ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಮಾನಸಿ ಒತ್ತಡ ಅಂದರೆ ಮೆಂಟಲ್ ಸ್ಟ್ರೆಸ್ ಸಹಜವಾಗಿಬಿಟ್ಟಿದೆ. ಕೆಲಸ ಕುಟುಂಬ ಹೀಗೆ ನಾನಾ ಕಾರಣಗಳಿಂದ ಹೆಚ್ಚು ಜನ ಹೀಗೆ ಒತ್ತಡಕ್ಕೆ ಸಿಲುಕಿದ್ದಾರೆ. ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಿದರೆ ಮುಂದೆ ಅದು ಖನ್ನತೆಗೆ ತಿರುಗಿ ದೊಡ್ಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಚ್ಚರ. ಹಾಗಾಗಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಕೆಲ ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ ಅಂತಹ ಅಪಾಯಗಳಿಂದ ದೂರವಿರಬಹುದು ಎಂದು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ.
ಈ ಕೆಳಗಿನ ಆಹಾರಗಳನ್ನು ಸ್ವಲ್ಪ ಸ್ವಲ್ಪ ದಿನವೂ ಸೇವಿಸುವುದರಿಂದ ಒತ್ತಡದಿಂದ ದೂರವಿರಬಹುದು.
ಡಾರ್ಕ್ ಚಾಕೋಲೆಟ್; ಡಾರ್ಕ್ ಚಾಕೋಲೆಟ್ ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಡಾರ್ಕ್ ಚಾಕೋಲೆಟ್‌ನಲ್ಲಿರುವ ಪ್ಲೆವನಾಯ್ಡ್‌ಗಳು ಒತ್ತಡವನ್ನು ಕಡಿಮೆ ಮಾಡುತ್ತವೆ. ಇದು ಒತ್ತಡ ಉಂಟು ಮಾಡುವ ಕಾರ್ಟಿಸೋಲ್ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ನಿಯಮಿತವಾಗಿ ಡಾರ್ಕ್ ಚಾಕೋಲೆಟ್ ಸೇವಿಸಿ ಒತ್ತಡ ನಿವಾರಿಸಿಕೊಳ್ಳಿ. ನೆನಪಿಡಿ ನೀವು ಸೇವಿಸುವ ಡಾರ್ಕ್ ಚಾಕೋಲೆಟ್ ಕೆಮಿಕಲ್ ಫ್ರೀ ಆಗಿರಲಿ ಹಾಗು ಆದಷ್ಟು ಹೋಮ್ ಮೇಡ್ ಡಾರ್ಕ್ ಚಾಕೋಲೆಟ್‌ಗಳನ್ನೇ ಸೇವಿಸಿ.
ಡ್ರೈ ಫ್ರೂಟ್ಸ್: ಡ್ರೈ ಫ್ರೂಟ್ಸ್‌ನಲ್ಲಿ ಅನೇಕ ಹಣ್ಣುಗಳಿವೆ. ಗೊಡಂಬಿ, ದ್ರಾಕ್ಷಿ, ಒಣ ಅಂಜೂರ, ಬದಾಮಿ, ಗೇರುಬೀಜ ಹೀಗೆ ಇನ್ನೂ ಅನೇಕ ಹಣ್ಣುಗಳು ಒಟ್ಟಾರೆ ಸೇರಿದ ಡ್ರೈ ಫ್ರೂಟ್ಸ್ ದೇಹದ ಆರೋಗ್ಯಕ್ಕೆ ಉತ್ತಮ. ಡ್ರೈ ಫ್ರೂಟ್ಸ್‌ನಲ್ಲಿ ಒಮೆಗಾ 3 ಮತ್ತು 6 ಅಂಶಗಳು ಹೇರಳವಾಗಿರುತ್ತವೆ. ಇವು ದೇಹದಲ್ಲಿ ಸಿರೀಟಿನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಅಂಶಗಳು ನಿಮ್ಮ ಒತ್ತಡವನ್ನು ಕ್ರಮೇಣವಾಗಿ ನಿವಾರಿಸುವ ಶಕ್ತಿ ಇರುತ್ತದೆ. ಅಷ್ಟೇ ಅಲ್ಲದೇ ಡ್ರೈ ಫ್ರೂಟ್ಸ್ ಬಿಪಿಯನ್ನು ಸಹ ಕಂಟ್ರೋಲ್‌ನಲ್ಲಿ ಇರಿಸುತ್ತದೆ.
ಹುಳಿ ಅಂಶ ಇರುವ ಹಣ್ಣುಗಳು. ಹುಳಿ ಅಂಶ ಇರುವ ಹಣ್ಣುಗಳೆಂದರೆ ಸಿಟ್ರಿಕ್ ಹಣ್ಣುಗಳು. ದೇಹದ ಆರೋಗ್ಯಕ್ಕೆ ವಿಟಮಿನ್ ಸಿ ಬೇಕೇಬೇಕು. ವಿಟಮಿನ್ ಸಿ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣು, ಆರೇಂಜ್, ದ್ರಾಕ್ಷಿ, ಪಪ್ಪಾಯ ಸಹ ಸಿಟ್ರಿಕ್ ಹೇರಳವಾಗಿರು ಹಣ್ಣು. ಸಿಟ್ರಿಕ್‌ಯುಕ್ತ ಹಣ್ಣು ತಿಂದರೆ ಮಾನಸಿಕ ಒತ್ತಡಕ್ಕೆ ಒಳಗಾಗೋದು ಕಡಿಮೆ. ಒಂದು ವೇಳೆ ಈಗಾಗಲೇ ನೀವು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ತಪ್ಪದೇ ಸೇವಿಸಿ.
ಅವಕಾಡೋ ಹಣ್ಣು: ಇದನ್ನು ಸೇವಿಸಿದರೆ ನಿಮ್ಮ ಮೂಡ್ ಸಡನ್ ಆಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಅವಕಾಡೋ ಜ್ಯೂಸ್ ಅಥವಾ ಸಲಾಡ್ ಸೇವಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಎಂದು ಅನೇಕ ವೈದ್ಯರು ಸಲಹೆ ನೀಡುತ್ತಾರೆ. ಈ ಹಣ್ಣಿನಲ್ಲಿ ಪಲೇಟೋಗಳಂತಹ ವಿಟಾಮಿನ್‌ಗಳು, ಅನೇಕ ಖನಿಜಾಂಶಗಳು ಸಿ ಯಿ ಕೆ ಬಿ6 ಅಂಶವೂ ಇರುತ್ತದೆ. ಈ ಎಲ್ಲಾ ಪೋಷಕಾಂಶಗಳು ಒತ್ತಡವನ್ನು ನಿಂತ್ರಿಸುತ್ತದೆ. ಅವಕಾಡೋ ಜ್ಯೂಸ್ ಅಥವಾ ಸಲಾಡ್ ಸೇವಿಸಿದರೆ ಬಿಪಿ ನಿಯಂತ್ರಿಸಬಹುದು ಮತ್ತು ದೇಹದ ಬೊಜ್ಜು ಕೂಡ ಕರಗುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.