ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಬುಧವಾರ ಟೀಕಿಸಿದೆ. ರಾಹುಲ್ ಗಾಂಧಿ ಅವರು ಐಶ್ವರ್ಯಾ ರೈ ಬಚ್ಚನ್ ಅವರನ್ನ ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅವರಿಗೆ ‘ಯಶಸ್ವಿ ಮತ್ತು ಸ್ವಯಂ ನಿರ್ಮಿತ ಮಹಿಳೆಯರೊಂದಿಗೆ ಅಪಾಯಕಾರಿ ಗೀಳು ಇದೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳ ನಂತ್ರ ಈ ವಿವಾದ ಪ್ರಾರಂಭವಾಗಿದೆ. ಕಳೆದ ತಿಂಗಳು ಅಯೋಧ್ಯೆಯ ರಾಮಮಂದಿರದಲ್ಲಿ ಆಯೋಜಿಸಿದ್ದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮವನ್ನ ವಿಶೇಷವಾಗಿ ಟೀಕಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಶತಕೋಟ್ಯಾಧಿಪತಿಗಳು ಭಾಗವಹಿಸಿದ್ದರು. ಆದ್ರೆ, ದೇಶದ ಜನಸಂಖ್ಯೆಯ 73% ರಷ್ಟಿರುವ ಒಬಿಸಿ, ದಲಿತ ಅಥವಾ ಬುಡಕಟ್ಟು ಸಮುದಾಯದ ಯಾರೂ ಅಲ್ಲಿ ಕಾಣಿಸಲಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
BREAKING : 4 ದೇಶಗಳಿಗೆ 54,760 ಟನ್ ‘ಈರುಳ್ಳಿ ರಫ್ತಿಗೆ’ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಅನುಮತಿ
ನಾನು ‘ಬಿಜೆಪಿ’ ಬಿಡಲ್ಲ, ‘ಕಾಂಗ್ರೆಸ್’ ಸೇರುವ ಅವಶ್ಯಕತೆಯೂ ನನಗಿಲ್ಲ – ಡಾ.ಕೆ ಸುಧಾಕರ್ ಸ್ಪಷ್ಟನೆ
ಸಾಟಿ ಇಲ್ಲದೇ ಸಾಗುತ್ತಿದೆ ‘ಪ್ರಧಾನಿ ಮೋದಿ’ ಜನಪ್ರಿಯತೆ ; ಜೋ ಬೈಡನ್, ರಿಷಿ ಸುನಕ್ ಹಿಂದಿಕ್ಕಿ ‘ನಮೋ’ ಅಗ್ರಸ್ಥಾನಕ್ಕೆ