ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೊಜ್ಜಿನ ಸಮಸ್ಯೆ ಅನೇಕರಲ್ಲಿ ಕಾಡುತ್ತಿದೆ. ಏನೇ ಡಯಟ್, ಏಕ್ಸಸೈಸ್, ಮಾಡಿದರೂ ದೇಹದ ಬೊಜ್ಜು ಮಾತ್ರ ಒಂದಿಂಚೂ ಕರಗಲಿಲ್ಲ ಎಂದು ಅದೆಷ್ಟೋ ಜನ ಗೋಳಾಡುತ್ತಿದ್ದಾರೆ. ಇಂತವರಿಗೆಲ್ಲಾ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲ ಪಾನೀಯಗಳನ್ನು ನಾವಿಂದು ಹೇಳಿಕೊಡುತ್ತೇವೆ. ಇವುಗಳಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಇವುಗಳನ್ನು ನಿಯಮಿತವಾಗಿ ಹಾಗು ನಿರತಂತವಾಗಿ ಸೇವಿಸುವ ಮೂಲಕ ದೇಹದ ಬೊಜ್ಜನ್ನು ನಿಯಂತ್ರಿಸಿಕೊಳ್ಳಬಹುದು.
ನಿಂಬೆ ಹಣ್ಣಿನ ಜ್ಯೂಸ್: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಅಷ್ಟೆ ಅಲ್ಲದೇ ಬೊಜ್ಜು ಕರಗಿಸಲು ನೆರವಾಗುವ ನಾರಿನಾಂಶ ಇದರಲ್ಲಿದೆ. ಹಾಗು ಕೆಲ ಔಷಧಿ ಗಿಡಮೂಲಿಕೆ ಅಂಶಗಳೂ ನಿಂಬೆ ಹಣ್ಣಿನಲ್ಲಿದೆ. ಈ ಎಲ್ಲಾ ಅಂಶಗಳು ದೇಹದ ತೂಕ ಹೆಚ್ಚು ಆಗದಂತೆ ಹಾಗು ಈಗಾಗಲೇ ಇದ್ದ ಬೊಜ್ಜನ್ನು ಕರಗಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ದೇಹದಲ್ಲಿನ ವಿಷಕಾರಕ ಅಂಶವನ್ನು ಮಲ ಮೂತ್ರಗಳ ಮೂಲಕ ಹೊರ ಹಾಕುತ್ತದೆ. ಇದು ಮೆಟಬಾಲಿಸಂ ಪ್ರಕಿಯೆಯನ್ನು ಚುರುಕುಗೊಳಿಸುತ್ತದೆ. ಒಟ್ಟಾರೆ ನಿಂಬೆ ಹಣ್ಣಿನ ಟೀ ಸೇವಿಸಿದರೆ ಹೆಚ್ಚು ವೇಗದಲ್ಲಿ ದೇಹದ ಕ್ಯಾಲೋರಿಯನ್ನು ಕರಗಿಸಿ ಬೊಜ್ಜಿನ ಪ್ರಮಾಣವನು ಕಡಿಮೆ ಮಾಡುತ್ತದೆ. ಆಸಿಡಿಟಿ ಇದ್ದವರು ಈ ಟೀ ಸೇವನೆಯನ್ನು ವೈದ್ಯರ ಸಲಹೆ ಮೇಲೆ ಸೇವಿಸಿ.
ಜೀರಿಗೆ ನೀರು: ದೇಹದ ಆರೋಗ್ಯಕ್ಕೆ ಹಾಗು ಉತ್ತಮ ಜೀರ್ಣಕ್ರಿಯೆಗೆ ಜೀರಿಗೆ ತುಂಬಾ ಒಳ್ಳೆಯದು. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ರಾತ್ರಿಯಲ್ಲಾ ನೆನಸಿಡಿ. ಬೆಳಗ್ಗೆ ಖಾಲಿ ಹೊಟ್ಟಯಲ್ಲಿ ಜೀರಿಗೆ ನೀರನ್ನು ಸೋಸಿ ಕುಡಿಯಿರಿ. ಹೀಗೆ ನಿರಂತರವಾಗಿ ಸೇವನೆ ಮಾಡಿದರೆ ನಿಧಾನವಾಗಿ ದೇಹದಲ್ಲಿನ ಬೊಜ್ಜು ಮಾಯವಾಗುತ್ತದೆ.
ಲೆಮನ್ ಟೀ ಮತ್ತು ಗ್ರೀನ್ ಟೀ: ನಿಂಬೆ ಜ್ಯೂಸ್‌ನಂತೆಯೇ ಲೆಮನ್ ಟೀ ಸೇವನೆ ಕೂಡ ದೇಹದಲ್ಲಿನ ಬೊಜ್ಜನ್ನು ಕರಗಿಸುತ್ತದೆ. ನಿತ್ಯವೂ ಲೆಮನ್ ಟೀ ಅಭ್ಯಾಸ ಒಳ್ಳೆಯದು. ಆದರೆ ನೀವು ಕುಡಿಯುವ ಲೆಮನ್ ಟೀನಲ್ಲಿ ಸಕ್ಕರೆ ಇರಬಾರದು. ಸಕ್ಕರೆ ಅಂಶ ದೇಹದ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಚ್ಚರ. ಇನ್ನು ಗ್ರೀನ್ ಟೀ ಸೇವನೆ ದೇಹ ತೂಕ ಕರಗಿಸುತ್ತದೆ. ಇದು ಕೆಳಹೊಟ್ಟೆ ಭಾಗದ ಬೊಜ್ಜನ್ನು ಕರಗಿಸುತ್ತದೆ. ಬೆಳಗಿನ ಜಾವ ಸಕ್ಕರೆ ರಹಿತವಾಗ ಗ್ರೀನ್ ಟೀ ಸೇವನೆ ಚಯಾಪಚಯ ಕ್ರಿಯೆಗೆ ತುಂಬಾ ಉತ್ತಮವಾಗಿ ಸಹಾಯ ಮಾಡುತ್ತದೆ.
ಏಲಕ್ಕಿ ನೀರು: ಏಲಕ್ಕಿ ಕಾಯನ್ನು ಸಿಪ್ಪೆಯಿಂದ ತೆಗೆದು ಲೋಟ ನೀರಿಗೆ ಹಾಗಿ ರಾತ್ರಿ ನೆನಸಿಡಿ. ಬೆಳಗ್ಗೆ ಏಲಕ್ಕಿ ಜೊತೆಗೆ ನೆನಸಿಟ್ಟ ನೀರನ್ನೂ ಸೇವಿಸಿ. ಹೀಗೆ ಏಲಕ್ಕಿ ಮಿಶ್ರಿತ ನೀರು ಸೇವನೆ ದೇಹದಲ್ಲಿ ಬೊಜ್ಜನ್ನು ಕರಗಿಸಲು ತುಂಬಾ ನೆರವಾಗುತ್ತದೆ. ಇದು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದಾಗಿ ದೇಹದಲ್ಲಿನ ಕೊಬ್ಬಿನಾಂಶ ನಿಧಾವಾಗಿ ಕರಗುತ್ತದೆ. ಇದರ ಜೊತೆಗೆ ಹೆಚ್ಚು ಹೆಚ್ಚು ನೀರು ಕುಡಿದು ದೇಹದಲ್ಲಿನ ಬೊಜ್ಜನ್ನು ಕರಗಿಸಿಕೊಳ್ಳಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.