ಬೆಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಫೆಬ್ರವರಿ 26 ಹಾಗೂ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈ ಬಗ್ಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
BREAKING : ಹಾಸನದಲ್ಲಿ ಗೃಹಿಣಿ ಅನುಮಾಸ್ಪದವಾಗಿ ಸಾವು : ಪತಿಯೆ ನೇಣು ಬಿಗಿದು ಕೊಲೆಗೈದಿರುವ ಆರೋಪ
ಉದ್ಯೋಗ ಮೇಳದಲ್ಲಿ 502 ಕಂಪನಿಗಳು ಭಾಗಿಯಾಗಲಿದ್ದು, ಸುಮಾರು 1 ಲಕ್ಷ ಮಂದಿಗೆ ಉದ್ಯೋಗ ನೀಡಲಿದೆ. ಅರಮನೆ ಮೈದಾನದಲ್ಲಿ 600 ಸ್ಟಾಲ್ ಹಾಕಲಾಗುತ್ತಿದೆ. ಒಟ್ಟು 150 ಕೇಂದ್ರಗಳಲ್ಲಿ ಅಭ್ಯರ್ಥಿಗಳ ನೋಂದಣಿ ಆಗಲಿದೆ. ಈ ಪೈಕಿ ವಿಶೇಷಚೇತನರಿಗಾಗಿ ಪ್ರತ್ಯೇಕ 5 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉದ್ಯೋಗದಾತರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮೇಳದಲ್ಲಿ ಭಾಗಿಯಾಗಲು ಶುಲ್ಕ ಇರುವುದಿಲ್ಲ ಎಂದು ಮಾಹಿತಿ ನೀಡಿದರು. https://kannadanewsnow.com/kannada/recruitment-2019-apply-for-1000-village-administration-officer-posts/
ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ನಿರ್ಣಯ ಅಂಗಿಕಾರ : ಇಂದಿನ ‘ರಾಜಭವನ ಚಲೋ’ ಸೋಮವಾರಕ್ಕೆ ಮುಂದೂಡಿಕೆ
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲಾಗಿತ್ತು. ಸಿದ್ದರಾಮಯ್ಯ ಅವರ ಸೂಚನೆಯಂತೆ ಈ ಬಾರಿ ಬೃಹತ್ ಮೇಳ ಆಯೋಜಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಶರಣ ಪ್ರಕಾಶ್ ಪಾಟೀಲ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈಗಾಗಲೇ ಆನ್‌ಲೈನ್ ನೋಂದಣಿ ಆರಂಭಿಸಿದ್ದು, 31 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೇಳ ಆರಂಭದ ದಿನದವರೆಗೂ ನೋಂದಣಿಗೆ ಅವಕಾಶ ನೀಡಲಾಗಿದೆ. ಈಗಾಗಲೇ 1.32 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 22 ಸಾವಿರ ನಿರುದ್ಯೋಗಿಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಫಲಿತಾಂಶ ಬಂದ ದಿನದಿಂದ ಆರು ತಿಂಗಳ ಬಳಿಕ ಯೋಜನೆಯ ಫಲಾನುಭವಿಯಾಗಲು ಸಾಧ್ಯವಾಗಲಿದೆ ಎಂದರು.
‘ಯುವ ಸಮೃದ್ಧಿ ಮೇಳ’ಕ್ಕೆ ನೋಂದಣಿ ಮಾಡಲು ಈ ವಿಡಿಯೋ ನೋಡಿ