ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬ ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿರು ಆಘಾತಕಾರಿ ಘಟನೆ ನಡೆದಿದೆ. ಚಿಕಿತ್ಸೆಯ ಮಧ್ಯದಲ್ಲಿ ಆಸ್ಪತ್ರೆಯಿಂದ ಹೊರಬಂದು ಆಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದಾನೆ. ಆತ ರೋಗಿಗಳ ಬಟ್ಟೆಗಳನ್ನ ಧರಿಸಿದ್ದು, ಕೈಯಲ್ಲಿ IV ಇತ್ತು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಪ್ರಕರಣವು ಅಮೆರಿಕದ ವರ್ಜೀನಿಯಾದಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ರಾತ್ರಿ 9: 30 ಕ್ಕೆ ಇನ್ನೋವಾ ಫೈಫಾಕ್ಸ್ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಫೇರ್ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಆಸ್ಪತ್ರೆಯ ಹೊರಗೆ ತೆಗೆದ ಶಂಕಿತನ ಫೋಟೋವನ್ನು ಹಂಚಿಕೊಂಡಿದ್ದು, “ಆತ ಇನ್ನೂ ಡಿಸ್ಚಾರ್ಜ್ ಆಗಿರಲಿಲ್ಲ. ಆತನ ಕೈಯಲ್ಲಿ IV ಇತ್ತು. ಚಿಕಿತ್ಸೆ ನಡೆಯುತ್ತಿತ್ತು” ಎಂದು ಅವರು ಹೇಳಿದರು.
ಶಂಕಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು 32 ವರ್ಷದ ರಿಕಿ ಲೆವೆ ಎಂದು ಗುರುತಿಸಲಾಗಿದೆ.
ಮೋದಿ ಸರ್ಕಾರದ ಮಹತ್ವದ ಯೋಜನೆ : ದೇಶದ 3 ಕೋಟಿ ಮಹಿಳೆಯರನ್ನ ‘ಲಕ್ಷಾಧಿಪತಿ’ ಮಾಡುವ ಗುರಿ
‘ರಷ್ಯಾ-ಉಕ್ರೇನ್ ಯುದ್ಧ’ದಲ್ಲಿ ಮಧ್ಯಸ್ಥಿಕೆ ವಹಿಸಲು ನಾವು ಸಿದ್ಧ : ಸಚಿವ ಜೈಶಂಕರ್