ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾರ್ಕೆಟ್‌ನಿಂದ ಮೂಲಂಗಿ ಗಡ್ಡೆಯನ್ನು ಮಾತ್ರ ತಂದು ಮೂಲಂಗಿ ಎಲೆಗಳನ್ನು ಕಸವೆಂದು ಬೀಸಾಡಿಬಿಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಮೂಲಂಗಿ ಗಡ್ಡೆಯಷ್ಟೇ ಮೂಲಂಗಿ ಎಲೆಗಳು ಸಹ ದೇಹಕ್ಕೆ ಅನೇಕ ಪೂಷಕಾಂಶಗಳನ್ನು ನೀಡುತ್ತವೆ.
ಉತ್ತಮ ಆರೋಗ್ಯಕ್ಕಾಗಿ ಮೂಲಂಗಿ ಎಲೆಯ ಸಲಾಡ್ ಅಥವಾ ಜ್ಯೂಸ್ ಸೇವಿಸಬೇಕು. ಮೂಲಂಗಿ ಎಲೆಗಳಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಲೋರಿನ್, ಸೋಡೊಯಂ, ಕಬ್ಬಿಣ, ಮೆಗ್ನೀಸಿಯಮ್, ಹಾಗು ವಿಟಮಿನ್ ಎ, ಬಿ, ಸಿ ನಂತಹ ಇನ್ನೂ ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಪೋಷಕಾಂಶಗಳು ಅದೆಷ್ಟೋ ರೋಗಗಳಿಗೆ ಮದ್ದಾಗುತ್ತವೆ. ವಾರದಲ್ಲಿ ಕನಿಷ್ಟ ಪಕ್ಷ ಎರಡು ದಿನವಾದರೂ ಮೂಲಂಗಿ ಸೊಪ್ಪನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಮೂಲಂಗಿ ಸೇವನೆಯಿಂದ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಫೈಬರ್ ಅಂಶ ತಿಂದ ಆಹಾರವನ್ನು ಬೇಗ ಜೀರ್ಣ ಮಾಡುತ್ತದೆ. ಮೂಲಂಗಿ ಎಲೆಯಿಂದ ಮಾಡಿದ ಜ್ಯೂಸ್ ಸೇವನೆ ಜೀರ್ಣಕ್ರಿಯೆ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಚಳಿಗಾಲದಲ್ಲಿ ಮೂಲಂಗಿಯನ್ನು ತುಸು ಹೆಚ್ಚು ತಿಂದರೆ ಇನ್ನೂ ಒಳ್ಳೆಯದು. ಇದು ದೇಹವನ್ನು ಬೆಚ್ಚಗಿಡುತ್ತದೆ. ಹಾಗು ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತದೆ. ಇಮೂಲಂಗಿ ಎಲೆಯ ರಸ ಸೇವನೆ ಸುಲಭವಾಗಿ ತೂಕ ಇಳಿಸುತ್ತದೆ.
ರಕ್ತದೊತ್ತಡ ಸಮಸ್ಯೆಗೂ ಮೂಲಂಗಿ ಎಲೆ ಹೆಚ್ಚು ಪರಿಣಾಮ ಬೀರುತ್ತದೆ. ರಕ್ತದೊತ್ತಡ ಕಡಿಮೆಯಾದರೆ ಮೂಲಂಗಿ ಎಲೆ ಜ್ಯೂಸ್ ಸೇವನೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ.
ಮೂಲಂಗಿ ಎಲೆಯಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಇದರ ಸೇವನೆಯಿಂದ ದೇಹದಲ್ಲಿನ ಉಪ್ಪಿನ ಕೊರತೆಯನ್ನು ಸರಿದೂಗಿಸುತ್ತದೆ.
ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಮೂಲಂಗಿ ಗಡ್ಡೆ ಜೊತೆಗೆ ಮೂಲಂಗಿ ಎಲೆಗಳನ್ನು ಸಲಾಡ್ ರೂಪದಲ್ಲಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.