ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ವಲಯ ಯೋಜನೆ ಲೆಕ್ಕಶೀರ್ಷಿಕೆ 2225-03-001-0-05ರಡಿ ಸಮುದಾಯ ಭವನ/ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.10.00 ಲಕ್ಷಗಳು, ತಾಲ್ಲೂಕು ಕೇಂದ್ರಸ್ಥಾನಗಳಿಗೆ ರೂ.25.00 ಲಕ್ಷಗಳು ಹಾಗೂ ಜಿಲ್ಲಾ ಕೇಂದ್ರಸ್ಥಾನಕ್ಕೆ ರೂ.50.00 ಲಕ್ಷಗಳಂತೆ ಗರಿಷ್ಠ ಮಿತಿಗೊಳಪಟ್ಟು ಪ್ರವರ್ಗ-1, 2ಎ, 3ಎ ಮತ್ತು ಪ್ರವರ್ಗ-3ಬಿಗೆ ಸೇರಿದ ಜಾತಿಗಳ ನೋಂದಾಯಿತ ಸಂಘ/ಸ್ವಯಂ ಸೇವಾ ಸಂಸ್ಥೆ/ಟ್ರಸ್ಟ್‌ಗಳಿಗೆ ಸಹಾಯಧನವನ್ನು ಮಂಜೂರು ಮಾಡಲು ಆದೇಶಿಸಲಾಗಿರುತ್ತದೆ ಎಂದಿದ್ದಾರೆ.
ದಿನಾಂಕ:05.11.2014ರ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಅನುದಾನದ ಮಿತಿಯನ್ನು ಅಗತ್ಯ ಸಂದರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪಕರಣವೆಂದು ಪರಿಗಣಿಸಿ ಹೆಚ್ಚುವರಿಯಾಗಿ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆರ್ಥಿಕ ಇಲಾಖೆ ಅನಧಿಕೃತ ಟಿಪ್ಪಣಿಗಳಲ್ಲಿ ಅರಸೀಕೆರೆ, ಹೊಸದುರ್ಗ, ಮುದ್ದೇಬಿಹಾಳ, ರೋಣ ವಿಧಾನಸಭಾ ಕ್ಷೇತ್ರಗಳಿಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೆಲವು ಷರತ್ತಿಗೊಳಪಟ್ಟು ಅನುದಾನ ಮಂಜೂರು ಮಾಡಿ ಸದರಿ ಸಮುದಾಯ ಭವನ ಕಾಮಗಾರಿಗಳ ವಿವರಗಳನ್ನು ಸಂಬಂಧಿಸಿದ ಮತಕ್ಷೇತ್ರಗಳ ಮಾನ್ಯ ಶಾಸಕರುಗಳಿಂದ ಪಡೆದು ಆಡಳಿತಾತ್ಮಕ ಆನುಮೋದನೆ ನೀಡುವಂತೆ ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ದಿನಾಂಕ: 22.02.2024 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ ಅರಸೀಕೆರೆ, ಹೊಸದುರ್ಗ, ಮುದ್ದೇಬಿಹಾಳ, ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳನ್ನು ಅನುಬಂಧದಲ್ಲಿ ಲಗತ್ತಿಸಿರುವ ಸ್ಥಳಗಳಲ್ಲಿ ಮಾನ್ಯ ಶಾಸಕರುಗಳು ಕೋರಿರುವಂತೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ವಿನಾಯಿತಿ ಹೊಂದಿರುವ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ/ಕೆಆರ್‌ಐಡಿಎಲ್/ಕ್ಯಾಮ್ಯೂಟೆಕ್ ಬಿಲ್ಡಿಂಗ್ ಸೆಂಟರ್ ಏಜೆನ್ಸಿಗಳ ಮೂಲಕ ಒಟ್ಟು ರೂ.16.40ಕೋಟಿಗಳ (ಹದಿನಾರು ಕೋಟಿ ನಾಲವತ್ತು ಲಕ್ಷ ರೂಪಾಯಿಗಳು ಮಾತ್ರ)ಗಳ ವೆಚ್ಚದಲ್ಲಿ ಕೈಗೊಳ್ಳಲು ಈ ಕೆಳಕಂಡ ಷರತ್ತಿಗೊಳ್ಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಷರತ್ತುಗಳು
1. ವಿಶೇಷ ಅನುದಾನದಡಿ ಯಾವುದೇ ಹೊಸ ಕಾಮಗಾರಿಗಳ ಪಸ್ತಾವನೆಗಳನ್ನು ಮಂಜೂರಾತಿಗೆ ಸಲ್ಲಿಸುವಂತಿಲ್ಲ.
2. ಸಹಮತಿಸಲಾದ ಅನುದಾನದ ಮಿತಿಯಲ್ಲಿಯೇ ಕಾಮಗಾರಿಗಳ ಅಂದಾಜನ್ನು ಪುಚಲಿತ ಕೂಡ ದರಪಟ್ಟಿಯನ್ವಯ ಅಂದಾಜನ್ನು ತಯಾರಿಸತಕ್ಕದ್ದು, ಅಂತಹ ಅಂದಾಜಿನಲ್ಲಿ ಟೆಂಡರ್ ಪ್ರಿಮಿಯಂ ಸಹಮತಿಸಿದ ಅನುದಾನದ ಮಿತಿಯಲ್ಲಿಯೇ ಒಳಗೊಂಡಿರತಕ್ಕದ್ದು, ಯಾವುದೇ ಕಾರಣಕ್ಕೂ ಅಂದಾಜಿನಲ್ಲಿ ನಿರ್ಣಾಯಕ ಐಟಂಗಳು ಕೈಬಿಡದಂತೆ ನೋಡಿಕೊಳ್ಳತಕ್ಕದ್ದು.
3. ಪ್ರಸ್ತಾಪಿಸಿದ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು. 4. ಪ್ರಸ್ತಾಪಿಸಿದ ಕಾಮಗಾರಿಗಳಡಿ ಅಂದಾಜನ್ನು ಪರಿಷ್ಕರಿಸುವುದನ್ನು ನಿರ್ಭಂದಿಸಿದೆ. 5. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಸರ್ಕಾರದ ಆದೇಶ ಸಂಖ್ಯೆ: ಹಿಂವಕ 695 ಬಿಎಂಎಸ್ 2014(ಭಾಗ-2), ದಿನಾಂಕ:05.11.2014ರ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸತಕ್ಕದ್ದು. ಸರ್ಕಾರದ ಮಾರ್ಗಸೂಚಿಗಳನ್ವಯ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಹಂತದಲ್ಲಿ ಮಾರ್ಗಸೂಚಿಗಳನ್ವಯ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡತಕ್ಕದ್ದು. 6. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಕಟ್ಟಡದ ಪಗತಿಗನುಗುಣವಾಗಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವುದು ಹಾಗೂ ಬಿಡುಗಡೆ ಮಾಡಿದ ಮೊತ್ತಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ನಿಯಮಾನುಸಾರ ಜಿಲ್ಲಾಧಿಕಾರಿಗಳ ಮುಖಾಂತರ ಪಡೆಯತಕ್ಕದ್ದು.
4.ಪ್ರಸ್ತಾಪಿಸಿದ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು.
7. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನೀಡಲಾಗುತ್ತಿರುವ ಅನುದಾನವನ್ನು ಮಾರ್ಗಸೂಚಿಗಳನುಸಾರ ಬಳಕೆಯಾಗುತ್ತಿರುವ ಬಗ್ಗೆ, ಪರಿಶೀಲಿಸಲು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಇವರಿಂದ ನಿಗಧಿತ ನಮೂನೆಯಲ್ಲಿ ವರದಿಯ ಆಧಾರದಲ್ಲಿ ನಿಯಮಾನುಸಾರ ಅವಶ್ಯಕ ಕ್ರಮ ತೆಗೆದುಕೊಳ್ಳತಕ್ಕದ್ದು. 8. ಮಂಜೂರು ಮಾಡಲಾದ ಅನುದಾನವನ್ನು ಯಾವ ಉದ್ದೇಶಕ್ಕೆ ನೀಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳತಕ್ಕದ್ದು, ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳತಕ್ಕದ್ದಲ್ಲ.
9. ಮಂಜೂರಾದ ಅನುದಾನವನ್ನು 3 ವರ್ಷಗಳೊಳಗಾಗಿ ಮಂಜೂರಾದ ಕಾಮಗಾರಿಗೆ ವಿನಿಯೋಗಿಸತಕ್ಕದ್ದು.
2225-03-001-0-05(103) ಒದಗಿಸುವ ಸದರಿ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದ ಅನದಾನದಲ್ಲಿ ಭರಿಸತಕ್ಕದ್ದು.
ಲೆಕ್ಕಶೀರ್ಷಿಕೆ
ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿಗಳ ಸಂಖ್ಯೆಗಳು: ಆಇ 80 ವೆಚ್ಚ- 3 2024, : 23.01.24, 133 2-3 2024, : 13.02.24, sa 68 2-3 2024, : 27.01.24, ಹಾಗೂ ಆಇ 99 ವೆಚ್ಚ-3 2024, ದಿ: 02.02.24 ರಲ್ಲಿ ನೀಡಿರುವ ಸಹಮತಿ ಹಾಗೂ ಮಾನ್ಯ ಇಲಾಖಾ ಸಚಿವರ ಅನುಮೋದನೆ ಮತ್ತು ಸರ್ಕಾರದ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ ಎಂದಿದ್ದಾರೆ.
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ