ಬೆಂಗಳೂರು: ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಿ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಿತು.
ಇನ್ನೂ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ನಿಂದ ಜಿಸಿ ಚಂದ್ರಶೇಖರ್, ನಾಸೀರ್ ಹುಸೇನ್, ಅಜಯ್ ಮಾಕೇನ್ ಸ್ಪರ್ಧಿಸಿ ಗೆಲುವು ಕಂಡರೇ ಬಿಜೆಪಿಯಿಂದ ಸ್ಪರ್ಧಿಸಿದ್ದ ನಾರಾಯಣಸಾ ಭಾಂಡಗೆ ಅವರು ಗೆಲವು ಕಂಡಿದ್ದಾರೆ. ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದಾರು, ಆದರೆ ಅವರು ಸೋಲನ್ನು ಕಂಡಿದ್ದಾರೆ.
ಅಜಯ್ ಮಾಕನ್ -47, ನಾಸೀರ್ ಹುಸೇನ್ – 46, ಜಿ.ಸಿ. ಚಂದ್ರಶೇಖರ – 45, ನಾರಾಯಣಸಾ ಭಾಂಡಗೆ – 48, ಕುಪೇಂದ್ರ ರೆಡ್ಡಿ – 35 ಮತಗಳನ್ನು ಗಳಿಸಿದ್ದಾರೆ.
ಉತ್ತರ ಪ್ರದೇಶದ 10, ಮಹಾರಾಷ್ಟ್ರ 6, ಬಿಹಾರ 6, ಪಶ್ಚಿಮ ಬಂಗಾಳ 5, ಮಧ್ಯ ಪ್ರದೇಶ 5, ಗುಜರಾತ್ 4, ಆಂಧ್ರ ಪ್ರದೇಶ 3, ತೆಲಂಗಾಣ 3, ರಾಜಸ್ಥಾನ 3, ಕರ್ನಾಟಕ 4, ಉತ್ತರಾಖಂಡ 1, ಛತ್ತೀಸ್‌ಗಢ 1, ಒಡಿಶಾ 3, ಹರ್ಯಾಣ 1 ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದೆ.
ಈ ನಡುವೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡ ಜಿ.ಪಾಟೀಲ್, ಈ ಬಗ್ಗೆ ಪಕ್ಷ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ದೊಡ್ಡನಗೌಡ ಜಿ.ಪಾಟೀಲ್ ಮಾತನಾಡಿ, ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿರುವುದು ದೃಢಪಟ್ಟಿದೆ. ಏನು ಮಾಡಬಹುದು ಮತ್ತು ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಚರ್ಚಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಮತ ಚಲಾಯಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, “ನನ್ನ ಕ್ಷೇತ್ರದ ನೀರು ಮತ್ತು ಇತರ ನಿರ್ವಹಣೆಗೆ ಅವರು ಹಣ ನೀಡುತ್ತಾರೆ ಎಂಬ ಭರವಸೆ ನೀಡುವವರ ಪರವಾಗಿ ನಾನು ಮತ ಚಲಾಯಿಸುತ್ತೇನೆ” ಎಂದು ಹೇಳಿದರು.
ಶೃಂಗೇರಿ ಬಳಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಮುಖಾ ಮುಖಿ ಡಿಕ್ಕಿ: 20 ಕ್ಕೂ ಹೆಚ್ಚು ಜನರಿಗೆ ಗಾಯ
Watch Video : ‘ದೇಶಕ್ಕಾಗಿ ನನ್ನ ಮೊದಲ ಮತ’ ಅಭಿಯಾನಕ್ಕೆ ಸೇರಲು ‘ಯುವ ಮತದಾರ’ರಿಗೆ ‘ಪ್ರಧಾನಿ ಮೋದಿ’ ಮನವಿ
JOB ALERT : ಕೆಪಿಎಸ್‌ಸಿ & ಬಿಎಂಟಿಸಿಯಿಂದ ಒಟ್ಟು 2,884 ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ!!
ಹಳೆ ಪಿಂಚಣಿ (OPS) ಜಾರಿ ಬಗ್ಗೆ ‘ಮಹತ್ವದ’ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ!