ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಉಚಿತವಾಗಿ ನೀಡುವಂತ ಶುಚಿ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಹೀಗಾಗಿ ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆ, ಕಾಲೇಜುಗಳಲ್ಲಿನ ಹದಿಹರೆಯದ 10 ರಿಂದ 18 ವಯೋಮಾನದ ಹೆಣ್ಣಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗುತ್ತದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ಗಾಂಧಿನಗರದಲ್ಲಿರುವ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದಿನಾಂಕ:28.02.2024, ಬುಧವಾರದಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಶುಚಿ” ಯೋಜನೆಗೆ ಮರು ಚಾಲನೆ ನೀಡಿದರು ಎಂದಿದ್ದಾರೆ.
ಋತುಸ್ರಾವದ ಕುರಿತು ಇರುವ ಅವೈಜ್ಞಾನಿಕ ಅಭಿಪ್ರಾಯ / ಮೂಡ ನಂಬಿಕೆಗಳನ್ನು ದೂರಗೊಳಿಸಿ ಶುಚಿತ್ವ ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ, ಶಾಲಾ ಹಾಜರಾತಿ, ಸುಧಾರಿಸಲು ಕರ್ನಾಟಕ ಸರ್ಕಾರ 2013-14ನೇ ಸಾಲಿನಲ್ಲಿ “ಶುಚಿ” ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದ್ದಾರೆ.
ಅದರಂತೆ, ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆ/ಕಾಲೇಜುಗಳಲ್ಲಿನ ಹದಿಹರೆಯದ ಅಂದರೆ 10 ರಿಂದ 18 ವರ್ಷ ವಯಸ್ಸಿನ ಹೆಣ್ಣು ಮಕ್ಕಳನ್ನು ಒಳಪಡಿಸಿದಂತೆ ಸುಮಾರು 00 ಲಕ್ಷ ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗುತ್ತಿದೆ.
ಪ್ರತೀ ಮಗುವಿಗೆ ಪ್ರತಿ ಪ್ಯಾಕೆಟ್ ನಂತೆ ವಾರ್ಷಿಕ 12 ಪ್ಯಾಕೆಟ್ ಗಳನ್ನು ಉಚಿತವಾಗಿ ಶಾಲಾ / ಕಾಲೇಜುಗಳಲ್ಲಿಯೇ ನೀಡಲಾಗುತ್ತಿತ್ತು. ಅಂದರಂತೆ ವರ್ಷಕ್ಕೆ ಸುಮಾರು 20 ಕೋಟಿ ಸ್ಯಾನಿಟರಿ ಪ್ಯಾಕೆಟ್ ಗಳನ್ನು ಪೂರೈಸಿದ್ದೇವೆ.
ಕೋವಿಡ್-19ರ ಮತ್ತು ಇತರೆ ಕಾರಣಾಂತರಗಳಿಂದ ಕಳೆದ 3 ವರ್ಷದಿಂದ ಈ ಪ್ಯಾಡ್ ಗಳ ಸಂಗ್ರಹಣೆ ಯಶಸ್ವಿಯಾಗಿ ನಡೆಸಲಾಗದ ಹಿನ್ನೆಲೆಯಲ್ಲಿ ಪೂರೈಕೆಯು ಸ್ಥಗಿತಗೊಂಡಿತ್ತು. ವಿಶೇಷವೆಂದರೆ, ಈ ಬಾರಿ ನಾವು Sanitary Pad stock ಗಳನ್ನು ನೇರವಾಗಿ ಶಾಲಾ-ಕಾಲೇಜು ಮತ್ತು ವಸತಿ ನಿಲಯಗಳಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಮಗುವಿಗೆ ಒಂದು “ಶುಚಿ” ಕಿಟ್ ನಂತೆ ವಿತರಣೆ ಮಾಡುತ್ತಿದ್ದು ಈ ಒಂದು ಕಿಟ್‌ನಲ್ಲಿ 8-ತಿಂಗಳ ಬೇಡಿಕೆಯ Sanitary Pad ಗಳು ಇರುತ್ತವೆ. ಹೀಗಾಗಿ ಒಂದೇ ಬಾರಿಗೆ 8-ತಿಂಗಳ ಪೂರೈಕೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಉದ್ದೇಶ:
- ಹದಿಹರೆಯದವರಲ್ಲಿ ಋತುಸ್ರಾವದ ಶುಚಿತ್ವ ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯ ಕುರಿತು ಅರಿವು ಮೂಡಿಸುವುದು.
- ಹದಿಹರೆಯದವರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆ ಹಾಗೂ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವುದು.
- ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದರ ಮುಖಾಂತರ ಬಳಕೆಯನ್ನು ಪ್ರೋತ್ಸಾಹಿಸುವುದು.
ಫಲಾನುಭವಿಗಳು:
- ಸರ್ಕಾರಿ, ಅನುದಾನಿತ, ಹಾಗೂ ಸರ್ಕಾರಿ ವಸತಿ ಶಾಲೆಯ 6 ರಿಂದ 12ನೇ (10 ರಿಂದ 18 ವರ್ಷದ) ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ಹೆಣ್ಣುಮಕ್ಕಳು.
- ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬರುವ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿನ (10 ರಿಂದ 18 ವರ್ಷದ) ಹದಿಹರೆಯದ ಹೆಣ್ಣುಮಕ್ಕಳು.
- ಗುರುತಿಸಲಾದ ವಾರ್ಷಿಕ ಒಟ್ಟು ಫಲಾನುಭವಿಗಳು : 19,29,355
ಅನುದಾನ: ವಾರ್ಷಿಕ ರೂ.4700.00 ಲಕ್ಷಗಳು
ಪಾಕಿಸ್ತಾನ ಪರ ಘೋಷಣೆ ಆರೋಪ : ತುಮಕೂರಲ್ಲಿ ‘ಬಿಜೆಪಿ ಕಾರ್ಯಕರ್ತರ’ ಪ್ರತಿಭಟನೆ ವೇಳೆ ‘Dysp’ ಮೇಲೆ ಹಲ್ಲೆ
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ