ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹೇರ್ ಸ್ಟೈಲ್ ಮಾಡಿಕೊಳ್ಳೋಕೆ ಯಾವ ಹೆಣ್ಣುಮಕ್ಕಳಿಗೆ ಇಷ್ಟವಿಲ್ಲ ಹೇಳಿ. ಮೇಕಪ್ ಮಾಡಿಕೊಂಡಾಗ ಹೇರ್ ಸ್ಟೈಲ್ ಮಾಡಿಕೊಂಡಾಗಲೇ ಅದು ಪರಿಪೂರ್ಣವಾಗೋದು. ಹೇರ್ ಸ್ಟೈಲ್‌ನಲ್ಲಿ ಅನೇಕ ಬಗೆಗಳಿವೆ. ದಿನ ದಿನಕ್ಕೂ ಒಂದೊಂದು ಹೇರ್ ಸ್ಟೈಲ್ ಹುಟ್ಟಿಕೊಳ್ಳುತ್ತಿವೆ. ಇನ್ನು ಹೇರ್ ಸ್ಟೈಲ್ ಅಂದವಾಗಿ ಚಂದವಾಗಿ ಕಾಣೋಕೆ ಅಥವಾ ಮಾಡಿದ ಹೇರ್ ಸ್ಟೈಲ್ ಸರಿಯಾಗಿ ಕೂರೋಕೆ ಹೇರ್ ಡಿಸೈನರ್‌ಗಳು ಹೇರ್ ಸ್ಪ್ರೇ ಬಳಸುವ ಚಾಲ್ತಿಯಲ್ಲಿದೆ. ಹೀಗೆ ಹೇರ್ ಸ್ಪ್ರೇ ಬಳಸುವುದರಿಂದ ಆಗುವ ಪರಿಣಾಮ ಏನೆಂದು ತಿಳಿದುಕೊಳ್ಳೋಣ.
ಸ್ಟೈಲಿಶ್ ಹೇರ್ ಸ್ಟೈಲ್ ಬೇಕೆಂದರೆ ಹೇರ್ ಸ್ಪ್ರೇ ಮಾಡಲೇಬೆಂಕೆಂದು ಹೇರ್ ಡಿಸೈನರ್‌ಗಳು ಸಲಹೆ ನೀಡುತ್ತಾರೆ. ಆದರೆ ಈ ಹೇರ್ ಸ್ಪ್ರೇ ಬಳಸುವುದರಿಂದ ಕೂದಲಿಗೆ ತುಂಬಾ ಹಾನಿಕಾರಕ ಎಂದು ಮೊದಲು ತಿಳಿದುಕೊಳ್ಳಿ. ವಿವಿಧ ಬಗೆಯ ಅನೇಕ ರಾಸಾಯನಿಕಗಳನ್ನು ಬಳಸಿ ಈ ಹೇರ್ ಸ್ಪ್ರೇಗಳನ್ನು ತಯಾರಿಸಿರುತ್ತಾರೆ. ಈ ರಾಸಾಯನಿಕರಗಳು ಕೂದಲಿಗೆ ಹಾಗು ಚರ್ಮಕ್ಕೂ ತುಂಬಾ ಅಪಾಯಕಾರಿ.
ಅಪರೂಪಕ್ಕೆಂದು ಹೇರ್ ಸ್ಪ್ರೇ ಬಳಸಲು ಅಡ್ಡಿಯಿಲ್ಲ. ಆದರೆ ನಿರಂತರವಾಗಿ ಹೇರ್ ಸ್ಪ್ರೇ ಬಳಸಿದರೆ ಕೂದಲು ಬೇಗನೇ ಡ್ಯಾಮೇಜ್ ಆಗುತ್ತವೆ. ಕೂದಲಿಗೆ ಸಂಬಧಿಸಿದ ಅನೇಕ ಸಮಸ್ಯೆಗಳು ಕಾಣಿಸಲು ಶುರುವಾಗುತ್ತವೆ. ಇದರಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ. ನಿರಂತವಾಗಿ ಹೇರ್ ಸ್ಪ್ರೇ ಬಳಸುವುದರಿಂದ ಆಗುವ ಅಪಾಯಗಳೇನೆಂದರೆ
ಕೂದಲಿನ ಆರೋಗ್ಯ ಹದಗೆಡುತ್ತದೆ. ಹೇರ್ ಸ್ಪ್ರೇ ಬಳಸಿದರೆ ಕೂದಲಿಗೆ ಹಚ್ಚುವ ನೈಸರ್ಗಿಕ ಕೊಬ್ಬರಿ ಎಣ್ಣೆ ಅಥವಾ ನೈಸರ್ಗಿಕವಾಗಿ ಮಾಡಿದ ಹೇರ್ ಫ್ಯಾಕ್‌ಗಳು ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಕಾರಣ ಹೇರ್ ಸ್ಪ್ರೇನಲ್ಲಿರುವ ರಾಸಾಯನಿಕಗಳು ಹೆಚ್ಚು ಶಕ್ತಿಯುತವಾಗಿರುತ್ತವೆ. ಕೂದಲು ಉದುರುವುದು ಹೆಚ್ಚಾಗಿ ದಟ್ಟವಾಗಿ ಕೂದಲು ಬೆಳಯುವುದು ಕ್ರಮೇಣ ಕಡಿಮೆಯಾಗುತ್ತದೆ. ಕೂದಲಿನ ಒರಟುತನ ಹೆಚ್ಚಾಗುತ್ತದೆ. ಕೂದಲು ತುಂಡಾಗುವದು. ಹಾಗು ನೆತ್ತಿಯ ಚರ್ಮ ತುರಿಗೆಯಾಗುವುದು. ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನಿರಂತರವಾಗಿ ಹೇರ್ ಸ್ಪ್ರೇಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.