ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತಲೆಸೋವು ಆಗಾಗ ಬಂದ ಹೋಗುವ ಸಣ್ಣ ಕಾಯಿಲೆ ಆದರೆ ತಲೆನೋವು ಬಂತೆಂದರೆ ಅಷ್ಟಿಷ್ಟು ಹಿಂಸೆ ಅಲ್ಲ. ಹಾಗಾಗಿ ಕೆಲವರು ತಲೆನೋವಿಗೆ ಪರಿಹಾರವೆಂದು ಕೆಲ ಪಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇವು ತಕ್ಷಣಕ್ಕೆ ಪರಿಹಾರ ಕೊಟ್ಟರೂ ಮುಂದೆ ಈ ತಲೆನೋವು ಮಾತ್ರೆಗಳು ದೇಹಕ್ಕೆ ದೊಡ್ಡ ಕುತ್ತು ತರುವ ಚಾನ್ಸಸ್ ಇರುತ್ತದೆ. ಅಂದರೆ ಇವುಗಳಿಂದ ಅಡ್ಡ ಪರಿಣಾಮಗಳೇ ಜಾಸ್ತಿ. ಹಾಗಾಗಿ ವೈದ್ಯರು ಹೇಳುವ ಪ್ರಕಾರ ತಲೆನೋವು ತನ್ನಷ್ಟಕ್ಕೆ ಬಂದು ಹೋಗಲಿ ಬಿಡಿ ಎಂದು ಸಲಹೆ ನೀಡುತ್ತಾರೆ.
ಸಾಂಪ್ರದಾಯಕ ಪದ್ಧತಿಯಲ್ಲಿ ತಲೆನೋವಿಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ. ಅಡುಗೆ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ತಲೆನೋವಿಗೆ ಪರಿಹಾರ ಕಂಡುಕೊಳ್ಳಬಹುದು.
ಪುದಿನಾದಲ್ಲಿ ಅನೇಕ ಔಷಧೀಯ ಗಿಡಮೂಲಿಕೆ ಇವೆ. ಇದನ್ನು ಅಡಿಗೆಯಲ್ಲಿ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತಪರಿಚಲನೆ ಸುಲಭಗೊಳಿಸುತ್ತದೆ. ನರಗಳ ನೋವು ಮತ್ತು ತಲೆನೋವಿಗೆ ಪುದಿನಾ ಉತ್ತಮ ಉತ್ತಮ ಹಾಗು ಬೇಗನೆ ಪರಿಹಾರ ನೀಡುತ್ತದೆ.
ನೈಸರ್ಗಿಕವಾದ, ಶುದ್ಧವಾದ ಪುದಿನಾ ಎಣ್ಣೆಯನ್ನು ಹಣೆಗೆ ಹಾಚ್ಚಿ ಮಸಾಜ್ ಮಾಡಿದರೆ ತಲೆನೋವು ಕೆಡಿಮೆಯಾಗುತ್ತದೆ. ಕೆಲಸದ ಒತ್ತಡದಿಂದ ಆಗುವ ತಲೆನೋವಿಗೆ ಪುದಿನಾ ಬೆಸ್ಟ್ ರಿಸಲ್ಟ್ ಕೊಡುತ್ತದೆ. ಆದರೆ ಎಳೆ ಚರ್ಮ. ಸೂಕ್ಷ್ಮ ಚರ್ಮ ಹಾಗು ಚಿಕ್ಕ ಮಕ್ಕಳು ಇದನ್ನು ಹಚ್ಚದೇ ಇದ್ದರೆ ಒಳ್ಳೆಯದು ಯಾಕೆಂದರೆ ಇದು ಚರ್ಮಕ್ಕೆ ಸ್ವಲ್ಪ ಉರಿ ಅನುಭವವನ್ನು ಕೊಡುತ್ತದೆ.
ಲವಂಗದಲ್ಲಿ ಆಂಟಿ ವೈರಸ್ ಗುಣಗಳಿದ್ದು, ನೈಸರ್ಗಿಕವಾಗಿ ತಲೆನೋವಿಗೆ ಶಮನ ನೀಡುತ್ತದೆ. ತಲೆನೋವು ಚಿಕಿತ್ಸೆಗೆ ಲವಂಗ ಮುಖ್ಯ ಪಾತ್ರ ವಹಿಸುತ್ತದೆ. ಲವಂಗವನ್ನು ಸ್ವಲ್ಪ ಸುಟ್ಟು ಅದನ್ನು ಒಂದು ಚಿಕ್ಕ ಶುಭ್ರವಾದ ತೆಳುವಾದ ಬಟ್ಟೆಯಲ್ಲಿ ಇಟ್ಟು ಗಂಟು ಕಟ್ಟಿ ಆಗಾಗ ಅದರ ವಾಸನೆ ತೆಗೆದುಕೊಳ್ಳುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ. ಹಾಗು ನಿಮ್ಮ ಶ್ವಾಸಕೋಶದ ಆರೋಗ್ಯಕ್ಕೂ ಇದು ಒಳ್ಳೆಯದು.
ಶೀತ ಕೆಮ್ಮು ಜ್ವರದಿಂದಲೂ ತಲೆನೋವಾದರೆ ಅದಕ್ಕೂ ನೈಸರ್ಗಿಕವಾಗಿ ಪರಿಹಾರವಿದೆ. ದಾಲ್ಚಿನ್ನಿಯಲ್ಲಿ ಆ ಗುಣವಿದೆ. ದಾಲ್ಚಿನ್ನಿಗೆ ಕುಟ್ಟಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಅಥವಾ ಪುದಿನಾ ಎಣ್ಣೆ ಹಾಕಿ ಪೇಸ್ಟ್ ರೂಪದಲ್ಲಿ ಮಾಡಿಕೊಳ್ಳಿ. ಇದನ್ನು ಶೀತ ಜ್ವದ ತಲೆನೋವಾದಾಗ ತಲೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ತಲೆನೋವು ಕಡಿಮೆಯಾದ ಮೇಲೆ ಆ ಪೇಸ್ಟ್ ಅನ್ನು ತೆಗೆಯಿರಿ. ನಿರಂತರವಾಗಿ ಗ್ರೀನ್ ಟೀ ಕುಡಿಯುವವರಿಗೆ ತಲೆ ನೋವು ಆಗುವು ಸಂಭವ ಕಡಿಮೆ. ಬೆಳಗಿನ ಜಾವ ಗ್ರೀನ್ ಟೀಗೆ ಒಂದರಡು
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.