ಸೂರತ್ : 28 ವರ್ಷದ ರೂಪದರ್ಶಿ ತಾನಿಯಾ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಪ್ರಮುಖ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರಿಗೆ ಸೂರತ್ ಪೊಲೀಸರು ವಿಚಾರಣಾ ಸಮನ್ಸ್ ಜಾರಿ ಮಾಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿಯನ್ನ ಪ್ರತಿನಿಧಿಸುವ ಅಭಿಷೇಕ್ ಶರ್ಮಾ ಅವರನ್ನ ವಿಚಾರಣೆಗೆ ಕರೆಯಲಾಗಿದ್ದು, ತಾನಿಯಾ ಅವರಿಂದ ಕರೆ ಸ್ವೀಕರಿಸಿದ ಕೊನೆಯ ವ್ಯಕ್ತಿ ಇವರೇ ಎಂದು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನಿಯಾ ಸಿಂಗ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಆಲ್ರೌಂಡರ್ ಅಭಿಷೇಕ್ ಶರ್ಮಾ ನಡುವೆ ಸ್ನೇಹವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ.ಆರ್ ಮಲ್ಹೋತ್ರಾ ಹೇಳಿದ್ದಾರೆ. ತಾನಿಯಾ ಶರ್ಮಾಗೆ ವಾಟ್ಸಾಪ್ನಲ್ಲಿ ಕಳುಹಿಸಿದ ಸಂದೇಶವನ್ನ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಭಿಷೇಕ್ ಶರ್ಮಾ ತಾನಿಯಾ ಅವರ ಫೋನ್ ಸಂಖ್ಯೆಯನ್ನ ಬ್ಲಾಕ್ ಮಾಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವರದಿ ಬಹಿರಂಗಪಡಿಸಿದೆ.
ಋಣಭಾರದ ಸಮಸ್ಯೆಯಿಂದ ಹೊರಬರಲು 9ನೇ ವಾರದ ಶುಕ್ರವಾರದಂದು ಈ ಪರಿಹಾರವನ್ನು ಮಾಡಿ ಸಾಕು
BREAKING: ‘ಮಾಜಿ ಸಂಸದ ಮುದ್ದಹನುಮೇಗೌಡ’ ಬಿಜೆಪಿ ತೊರೆದು ಅಧಿಕೃತವಾಗಿ ‘ಕಾಂಗ್ರೆಸ್ ಸೇರ್ಪಡೆ’