ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸರ್ವಕಾಲಕ್ಕೂ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಬಾಳೆಹಣ್ಣು ಸಾಮಾನ್ಯವಾಗಿ ಎಲ್ರೂ ನಿತ್ಯವೂ ಸೇವಿಸುತ್ತಾರೆ. ಆದರೆ ಇದೇ ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮೊದಲು ಒಮ್ಮೆ ಈ ಲೇಖನ ಓದಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆಯಿಂದಲೂ ಅನೇಕ ಲಾಭಗಳಿವೆ, ಅವುಗಳೆಂದರೆ
ಬಾಳೆಹಣ್ಣಿನ ಸಿಪ್ಪೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ದೇಹದ ಯಾವುದೇ ಭಾಗದಲ್ಲಿ ಊರಿ ನೋವು ಕಾಣಸಿಕೊಂಡರೆ ಅಲ್ಲಿ ಚೆನ್ನಾಗಿ ಮಾಗಿದ ಬಾಳೆಹಣ್ಣಿನ ಸಿಪ್ಪೆಯನ್ನು ಇಟ್ಟು 20 ನಿಮಿಷಗಳ ಕಾಳ ಹಾಗೆಯೇ ಬಿಡಿ. ನಂತರ ಸಿಪ್ಪೆ ತೆಗೆಯಿರಿ. ನೋವು ಇಲ್ಲದಂತಾಗುತ್ತದೆ.
ಕೆಲಸದ ಒತ್ತಡದಿಂದ ಅಥವಾ ಕಣ್ಣಿಗೆ ಹೆಚ್ಚು ಶ್ರಮಕೊಟ್ಟಾಗ, ಸರಿಯಾಗಿ ನಿದ್ರೆ ಆಗದೇ ಇದ್ದಾಗ ಕಣ್ಣುಗಳು ಊದಿಕೊಳ್ಳುತ್ತವೆ. ಹೀಗೆ ಆದಾಗ ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಕೆಳಭಾಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಂಡರೆ ಊದಿಕೊಂಡ ಕಣ್ಣುಗಳು ಮತ್ತೆ ಸಹಜ ಸ್ಥಿತಿಗೆ ಬರುತ್ತದೆ. ಹೀಗೆ ಮಾಡಿದರೆ ಕಣ್ಣಿನ ಆರೋಗ್ಯಕ್ಕೆ ತಂಪು ಹಾಗು ಕಣ್ಣಿನ ಒತ್ತಡವನ್ನೂ ಕಡಿಮೆ ಮಾಡುತ್ತದೆ.
ಶೂ ಪಾಲಿಶ್ ಮಾಡುತ್ತದೆ. ಹೌದು ಬಾಳೆಹಣ್ಣಿನ ಸಿಪ್ಪೆಯಿಂದ ಶೂ ಪಾಲಿಶ್ ಮಾಡಿ ನೋಡಿ. ಪಳೆಪಳನೆ ಹೊಳೆಯುತ್ತದೆ. ಇದು ನೈಸರ್ಗಿಕವಾಗಿ ಶೂ ಪಾಲಿಶ್ ಮಾಡದಂತೆ ಆಗುತ್ತದೆ. ಅಂದಹಾಗೆ ಲೆದರ್ ಶೂಗೆ ಮಾತ್ರ ಬಾಳೆಹಣ್ಣಿನ ಸಿಪ್ಪೆಯಿಂದ ಪಾಲಿಶ್ ಮಾಡಲಾಗುವುದು.
ಸೊಳ್ಳೆ ತಿಗಣೆಗಳು ಕಚ್ಚಿದಾಗ ಆಗ ಚರ್ಮದ ಮೇಲೆ ಹೆಚ್ಚು ಕೆರೆತ ಉಂಟಾದರೆ ಕೂಡಲೇ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕಿ ಉಜ್ಜಿಕೊಳ್ಳಿ.
ಬಾಳೆಹಣ್ಣಿನ ಸಿಪ್ಪೆಯನ್ನು ಮನೆಯ ಕೈತೋಟಕ್ಕೆ ಬೇಕಾಗುವ ಗೊಬ್ಬರ ಮಾಡಲೂ ಬಳಸಬಹುದು. ಇದು ನೈಸರ್ಗಿಕ ಗೊಬ್ಬರವಾಗುತ್ತದೆ.
ಮೊಡವೆಗಳಿಗೆ ಬಾಳೆಹಣ್ಣಿನ ಸಿಪ್ಪೆ ರಾಮಬಾಣ. ಮುಖದ ಮೊಡವೆಗಳಿಗೆ ಮಾಗಿದ ಬಾಳೆಹಣ್ಣಿನ ಸಿಪ್ಪೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಂಡರೆ ಮೊಡವೆಗಳು ಕ್ರಮೇಣ ಮಾಯವಾಗುತ್ತವೆ.
ಒಣಚರ್ಮಕ್ಕೆ ಬಾಳೆಹಣ್ಣಿನ ಸಿಪ್ಪೆ ಬೆಸ್ಟ್ ಉಪಾಯ. ಇದರಲ್ಲಿರುವ ಅಮೈನೋ ಆಮ್ಲ, ವಿಟಮಿನ್ ಎ,ಬಿ,ಸಿ ಅಂಶಗಳು ಒಣ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಒಣ ಚರ್ಮಕ್ಕೆ ಬಾಳೆಹಣ್ಣಿನ ಸಿಪ್ಪೆ ಹಾಕಿ ಮೆಲ್ಲಗೆ ಉಜ್ಜಿಕೊಂಡರೆ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ ಹಾಗು ಚರ್ಮ ಆರೋಗ್ಯಕರವಾಗಿರುತ್ತದೆ.