ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ವಿರುದ್ಧ ನೀಡಲಾಗಿದ್ದಂತ ದೂರನ್ನು ಕನ್ನಡ ಪ್ರಜಾಪರ ವೇದಿಕೆಯ ಕನ್ನಡದ ಶಫಿ ವಾಪಾಸ್ ಪಡೆದಿದ್ದಾರೆ. ಅಲ್ಲದೇ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ನಟ ದರ್ಶನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕನ್ನಡ ಪ್ರಜಾಪರ ವೇದಿಕೆಯ ಕನ್ನಡದ ಶಫಿ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಹೀಗೆ ಅವರು ನಟ ದರ್ಶನ್ ವಿರುದ್ಧ ನೀಡುತ್ತಿದ್ದಂತೇ, ಅವರ ವಿರುದ್ಧ ದರ್ಶನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದರು.
ಈ ಬೆನ್ನಲ್ಲೇ ಪರಿಸ್ಥಿತಿ ವಿಕೋಪತೆಯನ್ನು ಅರಿತಂತ ಕನ್ನಡದ ಶಫಿ ಅವರು, ನಮ್ಮ ಸಂಘಟನೆಯಿಂದ ಆತುರಕ್ಕೆ ಬಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದರ್ಶನ್ ವಿರುದ್ಧ ದೂರು ನೀಡಲಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ನಮ್ಮ ದೂರಿನಿಂದ ಕನ್ನಡ ಮನಸ್ಸುಗಳಿಗೆ, ನಟ ದರ್ಶನ್ ಅಭಿಮಾನಿಗಳಿಗೆ ನೋವಾಗಿದ್ದರೇ ಕ್ಷಮಿಸಬೇಕು. ನಾವು ನೀಡಲಾಗಿದ್ದಂತ ದೂರನ್ನು ಹಿಂಪಡೆಯುತ್ತಿದ್ದೇವೆ ಎಂಬುದಾಗಿ ವೀಡಿಯೋ ಸಂದೇಶದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ