ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮನಿ ಪ್ಲಾಂಟ್ ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಫೇಮಸ್ ಆಗ್ತಾ ಇದೆ. ಸಾಮಾನ್ಯವಾಗಿ ಎಲ್ಲರೂ ಮನಿ ಪ್ಲಾಂಟ್‌ಅನ್ನು ಮನೆಯೊಳಗೆ ಇರಿಸಿಕೊಳ್ಳುತ್ತಿದ್ದಾರೆ. ಇದನ್ನು ಮನೆಯಲ್ಲಿ ಹೇಗೆ, ಯಾವ ದಿಕ್ಕಿನಲ್ಲಿ ಇಡಬೇಕು, ಇದನ್ನು ಮನೆಯಲ್ಲಿ ಇಟ್ಟರೆ ಆಗುವ ಪ್ರಯೋಜನಗಳೇನು ಎಂದು ತಿಳಿಸಿಕೊಡುತ್ತೇವೆ.
ಮನಿ ಪ್ಲಾಂಟ್ ಹೆಸರೇ ಸೂಚಿಸುವಂತೆ ಇದನ್ನು ಮನೆಯಲ್ಲಿ ಇರಿಸಿದರೆ ಧನಲಕ್ಷ್ಮೀ ಒಲಿದು ಬರುತ್ತಾಳೆ ಎಂಬ ನಂಬಿಕೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಮನಿ ಪ್ಲಾಂಟ್‌ಗೆ ಹೆಚ್ಚು ನೀರು, ಗಾಳಿ, ಬೆಳಕು ಅವಶ್ಯಕೆ ಇಲ್ಲ. ವರ್ಷವಿಡೀ ಹಸಿರಾಗಿರುವ ಬಾಡದ ಒಂದು ಸಸಿ ಇದು. ಇದನ್ನು ಮನೆಯಲ್ಲಿಟ್ಟು ಬಾಡದಂತೆ ನೋಡಿಕೊಳ್ಳಬೇಕು. ಈ ಸಸಿ ಬಾಡಿದರೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಆದ್ದರಿಂದ ಇದನ್ನು ಮನೆಯಲ್ಲಿರಿಸಿದವರು ಬಾಡಲು ಬಿಡಬಾರದಂತೆ. ಹೀಗಂತ ವಾಸ್ತು ಹೇಳುತ್ತದೆ. ಇನ್ನು ಮನಿ ಪ್ಲಾಂಟ್ ಬಗ್ಗೆ ಹೆಚ್ಚು ಹೇಳುವುದಾದರೆ ಇದು ಮನೆಯಲ್ಲಿ ಆಮ್ಲಜನಕ ಪ್ರಮಾಣವನ್ನು ಅಧಿಕ ಮಾಡುತ್ತದೆ. ಮನೆಯವರ ಆರೋಗ್ಯ ಕಾಪಾಡುವಲ್ಲೂ ಸಹ ಈ ಗಿಡ ವೈಜ್ಞಾನಿಕವಾಗಿ ನೆರವಾಗುತ್ತದೆ ಎಂದು ಹೇಳುತ್ತಾರೆ.
ವಾಸ್ತು ಪ್ರಕಾರವಾಗಿ ಮನೆಯೊಳಗೆ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡಬೇಕಂತೆ. ಇದರಿಂದಾಗಿ ಸಂಪತ್ತು, ಸಂತೋಷ ಸಮೃದ್ಧಿಯಾಗಿರುತ್ತದೆ. ಅಲ್ಲದೇ ಇದು ಮನೆಯೊಳಗಿದ್ದರೆ ಮನೆತುಂಬೆಲ್ಲಾ ಧನಾತ್ಮಕ ಶಕ್ತಿಯ ಸಂವಹನ ಮನೆಯಲ್ಲಿರುತ್ತದೆಂತೆ.ಇನ್ನು ಈಶಾನ್ಯ ಅಥವಾ ಪೂರ್ವ, ಪಶ್ಚಿಮ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಮನಿ ಪ್ಲಾಂಟ್ ಇರಿಸಬಾರದು, ಏಕೆಂದರೆ ಹೀಗೆ ಮಾಡಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಉಂಟಾಗುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೇಡುತ್ತಾರೆ. ಇನ್ನು ಮನಿ ಪ್ಲಾಂಟ್ ಇದ್ದ ಸುತ್ತಮುತ್ತಿನ ಜಾಗ ಕೊಳಕಾಗಿ ಇರದೇ ಅದರ ಸುತ್ತ ಸ್ವಚ್ಛತೆ ಕಾಪಾಡಬೇಕೆಂದು ಸಹ ವಾಸ್ತು ತಜ್ಞರು ಸಲಹೆ ನೀಡುತ್ತಾರೆ.