ಬೆಂಗಳೂರು: ರಾಜ್ಯದ ಹಿರಿಯ ನ್ಯಾಯವಾದಿಯಾಗಿದ್ದಂತ ಕೆ.ಟಿ ಡಾಕಪ್ಪ ಅವರು, ಕಳೆದ ರಾತ್ರಿ ಜರುಗಿದಂತ ರಸ್ತೆ ಅಪಘಾತದಲ್ಲಿ ಮೃತಪಟ್ಟಿರೋದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಹಿರಿಯ ನ್ಯಾಯವಾದಿ ಡಿ.ಎಲ್ ಜಗದೀಶ್ ಮಾಹಿತಿ ಹಂಚಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೌರಿ ಮೂಲ ಹಿರಿಯ ನ್ಯಾಯವಾದಿ ಕೆ.ಟಿ. ಡಾಕಪ್ಪ ಅವರು ಕಳೆದ ರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರ ಕಳೆ ಬರಹವನ್ನು ಜಯನಗರದ ಎನ್ ಎಂಕೆಆರ್ ವಿ ಕಾಲೇಜು ಸಮೀಪ ಇರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ ಎಂದು ಹೇಳಿದ್ದಾರೆ.
‘ಉದ್ಯೋಗ’ ಕಳೆದುಕೊಳ್ಳುವ ಭೀತಿಯಿಂದ ‘ಪೇಟಿಎಂ ಉದ್ಯೋಗಿ’ ಆತ್ಮಹತ್ಯೆಗೆ ಶರಣು | Paytm Employee