ಬೆಂಗಳೂರು: ರಾಜ್ಯದ ಜನತೆಗೆ ಇಂದು ಸಂಜೆಯೊಳಗೆ ಕರೆಂಟ್ ಶಾಕ್ ಅನ್ನು ಸರ್ಕಾರ ನೀಡಲಿದೆ ಎನ್ನಲಾಗುತ್ತಿತ್ತು. ಅಲ್ಲದೇ ವಿದ್ಯುತ್ ದರ ಪರಿಷ್ಕರಣೆ ಮಾಡಿ ಏರಿಕೆಯ ಬರೆಯನ್ನು ಎಳೆಯಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೇ ಕರೆಂಟ್ ಶಾಕ್ ನಲ್ಲಿದ್ದಂತ ರಾಜ್ಯದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ವಿದ್ಯುತ್ ದರ ಭಾರೀ ಇಳಿಕೆ ಮಾಡಲಾಗಿದೆ.
ಈ ಕುರಿತಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ( KERC ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಲ್ ಟಿ ಗೃಹ ಬಳಕೆಯಲ ವಿದ್ಯುತ್ ದೀಪದ 100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್ ಗೆ 110 ಪೈಸೆ ಇಳಿಕೆ ಮಾಡಲಾಗಿದೆ. ಅಲ್ಲದೇ ಹೆಚ್.ಟಿ ವಾಣಿಜ್ಯ ಬಳಕೆಯ ಇಂಧನ ಶುಲ್ಕ ಪ್ರತಿ ಯೂನಿಟ್ ಗೆ 125ಪೈಸೆ ನಿಗದಿ ಮಾಡಿದ್ದರೇ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ.
ಇನ್ನೂ ಹೆಚ್.ಟಿ ಕೈಗಾರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಮಾಡಿದ್ದರೇ, ಡಿಮಾಂಡ್ ಶುಲ್ಕ ಪರ್ತಿ ಕೆವಿಎಗೆ ರೂ.10 ಇಳಿಕೆ ಮಾಡಲಾಗಿದೆ.
ಹೆಚ್ ಟಿ ಖಾಸಗಿ ಏತ ನೀರಾವರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 2 ರೂ ಇಳಿಕೆ ಮಾಡಲಾಗಿದೆ. ಹೆಚ್ ಟಿ ನಿವಾಸ ಅಪಾರ್ಮೆಂಟುಗಳ ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ.10ರಷ್ಟು ಇಳಿಕೆ ಮಾಡಲಾಗಿದೆ.
ಎಲ್ ಟಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಎಲ್ ಟಿ ಕೈಗಾರಿಕಾ ಸ್ಥಾವರಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 1 ರೂ ಇಳಿಕೆ ಮಾಡಲಾಗಿದೆ.
ಎಲ್ ಟಿ ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್ ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಈಗ ಚಾಲ್ತಿಯಲ್ಲಿರುವ ಸಂಜೆ 6.00 ರಿಂದ 10.00 ರವರೆಗಿನ ಗರಿಷ್ಠ ಬೇಡಿಕೆಗೆ ಸಮಯಾಧಿರಿತ ದರ (ಟಿ.ಒ.ಡಿ)ವನ್ನು ಬೆಳಿಗ್ಗೆ 6 ರಿಂದ 9 ಗಂಟೆಯವರೆಗಿನ ಗರಿಷ್ಠ ಬೇಡಿಕೆಗೆ ಸಹಾ ಪ್ರಾರಂಭಿಸಲಾಗಿದೆ.
ಪ್ರೋತ್ಸಾಹಕ ದರವನ್ನು ಪ್ರತಿ ಯೂನಿಟ್ಗೆ ರೂ.2ರಿಂದ,ಪ್ರತಿ ಯೂನಿಟ್ಗೆ ರೂ.1ಕ್ಕೆ ಇಳಿಸಿ ವಿಶೇಷ ಪ್ರೋತ್ಸಾಹ ಯೋಜನೆ (ಎಸ್.ಐ.ಎಸ್)ಅನ್ನು ಆರ್ಥಿಕ ವರ್ಷ 25ಕ್ಕೆ ಮುಂದುವರೆಸಿದೆ. ಆರ್ಥಿಕ ವರ್ಷ 26ರಿಂದ ಸದರಿ ಯೋಜನೆಯು ಮುಂದುವರೆಯುವುದಿಲ್ಲ.
ಕ್ರಾಸ್ ಸಬ್ಸಿಡಿ ಶುಲ್ಕಗಳನ್ನು ಕಡಿಮೆಮಾಡಲಾಗಿದೆ. ಮಾಪಕವನ್ನು ಸ್ವಯಂ ಓದುವುದನ್ನು ಎಲ್ಲಾ ಎಲ್.ಟಿ. ಸ್ಥಾವರಗಳಿಗೆ ಐಚ್ಛಿಕವಾಗಿ ಪರಿಚಯಿಸಲಾಗಿದೆ. ಇಂಧನ ಬಳಕೆ ಶುಲ್ಕಗಳಿಗೆ ಒಂದೇ ಸ್ಲಾಬ್ (ಹಂತ) ಪರಿಚಯಿಸಿರುವುದರಿಂದ, ಎಲ್.ಟಿ. ಗ್ರಾಹಕರು ತಮ್ಮ ಆವರಣದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ಥಾವರಗಳಿಗೆ ವಿದ್ಯುಚ್ಛಕ್ತಿ
ಪಡೆಯಬಹುದು.
ವಿ.ಸ.ಕಂ ಗಳ ಪರಿಷ್ಕೃತ ದರಗಳ ಪ್ರಮುಖ ಅಂಶಗಳು
ಆರ್ಥಿಕ ವರ್ಷ 25ರ ವಾರ್ಷಿಕ ಕಂದಾಯ ಅಗತ್ಯತೆಯ ಅನುಮೋದನೆಗಾಗಿ ವಿ.ಸ.ಕಂಗಳ ಪ್ರಸ್ತಾವನೆ:
ಆರ್ಥಿಕ ವರ್ಷ 2024-25 ಕ್ಕೆ ವಿ.ಸ.ಕಂ ಗಳು ಒಟ್ಟು ಮೊತ್ತ ರೂ. 69,474.75 ಕೋಟಿಗಳ ವಾರ್ಷಿಕ ಕಂದಾಯ ಅಗತ್ಯತೆ (ARR) ಯನ್ನು ಅನುಮೋದಿಸುವಂತೆ ಕೋರಿರುತ್ತವೆ. ಸದರಿ ಮೊತ್ತವು ರೂ. 4,863.85 ಕೋಟಿಗಳ ಕಂದಾಯದಲ್ಲಿನ ಕೊರತೆಯನ್ನು ಒಳಗೊಂಡಿರುತ್ತದೆ. ವಿ.ಸ.ಕಂ ಗಳು ಒಟ್ಟು, ಕಂದಾಯ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್ಗೆ ಸರಾಸರಿ 66 ಪೈಸೆಗಳಷ್ಟು (ಪ್ರತಿ ಯೂನಿಟ್ ಗೆ 49 ರಿಂದ 163 ಪೈಸೆಗಳವರೆಗೆ) ಹೆಚ್ಚಿಸುವಂತೆ ಕೋರಿರುತ್ತವೆ. ಸದರಿ ಕೊರತೆಯು ವಾರ್ಷಿಕ ಕಾರ್ಯನಿರ್ವಹಣೆ ಪುನರ್ಮನನ (APR)ದ ಅನುಸಾರ ಆರ್ಥಿಕ ವರ್ಷ 2022-23 ರಲ್ಲಿ ಉಂಟಾಗಿರುವ ಕಂದಾಯದ ಕೊರತೆ ಮೊತ್ತ ರೂ. 723.06 ಕೋಟಿಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನ ಪರ ಘೋಷಣೆ ಆರೋಪ : ತುಮಕೂರಲ್ಲಿ ‘ಬಿಜೆಪಿ ಕಾರ್ಯಕರ್ತರ’ ಪ್ರತಿಭಟನೆ ವೇಳೆ ‘Dysp’ ಮೇಲೆ ಹಲ್ಲೆ
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ