ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೂಲವ್ಯಾಧಿ ಸಮಸ್ಯೆ ಅನುಭವಿಸಿದವರಿಗೆ ಗೊತ್ತು ಅದರ ನರಕಯಾತನೆ. ಇದರ ನೋವು ಅಷ್ಟು ತೀವೃತೆಯಿಂದಿರುತ್ತದೆ. ಮಲವಿಸರ್ಜನೆ ಮಾಡುವಾಗ ಅನುಭವಿಸುವ ನೋವು ಹೇಳತೀರದು. ಹೀಗೆ ಮೂಲವ್ಯಾಧಿಯ ಸಂಕಷ್ಟದಿಂದ ಪಾರಾಗಲು ಸುಲಭವಾದ ಹಾಗು ಅಷ್ಟೇ ಪರಿಣಾಮಕಾರಿಯಾದ ಮನೆಮದ್ದು ಒಂದಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಮೂಲವ್ಯಾಧಿ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದರೆ ಮುಟ್ಟಿದರೆ ಮುನಿಸೊಪ್ಪು, ಜಿರಿಗೆ, ಹಾಗು ಹಸುವಿನ ಹಾಲು. ಕೇವಲ ಈ ಮೂರೇ ಮೂರು ಪದಾರ್ಥಗಳಿಂದ ಮೂಲವ್ಯಾಧಿ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಈ ಮದ್ದನ್ನು ಹೇಗೆ ತಯಾರಿಸಬೇಕೆಂದರೆ,
ಮುಟ್ಟಿದರೆ ಮುನಿಸೊಪ್ಪನ್ನು ಚೆನ್ನಾಗಿ ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಬೇಕು. ಈ ಸೊಪ್ಪನ್ನು ಅರೆಯುವ ಕಲ್ಲಿಗೆ ಹಾಕಿ, ನಂತರ ಇದಕ್ಕೆ ಒಂದು ಚಮಚ ಜೀರಿಗೆ ಹಾಕಿಕೊಂಡು ಚೆನ್ನಾಗಿ ಜಜ್ಜಿಕೊಳ್ಳಬೇಕು. ಸ್ವಲ್ಪ ಗಟ್ಟಿ ಎನಿಸಿದರೆ ಶುದ್ಧವಾದ ಹಸುವಿನ ಹಾಲನ್ನು ಹಾಕಿ ಜಜ್ಜಿಕೊಳ್ಳಿ. ಇದಕ್ಕೆ ಅರ್ಧ ಲೋಟ ಶುದ್ಧವಾದ ಹಸುವಿನ ಹಾಲನ್ನು ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಒಂದು ಲೋಟಕ್ಕೆ ತೆಗೆದಿಟ್ಟುಕೊಳ್ಳಿ.
ಈ ಮಿಶ್ರಣವನು ಆದಷ್ಟು ಬೆಳಗ್ಗೆ ಖಾಲಿ ಹೊಟ್ಟೆಯಲಿಯೇ ಸೇವಿಸಿದರೆ ಉತ್ತಮ ರಿಸಲ್ಟ್ ಪಡೆಯಬಹುದು. ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡ ಮೇಲೆ ನೀರು ಕುಡಿದು ಖಾಲಿ ಹೊಟ್ಟಗೆ ಇದ್ದನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆ ಸಂಪೂರ್ಣವಾಗಿ ವಾಸಿಯಾಗುತ್ತದೆ.
ಮೂಲವ್ಯಾಧಿಗೆ ಈ ಮೇಲೆ ಹೇಳಿದ ಮನೆಮದ್ದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಕೆಲವೊಮ್ಮೆ ರೋಗದ ತೀವೃತೆ ಹೆಚ್ಚು ಇದ್ದರೆ ಕೆಲವೊಬ್ಬರಿಗೆ ಈ ಮನೆಮದ್ದು ಕೆಲಸ ಮಾಡದೇ ಇರಬಹುದು. ನಿಮಗೆ ಈ ಮನೆಮದ್ದನ್ನು ಸೇವಿಸಿದ ಮೇಲೆಯೂ ಮೂಲವ್ಯಾಧಿ ಸಮಸ್ಯೆ ಇನ್ನೂ ಹೆಚ್ಚು ತೀವೃವಾಗಿದ್ದರೆ ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.