ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸೆಳ್ಳೆಗಳ ಕಾಟ ಅಷ್ಟಿಷ್ಟಲ್ಲ. ಸಂಜೆ ಆಯಿತೆಂದರೆ ಅದೆಲ್ಲಿಂದ ಬರುತ್ತವೆಯೋ ಮನೆಯೊಳಗೆ ನುಗ್ಗಿ ಮನೆಮಂದಿಗೆಲ್ಲ ಹಿಂಸೆ ನೀಡಲಾರಂಭಿಸುತ್ತವೆ. ಇವುಗಳಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಕೂಡ ಹೆಚ್ಚು. ಕೆಲವೊಮ್ಮೆ ಇವು ಮಾರಣಾಂತಿಕ ಕೂಡ ಹೌದು. ಇವುಗಳನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಕ್ವಾಯಿಲ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಸೊಳ್ಳೆಗಳು ನಿಯಂತ್ರಣಕ್ಕೇನೋ ಬರುತ್ತವೆ. ಆದರೆ ಈ ಕೆಮಿಕಲ್ ಹೊಗೆ ಅಥವಾ ವಾಸನೆ ಮನುಷ್ಯನ ಶ್ವಾಶಕೋಶಕ್ಕೆ ತುಂಬಾ ಡೇಂಜರ್. ಇದು ಮನುಷ್ಯನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕೆಮಿಕಲ್ ಇಲ್ಲದೆ ನೈಸರ್ಗಿಕವಾಗಿ ಸೊಳ್ಳೆಗಳು ಮನೆಯೊಳಗೆ ಬರದಂತೆ ಕೆಲ ಉಪಾಯಗಳಿವೆ. ತಿಳಿದುಕೊಳ್ಳಿ.
ನಾವಿಂದು ಹೇಳುವ ಮನೆಮದ್ದು ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಇದರ ಹೊಗೆ ದೇಹಕ್ಕೆ ಯಾವುದೇ ತೊಂದರೆ ನೀಡದೇ ನಿಮ್ಮ ಉಸಿರಾಟಕ್ಕೂ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಸೊಳ್ಳೆಗಳ ಕಾಟದಿಂದ ಮುಕ್ತಿಹೊಂದಲು ಬೇಕಾಗುವ ಸಾಮಗ್ರಿಗಳು
ಕರ್ಪೂರ, ಬೆಳ್ಳುಳ್ಳಿ, ತುಪ್ಪ, ಅಥವಾ ಕೊಬ್ಬರಿ ಎಣ್ಣೆ ಹಾಗು ಒಂದು ಮಣ್ಣಿನ ಬಟ್ಟಲು.
ಮೊದಲು ಒಂದು ಅರೆಯುವ ಕಲ್ಲಿಗೆ ಆರೇಳು ಎಸಳು ಬೆಳ್ಳುಳ್ಳು ಹಾಕಿಕೊಳ್ಳಿ, ಇದಕ್ಕೆ ಎರಡು ಕರ್ಪೂರ ಹಾಕಿ ಎರಡನ್ನೂ ಚೆನ್ನಾಗಿ ಜಜ್ಜಿಕೊಳ್ಳಿ. ಜಜ್ಜಿಕೊಂಡ ಈ ಮಿಶ್ರಣವನ್ನು ಒಂದು ಮಣ್ಣಿನ ಬಟ್ಟಲಿಗೆ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿ ಬೇಕಿದ್ದರೆ ಇನ್ನಷ್ಟು ಕರ್ಪೂರ ಹಾಕಿ. ನಂತರ ಇದಕ್ಕೆ ಬೆಂಕಿ ಹಾಕಿ. ಬೆಂಕಿ ಹಾಕಿ ಹೊಗೆಯಾಡುತ್ತಿದ್ದಂತೆಯೇ ಮನೆಯಲ್ಲಾ ಈ ಹೊಗೆಯನ್ನು ಆಡಿಸಬೇಕು. ಮನೆಯ ಮೂಲೆ ಮೂಲೆಯಲ್ಲೂ ಇದರ ಹೋಗೆ ತಲುಪುವಂತೆ ನೋಡಿಕೊಳ್ಳಬೇಕು.
ಸಂಜೆ ದೀಪ ಹಚ್ಚುವ ಸಮಯದಲ್ಲಿ ಹೀಗೆ ಮಾಡಿ. ಸೊಳ್ಳೆ ಬರುವ ಸಮಯದಲ್ಲಿ ಈ ಹೊಗೆಯಾಡಿಸಿದರೆ ಈ ಘಾಟಿನ ಹೊಗೆಗೆ ಸೊಳ್ಳೆ ಅಪ್ಪಿತಪ್ಪಿಯೂ ನಿಮ್ಮ ಮನೆಯೊಳಗೆ ನುಗ್ಗುವುದಿಲ್ಲ. ಇನ್ನು ಇದರ ಹೊಗೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಒಮ್ಮೆ ಟ್ರೈ ಮಾಡಿ ನೋಡಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.