ಬೆಂಗಳೂರು: ರಾಜ್ಯಾಧ್ಯಂತ ಕನ್ನಡ ಕಡ್ಡಾಯಗೊಳಿಸಿದರೇ ಸಾಲದು. ಅದನ್ನು ಜಾರಿಗೊಳಿಸಬೇಕು. ಫೆಬ್ರವರಿ.28ರೊಳಗೆ ಆದೇಶ ಜಾರಿಯಾಗದೇ ಇದ್ದರೇ ರಾಜ್ಯಾಧ್ಯಂತ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಎಚ್ಚರಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ರಾಜ್ಯದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ಆದೇಶದಂತೆ ಶೇ.60 ಸ್ಥಳಾವಕಾಶ ಕನ್ನಡ ಭಾಷೆಗೆ ನೀಡಬೇಕು. ಫೆ.28ರೊಳಗೆ ಆದೇಶ ಜಾರಿಯಾಗದೇ ಇದ್ದರೇ ಕರವೇಯಿಂದ ರಾಜ್ಯಾದ್ಯಂತ ಬೆಂಗಳೂರು ಮಾದರಿಯಲ್ಲೇ ಅಭಿಯಾನ ಆರಂಭಿಸೋದಾಗಿ ತಿಳಿಸಿದರು.
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂದು ಘೋಷಿಸಿದರೇ ಮಾತ್ರ ಸಾಲದು. ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಿಎಂ ಸಿದ್ಧರಾಮಯ್ಯ ಸರ್ಕಾರ ಬದ್ಧತೆ ತೋರಿಸಬೇಕು. ಕನ್ನಡಿಕರ ಬಗ್ಗೆ ಕಾಳಜಿ ತೋರಿಸಬೇಕು ಎಂಬುದಾಗಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
‘ಮಹದಾಯಿ’ ವಿಚಾರದಲ್ಲಿ ದೊಡ್ಡ ಅಪರಾಧ ಮಾಡಿದ್ದು ಕಾಂಗ್ರೆಸ್ : ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
‘ಸಿದ್ರಾಮುಲ್ಲಾ ಖಾನ್’ ಹೇಳಿಕೆ: ‘ಸಂಸದ ಅನಂತಕುಮಾರ್ ಹೆಗಡೆ’ ವಿರುದ್ಧ ‘ಸುಮೊಟೋ ಕೇಸ್’ ದಾಖಲು