ಬೆಂಗಳೂರು : ರಾಜ್ಯ ಸರ್ಕಾರವು ಯುವನಿಧಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಒಂದು ವೇಳೆ ಅವರು ಈ ಕೆಲಸವನ್ನು ಮಾಡದೇ ಹೋದರೆ ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ತಿಳಿಸಿದೆ.
“ಯುವನಿಧಿ ಯೋಜನೆ ಅಡಿಯಲ್ಲಿ ಈಗಾಗಲೇ ಸೇವಾಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಅವರ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಫೆಬ್ರವರಿ 2024 ರಲ್ಲಿ ಪ್ರಯೋಜನ ಪಡೆಯಲು ಅಭ್ಯರ್ಥಿಗಳು 29-02-2024 ರೊಳಗೆ ತಾನು ನಿರುದ್ಯೋಗಿ ಎಂದು ಕೆಳಗಿನ ಲಿಂಕ್ ಮೂಲಕ ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು.
WATCH VIDEO: ಸಾಮಾನ್ಯರಂತೆ ‘ಪುಸ್ತಕ’ ಕೊಳ್ಳುತ್ತಿರುವ ಬ್ರಿಟನ್ನ ಪ್ರಥಮ ಮಹಿಳೆ ‘ಅಕ್ಷತಾ ಮೂರ್ತಿ’! ವಿಡಿಯೋ ವೈರಲ್
BREAKING: ಗಗನಯಾನಕ್ಕೆ ನಾಲ್ವರು ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ!
ಸೂಚನೆ : ಸೂಚಿತ ಸಮಯದೊಳಗೆ ಮಾಸಿಕ ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ‘ಯುವನಿಧಿ’ ನೇರ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹಗೊಳಿಸಲಾಗುವುದು ಅಂತ ತಿಳಿಸಿದೆ.