ಬೆಂಗಳೂರು: ಸಮಸಮಾಜ ನಿರ್ಮಾಣವೇ ನಮ್ಮ ಸರ್ಕಾರದ ಗುರಿ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಉದ್ದೇಶವಾದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ವವಲಂಬನೆಯನ್ನು ಸಹಕರಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ “ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ -2024”ದ ಸಮಾರೋಪ ಭಾಷಣ ಮಾಡಿ ಮಾತನಾಡಿದರು.
ನಾವು ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯಲ್ಲಿದ್ದೇವೆ. 1950ರಲ್ಲಿ ಜಾರಿಯಾದ ನಮ್ಮ ಸಂವಿಧಾನ ಜನರಿಗೆ ಅದರಲ್ಲಿಯೂ ಅವಕಾಶ ವಂಚಿತರಿಗೆ ಬೆನ್ನುಲಬಾಗಿ ನಿಂತಿದೆ. ದಲಿತ, ಬಡವ, ಕಾರ್ಮಿಕ ಮತ್ತು ಮಹಿಳೆಯರ ಪರವಾಗಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವಲ್ಲಿ ಮುಖ್ಯ ಪಾತ್ರ ವಹಿಸಿದೆ. ನಮ್ಮ ಸಂವಿಧಾನ ಬದಲಾವಣೆಯಾದರೆ ಸಮಾಜದಲ್ಲಿ ಯಾರು ಸಹ ಉಳಿಯಲ್ಲ ಸಾಧ್ಯವಿಲ್ಲ ಎಂದು ನುಡಿದರು.
ಸಂವಿಧಾನ ಜಾರಿಗೆ ಬಂದಿದ್ದರೂ ಸಹ ನಮ್ಮ ದೇಶದಲ್ಲಿ ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಇದನ್ನು ಹೋಗಲಾಡಿಸುವುದು ಯಾವುದೇ ಚುನಾಯಿತ ಸರ್ಕಾರದ ಕರ್ತವ್ಯ. ಈಗ ನಮ್ಮ ಸರ್ಕಾರ ಅವಕಾಶ ವಂಚಿತರಿಗೆ ಬಲಪಡಿಸಲು ಶ್ರಮಿಸುತ್ತಿದೆ ಎಂದರು.
ಅಸಮಾನತೆ, ಜಾತಿ ವ್ಯವಸ್ಥೆ ಹೋಗಲಾಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವ ಜನ ಸಹ ಅವಕಾಶ ವಂಚಿತರಾಗದೆ ಸ್ವಾಭಿಮಾನದಿಂದ ಬದುಕಬೇಕು. ಇದಕ್ಕಾಗಿ ಸರ್ಕಾರ ಜನರಿಗೆ ಮೊದಲೇ ಮಾತು ಕೊಟ್ಟಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿಗಳಿAದ 1.20 ಕೋಟಿ ಅಧಿಕ ಕುಟುಂಬಗಳು ಪ್ರಯೋಜನ ಪಡೆದಿವೆ. ಸುಮಾರು 4.60 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬಂದು, ಮಧ್ಯಮ ವರ್ಗದ ಸ್ಥಿತಿ ತಲುಪಿದ್ದಾರೆ.
ನಮ್ಮ ಸಂವಿಧಾನ, ನ್ಯಾಯಲಯ ಹಾಗೂ ಪ್ರಜಾಪ್ರಭುತ್ವದ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸಂವಿಧಾನದ ಬದ್ಧತೆ ಇರುವವರ ಕೈಗೆ ಅಧಿಕಾರ ನೀಡಿ ಎಂಬ ಕಿವಿ ಮಾತು ನುಡಿದರು
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರವರು ಮಾತನಾಡಿದರು, ಸಂವಿಧಾನ ಹೆಣ್ಣು ಗಂಡು ಬೇಧ ಇಲ್ಲದೆ ಪ್ರತಿಯೊಬ್ಬರೂ ಮತದಾನದ ಹಕ್ಕು ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಿಲುವು ಅಸಮಾನತೆ ತೊಡೆದುಹಾಕಿ ಸಮಾನತೆ ಕಲ್ಪಿಸುವುದು ಆಗಿತ್ತು . ಎಲ್ಲಿ ಜನ ಬುದ್ದಿವಂತರಿದ್ದಾರೆಯೋ ಅಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಅನೇಕ ದೇಶದಲ್ಲಿ ಇನ್ನೂ ಸರ್ವಾಧಿಕಾರ ಧೋರಣೆ ಇದೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರು ನಮ್ಮ ಕೊನೆ ರಕ್ತ ಇರುವವರಿಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಶ್ರಮಿಸಬೇಕೆಂದಿದ್ದರು. ಸಂವಿಧಾನದ ಮೂಲಭೂತ ಹಕ್ಕುಗಳು ಭಾರತೀಯನಾದ ಪ್ರತಿಯೊಬ್ಬರಿಗೂ ಪ್ರಜೆಗೂ ಇದೆ. ಇವುಗಳ ರಕ್ಷಣೆಗಾಗಿ ನಾವು ಹೋರಾಡಬೇಕು. ಸಂವಿಧಾನ ರಕ್ಷಣೆ ಮಾಡಿ ಪ್ರಜಾಪ್ರಭುತ್ವ ಉಳಿಸಬೇಕು. ಇಲ್ಲದೆ ಹೋದರೆ ನಾವು ಸಹಸ್ರಾರು ವರ್ಷಗಳ ಹಿಂದಿನ ಪರಿಸ್ಥಿತಿಗೆ ತಲುಪುತ್ತೇವೆ. ಸಂವಿಧಾನ ಉಳಿದರೆ ದೇಶದ ಜನರ ಆಶಯಗಳು ಉಳಿಯುತ್ತದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ, ಸಂವಿಧಾನದ ಆಶಯ, ಮೌಲ್ಯಗಳು ಮತ್ತು ಪ್ರಮುಖ್ಯತೆಯ ಬಗ್ಗೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಎರಡು ದಿನಗಳು ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ ಹಲವು ಚಿಂತಕರು, ವಿಜ್ಞಾನಿಗಳು ತಮ್ಮ ಅಲೋಚನೆಗಳು ಅಭಿಪ್ರಾಯಗಳನ್ನು ಹಂಚಿಕೊAಡಿದ್ದಾರೆ. ಸಂವಿಧಾನದ ನೈತಿಕತೆ ಉಳಿಸಿ ಇದನ್ನು ರಕ್ಷಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ಅತಿ ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದ ಧಾರವಾಡ ಜಿಲ್ಲಾಧಿಕಾರಿಯಾದ ದಿವ್ಯ ಪ್ರಭು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಕೆ. ಎ. ದಯಾನಂದ ರವರಿಗೆ ಬಹುಮಾನ ನೀಡಲಾಯಿತು.
ಸಮಾರಂಭದಲ್ಲಿ ಸಂಸದರಾದ ಫಾರೂಕ್ ಅಬ್ದುಲ್ಲಾ, ರಣದೀಪ್ ಸಿಂಗ್ ಸುರ್ಜೆವಾಲಾ, ಜೋಸ್ ಕೆ. ಮಣಿ, ತೊಲ್ ತಿರುಮಾವಲವನ್, ಸಚಿವರಾದ ಹೆಚ್. ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಕೆ. ಜೆ. ಜಾರ್ಜ್, ಎನ್.ಎಸ್. ಭೋಸರಾಜ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ವಾದಿ) ದ ಪ್ರಧಾನ ಕಾರ್ಯದರ್ಶಿಯಾದ ಸೀತಾರಂ ಯೆಚೂರಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿಯಾದ ಡಿ.ರಾಜು, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಜಿ. ದೇವರಾಜನ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಧಾನ ಕಾರ್ಯದರ್ಶಿಯಾದ ಸುಪ್ರಿಯಾ ಭಟ್ಟಾಚಾರ್ಯ, ಕ್ರಾಂತಿಕಾರಿ ಸಮಾಜವಾದಿ ಪಕ್ಷ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಭಟ್ಟಾಚಾರ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.