ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಾಗಿ ನಡೆದಂತ ಮತಏಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪಚುನಾವಣೆಗೆ ಇತ್ತೀಚೆಗೆ ಮತದಾನ ನಡೆದಿತ್ತು. ಆ ಮತಗಳ ಏಣಿಕೆ ಕಾರ್ಯ ಇಂದು ಬೆಂಗಳೂರಲ್ಲಿ ನಡೆಸಲಾಗಿತ್ತು. ಇಂತಹ ಮತಗಳ ಏಣಿಕೆ ಕಾರ್ಯ ಮುಕ್ತಾಯವಾಗಿದ್ದು ಫಲಿತಾಂಶ ಕೂಡ ಹೊರಬಿದ್ದಿದೆ.
ಆರಂಭದಿಂದಲೂ ಮುನ್ನಡೇ ಕಾಯ್ದುಕೊಂಡಿದ್ದಂತ ಪುಟ್ಟಣ್ಣ ಅವರು, 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
1506 ಮತಗಳಿಂದ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಪಿ ರಂಗನಾಥ್ ಅವರು ಸೋಲು ಕಂಡರೇ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ವಿಧಾನಪರಿಷತ್ ಉಪ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಭರ್ಜರಿ ಗೆಲುವು ಸಾಧಿಸಿರೋದಾಗಿ ತಿಳಿದು ಬಂದಿದೆ. ಎಷ್ಟು ಮತಗಳಿಂದ ಗೆಲುವು ಸಾಧಿಸಿದ್ದಾರೆ ಎನ್ನುವ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದಾಗ ತಿಳಿದು ಬರಲಿದೆ.
ಈಗ ನಾವು ಕಟ್ಟುವ ಪ್ರತಿ ನೂರು ರೂ.ಗೆ 12-13 ರೂ.ಮಾತ್ರ ಕೇಂದ್ರದಿಂದ ವಾಪಾಸ್ ಬರುತ್ತಿದೆ – ಸಿಎಂ ಸಿದ್ದರಾಮಯ್ಯ
ಮಾರ್ಚ್.22ರಿಂದ ‘IPL ಪಂದ್ಯಾವಳಿ’ ಆರಂಭ – ಅಧ್ಯಕ್ಷ ಅರುಣ್ ಧುಮಾಲ್ | IPL Match 2024