ಕೆಎನ್ಎನ್ಡಿಜಿಟಲ್ಡೆಸ್ಕ್: ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೆ ಕಾರಣಗಳು ಅನೇಕ. ಕಾರಣದ ಬದಲಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಹೀಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಪರಿಹಾರಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿರುತ್ತಾರೆ. ಎಷ್ಟೋ ಜನ ತಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗಲು ಇಂಗ್ಲೀಷ್ ಮೆಡಿಸಿನ್ ಅಥವಾ ಆರ್ಯುವೇದ ಔಷಧಿಗಳಿಗೂ ಮೊರೆ ಹೋಗುತ್ತಾರೆ. ಜೀರ್ಣಕ್ರಿಯೆ ಸಮಸ್ಯೆಗೆ ಯಾವುದೇ ಔಷಧಿ ಇಲ್ಲದೇ ನಾವು ಹೇಳುವ ಈ ಸುಲಭವಾದ ಕೆಲಸ ಮಾಡಿದರೆ ಸಾಕು, ತಿಂದ ಆಹಾರ ಸುಲಭವಾಗಿ ನೈಸರ್ಗಿಕವಾಗಿ ಜೀರ್ಣವಾಗುತ್ತದೆ. ನಾವು ಹೇಳುವ ಈ ಪದ್ಧತಿ ನಮ್ಮ ಪೂರ್ವಜರೂ ಸಹ ಮಾಡಿಕೊಂಡು ಬಂದಿದ್ದಾರೆ.
ನೀವು ತಿಂದ ಆಹಾರ ಸುಲಭವಾಗಿ ಜೀರ್ಣವಾಗಬೇಕೆಂದರೆ ಊಟದ ನಂತರ ವಿಶೇಷವಾಗಿ ಮಧ್ಯಾಹ್ನದ ಊಟದ ನಂತರ ಕಡ್ಡಾಯವಾಗಿ ಒಂದು ಲೋಟ ಮಜ್ಜಿಗೆ ಸೇವಿಸಿ. ಗಟ್ಟಿ ಮಜ್ಜಿಗೆ ಬೇಡ. ಆದಷ್ಟು ನೀರು ಮಜ್ಜಿಗೆ ಸೇವಿಸಿ, ಮಜ್ಜಿಗೆಯು ಪ್ರೋಬಯಾಟಿಕ್ ಹೊಂದಿದ್ದು, ಆಮ್ಲೀಯತೆಯನ್ನು ನಿರ್ಮೂಲನ ಮಾಡುವ ಗುಣ ಹೊಂದಿರುತ್ತದೆ. ಊಟದ ಜೊತೆಗಿಂತ ಊಟವಾದ ನಂತರ ತಿಳಿ ಮಜ್ಜಿಗೆ ಸೇವನೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಇನ್ನು ಊಟದ ನಂತರ ವಜ್ರಾಸನ ಕೂರುವುದು ತುಂಬಾ ಪ್ರಯೋಜನಕಾರಿ. ಇದು ತಮ್ಮ ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಾಗಿದೆ. ಊಟದ ನಂತರ ಮಜ್ಜಿಗೆ ಸೇವಿಸಿ ವಜ್ರಾಸನದಲ್ಲಿ ಕೂತರೆ ಆಗುವ ಪ್ರಯೋಜನೆವೇನೆಂದರೆ ಇದು ಹೊಟ್ಟೆಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಹಾಗಾಗಿ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ.
ಊಟದ ನಂತರ ಲಘು ವಾಕ್ ಮಾಡಿ. ಸಮಯವಿದ್ದರೆ ಊಟದ ನಂತರ ನೂರು ಹೆಜ್ಜೆ ನಿಧಾನವಾಗಿ ಹಾಕಿ. ಹೀಗೆ ಊಟದ ನಂತರ ಮೆಲ್ಲನೆಯ ನಡಿಗೆ ಜೀರ್ಣಕ್ರಿಯೆಗೆ ತುಂಬಾ ಸಹಾಯವಾಗುತ್ತದೆ. ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ.
ಉತ್ತಮ ಜೀರ್ಣಕ್ರಿಯೆಗೆ ಚೆನ್ನಾಗಿ ನೀರು ಕಡಿಯಿರಿ. ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಊಟ ಉಪಹಾರಗಳನ್ನು ಮಾಡಿ, ಹೆಚ್ಚು ಟೀ ಕಾಫಿ ಬೇಡ. ಹೆಚ್ಚಾಗಿ ಹಣ್ಣು, ನಾರಿನಾಂಶ ಇರುವ ತರಕಾರಿ, ಸೊಪ್ಪಿನ ಸಲಾಡ್ಗಳನ್ನು ಸೇವಿಸಿ, ಆರೋಗ್ಯವಾಗಿರಿ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.