದ ಅಂಶ ಎಂದರೆ ನಾವು ಬಳಸುವ ಎಣ್ಣೆ. ಹಾಗಾಗಿ ನೆತ್ತಿಗೆ ಶುಭ್ರವಾದ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಹೊರಗಡೆ ಸಿದ್ಧವಾಗಿ ಸಿಗುವ ಕೊಬ್ಬರಿಯಣ್ಣೆಗಿಂತ ಆದಷ್ಟು ಗಾಣದಲ್ಲಿ ಮಾಡಿದ ಗೊಬ್ಬರಿ ಎಣ್ಣೆ ಹಚ್ಚಿ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತದೆ. ಹಾಗು ನೆತ್ತಿಗೆ ಉತ್ತಮವಾದ ರಕ್ತ ಸಂಚಾರವಾಗುತ್ತದೆ.
ವಾರಕ್ಕೆರಡು ಬಾರಿ ಹರಳೆಣ್ಣೆ ಹಾಕಿ ಮಸಾಜ್ ಮಾಡಿಕೊಂಡು ಎರಡು ತಾಸು ಬಿಟ್ಟು ತಲೆ ತೊಳೆದುಕೊಳ್ಳಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದು ಅಜ್ಜಿ ಕಾಲದಿಂದಲೂ ಬಂದ ಉತ್ತಮ ಪದ್ಧತಿಯಾಗಿದೆ.
ಕೂದಲಿನ ಆರೈಕೆ ಮಾಡುವಲ್ಲಿ ದಾಲ್ಚಿನ್ನಿ ಕೂಡ ಉತ್ತಮ ಪ್ರಯೋಜನಕಾರಿ. ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೋಸಿ ತಣ್ಣಗಾದ ಮೇಲೆ ಕುಡಿಯಿರಿ. ಹೀಗೆ ಆಗಾಗ ಮಾಡುತ್ತಾಯಿರಿ. ಇದು ಚರ್ಮದ ಆರೈಕೆ ಹಾಗು ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ. ಹಾಗು ಈ ದಾಲ್ಚಿನ್ನಿ ನೀರು ಕರುಳನ್ನು ಶುದ್ಧಗೊಳಿಸುತ್ತದೆ. ಊಷ್ಣಮೈ ಇದ್ದವರು ಇದನ್ನು ನಿರಂತವಾಗಿ ಸೇವಿಸಬೇಡಿ. ಅಡ್ಡಪರಿಣಾಮಗಳಾಗುವ ಸಾಧ್ಯತೆ ಇರುತ್ತದೆ.
ಕೂದಲಿನ ಆರೋಗ್ಯ ಉತ್ತಮವಾಗಿರಬೇಕೆಂದರೆ ವಾರಕ್ಕೆ ಎರಡು ಬಾರಿ ಕಡ್ಡಾಯವಾಗಿ ತಲೆಸ್ನಾನ ಮಾಡಿ. ಕೆಲವೊಬ್ಬರು ಕೆಲಸದ ಒತ್ತಡ ಅಥವಾ ಸಮಯದ ಅಭಾವವೆಂದು ಹೇಳಿ ವಾರಕ್ಕೆ ಒಂದೇ ಬಾರಿ ತಲೆಸ್ನಾನ ಮಾಡುತ್ತಾರೆ. ಧೂಳು, ಪ್ರದೂಷಣೆಯಿಂದ ಕೂದಲು ಹಾಳಾಗಿರುತ್ತದೆ .ವಾರಗಟ್ಟಲೆ ತಲೆಸ್ನಾನ ಮಾಡದ್ದರೆ ಹೊಟ್ಟು ತುರಿಕೆ ಶುರುವಾಗಿ, ಕೂದಲಿನ ಆರೋಗ್ಯ ಹದಗೆಡುತ್ತದೆ.
ಕೂದಲು ಸೊಂಪಾಗಿ ಬೆಳೆಯಲು ಕೆಲ ಯೋಗಾಸನಗಳಿವೆ. ಹಾಗು ಧ್ಯಾನ ಮಾಡಿದರೂ ಕೂಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯೋಗ ಧ್ಯಾನ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡದಿಂದಲೂ ಕೂದಲಿನ ಸಮಸ್ಯೆ ಉಂಟಾಗುತ್ತದೆ ಎಂದು ಎಲ್ಲರಿಗೂ ತಿಳಿದೇ ಇದೆ. ಹಾಗಾಗಿ ಯೋಗ ಧ್ಯಾನದಂತಹ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಕೂದಲಿನ ಆರೈಕೆ ಮಾಡಿಕೊಳ್ಳಿ.
ಆರೋಗ್ಯಕರವಾದ ಸೊಂಪಾದ ಕೂದಲು ಪಡೆಯಲು ಹಸಿತರಕಾರಿ ಡ್ರೈ ಫ್ರೂಟ್ಸ್ ಸೇವಿಸಿ. ಫ್ರೋಜನ್ ಫುಡ್ ಬೇಡ. ಇನ್ನು ಹೆಚ್ಚು ರಾಸಾಯನಿಕಯುಕ್ತ ಶಾಂಫುಗಳ ಬಳಕೆ ಬಗ್ಗೆ ಎಚ್ಚರವಹಿಸಿ. ಆದಷ್ಟು ಕಿರಿಕಿರಿ ಒತ್ತಡಗಳಿಂದ ದೂರವಿದ್ದು, ಕೂದಲಿನ ಆರೈಕೆ ಕಾಪಾಡಿಕೊಳ್ಳಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.