ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೆಂಪು ಮೆಣಸಿನಕಾಯಿ ಬಾಯಿಗಿಟ್ಟರೆ ಖಾರ ರುಚಿಕೊಟ್ಟರೆ ಇದರ ಸೇವನೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಆಂಟಿಮೈಕ್ರೊಬಿಯಲ್ ಅಂಶವಿದ್ದು ಆರೋಗ್ಯದ ಮೇಲೆ ಹೇಗೆ ಉತ್ತಮ ಪ್ರಯೋಜನೆ ಬೀರುತ್ತದೆ ಎಂದು ತಿಳಿದುಕೊಳ್ಳೋಣ.
ಕೆಂಪು ಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಎ,ಬಿ, ಸಿ ಹೇರಳವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ನು ಸಂಶೋಧನೆಯೊಂದರ ಪ್ರಕಾರ ಕ್ಯಾಪ್ಸೈಸಿನ್ ದೇಹದ ಕೋಶಗಳನ್ನು ರಕ್ಷಿಸಲು ಉತ್ಕೃಷ್ಟ ನಿರೋಧಕವಾಗಿ ಕೆಲಸ ಮಾಡುತ್ತದೆ.
ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸಿದರೆ ವ್ಯಕ್ತಿಯ ಆಯಸ್ಸು ವೃದ್ಧಿಯಾಗುತ್ತದೆ. ಹೀಗಂತ ಸಂಶೋಧನೆಯೊಂದು ಸಾಬೀತು ಮಾಡಿದೆ. ಇದರಲ್ಲಿ ಆಯಸ್ಸು ಹೆಚ್ಚಿಸುವ ಗುಣ ಇರುತ್ತದೆಯಂತೆ. ಮೆಣಸಿನಕಾಯಿಯು ಸ್ಥೂಲಕಾಯ ಕಡಿಮೆ ಮಾಡುತ್ತದೆ. ವಯೋಸಹಜ ರೋಗಗಳಿಂದ ರಕ್ಷಿಸುತ್ತದೆ ಹಾಗು ಸಾವನ್ನು ಮುಂದೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಂಪು ಮೆಣಸಿನಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಚಯಾಪಚಯಕ್ರಿಯೆ ವೇಗಗೊಳಿಸುತ್ತದೆ, ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರ ಸೇವನೆ ದೇಹವನ್ನು ಬೆಚ್ಚಗೆ ಇರಿಸುತ್ತದೆ, ಹಾಗಾಗಿ ಪಹಾಡಿ ಜನ ಹೆಚ್ಚು ಕೆಂಪು ಮೆಣಸಿನಕಾಯಿಯನ್ನೇ ತಮ್ಮ ನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ. ಇದು ಕೊಬ್ಬನ್ನು ಕರಗಿಸಿ, ಹಸಿವನ್ನೂ ಸಹ ನಿಯಂತ್ರಿಸುತ್ತದೆ. ತಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ ಹಾಗು ದೇಹದಲ್ಲಿನ ಕಲ್ಮಷಗಳನ್ನು ಹೊರಹಾಕಿ ದೇಹದ ಬೊಜ್ಜು ಕರಗಿಸುತ್ತದೆ.
ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸದರೆ ಕ್ಯಾನ್ಸರ್‌ನ ಅಪಾಯ ಕಡಿಮೆ ಇರುತ್ತದೆ. ಸಂಧಿವಾತ ಮತ್ತು ಫೈಬ್ರೊಮ್ಯಾಲ್ಗಿಯ ರೋಗವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಅಲರ್ಜಿಗಳಾದ ಶೀತ ಕೆಮ್ಮು ನೆಗಡಿ ಇದ್ದಾಗ ಕೆಂಪು ಮೆಣಸಿನಕಾಯಿ ಹಾಕಿದ ಅಡುಗೆ ಊಟ ಮಾಡಿದಾಗ ಬೇಗನೇ ಗುಣಮುಖರಾಗಬಹುದು. ಹಾಗಾಗಿ ಜ್ವರದ ಸಮಯದಲ್ಲಿ ವೈದ್ಯರು ಕೆಂಪು ಮೆಣಸಿನಕಾಯಿ ಊಟ ಮಾಡಲು ಸಲಹೆ ನೀಡುತ್ತಾರೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.