ನವದೆಹಲಿ: ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್’ನನ್ನು ನವದೆಹಲಿಯಲ್ಲಿ ಶನಿವಾರ ಬಂಧಿಸಲಾಗಿದೆ. ಬನ್ಭೂಲ್ಪುರದಲ್ಲಿ ಅಕ್ರಮ ಮದರಸಾವನ್ನ ನೆಲಸಮಗೊಳಿಸಿದ ನಂತರ ಫೆಬ್ರವರಿ 8 ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ಈವರೆಗೆ 78 ಜನರನ್ನ ಬಂಧಿಸಲಾಗಿದೆ.
ಸುಳ್ಳು ಅಫಿಡವಿಟ್ಗಳ ಆಧಾರದ ಮೇಲೆ ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯವನ್ನ ತಪ್ಪುದಾರಿಗೆಳೆಯಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪವನ್ನ ಆರೋಪಿಗಳ ಮೇಲೆ ಹೊರಿಸಲಾಗಿದೆ.
ಮಲಿಕ್ ಮತ್ತು ಆತನ ಪುತ್ರ ಅಬ್ದುಲ್ ಮೊಯಿದ್ ವಿರುದ್ಧ ಈ ಹಿಂದೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು ಮತ್ತು ಪಟ್ಟಣದಲ್ಲಿನ ಅವರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮಲಿಕ್ ಅಕ್ರಮ ಮದರಸಾವನ್ನ ನಿರ್ಮಿಸಿದ್ದ ಮತ್ತು ಅದರ ನೆಲಸಮವನ್ನ ತೀವ್ರವಾಗಿ ವಿರೋಧಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಸಮಗೊಳಿಸಲು ಪುರಸಭೆಯ ನೋಟಿಸ್ ಪ್ರಶ್ನಿಸಿ ಅವರ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು.
Watch Video : “ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಆದ್ಯತೆ” : ಆಸಕ್ತಿಕರ ವಿಡಿಯೋ ಹಂಚಿಕೊಂಡ ‘ಪ್ರಧಾನಿ ಮೋದಿ’
‘ಬಿಜೆಪಿ’ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ‘ಸುಮಲತಾ’ ಸ್ಪರ್ಧೆ : ಆಪ್ತ ಶಶಿಕುಮಾರ್ ಶಾಕಿಂಗ್ ಹೇಳಿಕೆ
‘ಸಮುದ್ರದ ಕೆಳಗಿರುವ ಸುರಂಗವು 320 ವೇಗ ಹೊಂದಿರುತ್ತೆ’ : ಹೈಸ್ಪೀಡ್ ರೈಲಿನ ಕುರಿತು ರೈಲ್ವೆ ಸಚಿವರಿಂದ ಮಹತ್ವದ ಮಾಹಿತಿ