ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ತಲೆಯ ಚರ್ಮ ಅಂದರೆ ನೆತ್ತಿಯ ಚರ್ಮ ಕೂಡ ತುಂಬಾ ಸೂಕ್ಷ್ಮವಾಗಿರುತ್ತದೆ. ಇದು ಸೂಕ್ಷ್ಮ ಚರ್ಮ ಎಂದರೆ ತಪ್ಪಾಗಲಾರದು. ತಲೆಯ ಚರ್ಮದ ತುರಿಕೆಗೆ ಅನೇಕ ಕಾರಣಗಳಿವೆ. ಹೊರಗಡೆಯ ಟ್ರಾಫಿಕ್ ಧೂಳು, ಬೆವರು, ತಲೆಯ ಹೊಟ್ಟು, ಕಾರ್ಬನ್ ಮಿಶ್ರಿತ ಹೊಗೆ, ಹೀಗೆ ಅನೇಕ ಕಾರಣಗಳಿವೆ. ಈ ಎಲ್ಲಾ ಕಾರಣಗಳಿಂದ ನೆತ್ತಿಯ ಚರ್ಮಕ್ಕೆ ಶಿಲಿಂಧ್ರ ಸೊಂಕು ಉಂಟಾಗುತ್ತದೆ. ಈ ಶಿಲೀಂದ್ರ ಸೋಕು ನೆತ್ತಿ ಚರ್ಮಕ್ಕೆ ತುಂಬಾ ಹಾನಿಯುಂಟು ಮಾಡುತ್ತದೆ. ಈ ಸಮಸ್ಯೆಗೆ ನಾವಿಂದು ಪರಿಹಾರ ಕಂಡುಕೊಳ್ಳೋಣ ಬನ್ನಿ.
ಬೇವು ಈ ತಲೆ ಚರ್ಮದ ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಅಷ್ಟೆ ಅಲ್ಲದೇ ಬೇವು ಇನ್ನುಳಿದ ಚರ್ಮದ ಸೋಂಕಿಗೂ ಮದ್ದಾಗಿದೆ. ಬೇವನ್ನು ಬಳಸಿ ನೆತ್ತಿಯ ಶಿಲೀಂದ್ರ ಸೋಂಕಿಗೆ ಹೇಗೆ ಚಿಕಿತ್ಸೆ ನೀಡಬೇಕೆಂದರೆ,
ಬೇವಿ ಎಲೆಗಳನ್ನು ಕಿತ್ತು ಅವುಗಳನ್ನು ಶುಭ್ರವಾಗಿ ಸ್ವಚ್ಛವಾದ ನೀರಿನಲ್ಲಿ ತೊಳೆಯಬೇಕು. ಒಂದು ಮಿಕ್ಸಿ ಜಾರಿಗೆ ಬೇವಿನ ಎಲೆಗಳನ್ನು ಹಾಕಿ ಮಿಕ್ಸಿ ಮಾಡಿ ಪೇಸ್ಟ್ ರೂಪದಲ್ಲಿ ಮಾಡಿಕೊಳ್ಳಬೇಕು. ಈ ಬೇವಿನ ಪೇಸ್ಟ್‌ಗೆ ನಿಂಬೆ ರಸ ಹಾಗು ಅರಿಶಿನ ಮಿಕ್ಸ್ ಮಾಡಬೇಕು. ಈ ಪೇಸ್ಟ್‌ಅನ್ನು ನೆತ್ತಿಗೆ ಹಚ್ಚಿಕೊಳ್ಳಬೇಕು. 30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆಯಿರಿ. ಹೀಗೆ ವಾರಕ್ಕೆ ಒಂದು ಬಾರಿ ಮಾಡಿದರೆ ನೆತ್ತಿಯ ತುರಿಕೆ ಅಥವಾ ಶಿಲೀಂದ್ರ ಸೋಂಕು ಕ್ರಮೇಣ ನಿವಾರಣೆಯಾಗುತ್ತದೆ.
ತಲೆಯ ಚರ್ಮದ ತುರಿಕೆಗೆ ಆಪಲ್ ಸೈಡರ್ ವಿನೆಗರ್ ಕೂಡ ಪರಿಣಾಮಕಾರಿಯಾಗಿದೆ. ಇದು ಶಿಲೀಂದ್ರ ಸೋಂಕು ನಿವಾರಿಸಲು ತುಂಬಾ ಸಹಕಾರಿ. ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರಸಿ ತಲೆಯ ಚರ್ಮಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ತೊಳೆಯಿರಿ. ಹೆಚ್ಚು ರಾಸಾಯನಿಕಯುಕ್ತ ಶಾಂಪು ಬಳಕೆ ಬೇಡ. ಆರ್ಯುವೇದ ಶಾಂಪುಗಳ ಬಳಕೆಗೆ ಹೆಚ್ಚು ಒತ್ತು ಕೊಡಿ. ಇಷ್ಟು ಮಾಡಿದರೆ ನಿಮ್ಮ ತಲೆಯ ಚರ್ಮದ ಸೋಂಕು ಹಾಗು ತುರಿಕೆ ನಿವಾರಣೆಯಾಗುತ್ತದೆ