ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಕಾರಾತ್ಮಕ ಆಲೋಚನೆಗಳು ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ಸದಾ ನಕಾರಾತ್ಮಕ ಯೋಚನೆ ಮಾಡಿದರೆ ನಮ್ಮ ಸುತ್ತಮುತ್ತಲೂ ಅದೇ ನೆಗೆಟಿವ್ ಎನರ್ಜಿ ನಿರ್ಮಾಣವಾಗುತ್ತವೆ. ನಾವು, ನಮ್ಮ ಮೂಡ್ ಹೇಗಿರುತ್ತದೆಯೋ ಹಾಗೆಯೆ ನಮ್ಮ ಸುತ್ತಲಿನ ವಾತಾವರಣ ಅವಲಂಬಿತವಾಗಿರುತ್ತದೆ. ಹಾಗಾಗಿ ನಾವು ಸದಾ ಸಕಾರಾತ್ಮಕವಾಗಿ ಅಂದರೆ ಒಳ್ಳೆಯ, ಉತ್ತಮ ಯೋಚನೆಗಳನ್ನು ಮಾಡಬೇಕು. ಇದರಿಂದ ನಮ್ಮ ಮನಸ್ಸು ಹಾಗು ಸುತ್ತಲಿನ ವಾತಾವರಣವೂ ಆರೋಗ್ಯವಾಗಿರುತ್ತದೆ.
ಇನ್ನು ನಮ್ಮ ಮನೆಯ ತುಂಬೆಲ್ಲ ಹಾಗು ಮನೆಮಂದಿ ಸದಾ ಸಕಾರಾತ್ಮಕ ಭಾವನೆ, ಯೋಜನೆಯಿಂದಿರಲು ವಾಸ್ತು ಶಾಸ್ತ್ರ ಕೆಲ ಸಲಹೆ ಸೂಚನೆಗಳನ್ನು ನೀಡಿದೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಆದಷ್ಟು ದೇವರ ಮನೆಯ ದೀಪ ಸದಾ ಉರಿಯುತ್ತಿರುವಂತೆ ನೋಡಿಕೊಳ್ಳಿ. ಒಂದು ವೇಳೆ ದೀಪ ಶಾಂತವಾದರೆ ಯಾವುದೇ ಆತಂಕ ಅಥವಾ ಗಾಬರಿ ಬೇಡ.
ಇನ್ನು ಬೆಳಗ್ಗೆ ಹಾಗು ಸಂಜೆ ಎರಡೂ ಹೊತ್ತು ಪೂಜೆ ಮಾಡಿ ಊದುಬತ್ತಿ ಮನೆಯ ಬಾಗಿಲಿಗೆ ಹಚ್ಚಿ. ಇದರಿಂದ ಲಕ್ಷ್ಮೀ ಪ್ರಸನ್ನವಾಗುವಳು. ಹೆಚ್ಚು ರಾಸಾಯನಿಕಯುಕ್ತ ಅಗರಬತ್ತಿಗಳನ್ನು ಆದಷ್ಟು ಅವೈಡ್ ಮಾಡಿ. ಮೈಲ್ಡ್ ಆಗಿರಿವ ಅಗರಬತ್ತು ಹಚ್ಚಿ.
ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಹಾಗು ಪೂರ್ವದಿಕ್ಕಿನೆಡೆಗೆ ಮುಖ ಮಾಡಿ ಅಡುಗೆ ಮಾಡಬೇಕು. ಇಲ್ಲವಾದರೆ ನಿಮ್ಮ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರುವಂತಾದರೂ ನೋಡಿಕೊಳ್ಳಿ.
ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಹಾಕಿಡಿ. ಆಗಾಗ ಇದನ್ನು ಬದಲಾಯಿಸುತ್ತಿರಿ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸುತ್ತಮುತ್ತಲಿನ ವಾತಾವರಣದಲ್ಲಿ ಪೊಸಿಟಿವ್ ಎನರ್ಜಿ ಉಂಟು ಮಾಡುತ್ತದೆ. ಎಷ್ಟೋ ಅಂಗಡಿಗಳಲ್ಲಿ ನೀವು ಇದನ್ನು ಗಮನಿಸಿರಬಹುದು.
ಮನೆಯಲ್ಲಿ ನಕಾರಾತ್ಮಕ ವಾತಾವರಣ ಹೋಗಲಾಡಿಸಲು ಮಾಡಬೇಕಾದ ಮುಖ್ಯ ಕೆಲಸವೆಂದರೆ ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಎಂದಿಗೂ ಇಡಬೇಡಿ. ಇದು ಅಪಶಕುನ ಎಂದು ಪರಿಗಣಿಸಲಾಗುತ್ತದೆ ಹಾಗು ಆರೋಗ್ಯ ಮತ್ತಷ್ಟು ಹದಗೆಡುತ್ತದೆ ಎಂದು ವಾಸ್ತು ಹೇಳುತ್ತದೆ.
ಮನೆಮಂದಿಯಲ್ಲ ದಿನಕ್ಕೆ ಕನಿಷ್ಟ ಪಕ್ಷ ಹತ್ತು ನಿಮಿಷ ಧ್ಯಾನ ಮಾಡಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದ್ದೆ ಹಾಗು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೂಡ ಬರುತ್ತದೆ.
ವಾಸ್ತು ಹೇಳುವ ಪ್ರಕಾರ ಬೆಡ್ ರೂಮ್‌ನಲ್ಲಿ ಕನ್ನಡಿ ಇಡುವುದು ಸರಿ ಅಲ್ಲ. ಇದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಹಾಗು ಆರೋಗ್ಯದಲ್ಲಿ ಕೂಡ ಹೆಚ್ಚು ಕಡಿಮೆಯಾಗುತ್ತದೆ. ಬೆಡ್ ರೂಮ್‌ನಲ್ಲಿ ಕನ್ನಡ ಬೇಕೇಬೇಕು ಎಂತಾದರೆ ಮಲಗುವ ಹೊತ್ತಿಗೆ ಕಾಗದ ಅಥವಾ ಬಟ್ಟೆಯಿಂದ ಅದನ್ನು ಮುಚ್ಚಿ.
ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಅಥವಾ ಓಂ ಚಿನ್ಹೆ ಹಾಕಿ. ಮನೆಯಲ್ಲಿ ಆಗಾಗ ಹೋಮ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾ ಇರಿ. ಹಬ್ಬ ಹರಿದಿನಗಳನ್ನು ನಿಮ್ಮ ಕೈಲಾದಷ್ಟು ಆಚರಣೆ ಮಾಡಿ. ಮನೆಯಲ್ಲಿ ಹದ್ದು ಗೂಬೆಗಳ ಫೋಟೋ ಇರುವ ಫ್ರೇಮ್ ಹಾಕಬೇಡಿ. ಮನೆಯ ಬಾಗಿಲು ಹತ್ತಿರ ಲೋಹದ ಗಂಟೆ ತೂಗುಹಾಕಿ. ಗಂಟೆಯಿಂದ ಬರುವ ಇಂಪಾದ ನಾದ ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ.
ಮನೆಯ ಪ್ರತಿಯೊಂದು ಕೋಣೆಯಲ್ಲಿ ಚಿಕ್ಕ ಬಟ್ಟಲಿನಲ್ಲಿ ಉಪ್ಪು ಹಾಕಿಡಿ. ಉಪ್ಪಿಗೆ ಋಣಾತ್ಮಕ ಶಕ್ತಿಯನ್ನು ಹೀರುಕೊಳ್ಳುವ ಸಾಮರ್ಥ್ಯ ಇದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.