ನವದೆಹಲಿ : ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಲದೀಪ್ ಕುಮಾರ್ ಗೆಲುವು ಸಾಧಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾಧಿಕಾರಿ ಅಸಿಂಧು ಎಂದು ಘೋಷಿಸಿದ ಎಲ್ಲಾ 8 ಮತಗಳನ್ನ ಮಾನ್ಯವೆಂದು ಘೋಷಿಸುವಂತೆ ಸೂಚನೆ ನೀಡಿದರು. ಈ ಎಲ್ಲಾ ಮತಗಳ ಮತಪತ್ರದ ಮೇಲೆ ರಿಟರ್ನಿಂಗ್ ಅಧಿಕಾರಿ ಗುರುತು ಹಾಕಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ, ಎಲ್ಲಾ 8 ಮತಗಳು ಅರ್ಜಿದಾರರ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿವೆ ಎಂದು ಹೇಳಿದರು. ರಿಟರ್ನಿಂಗ್ ಅಧಿಕಾರಿ ತನ್ನ ಅಧಿಕಾರವನ್ನ ಮೀರಿ ವರ್ತಿಸಿದ್ದು, ನಿನ್ನೆ, ಸೋಮವಾರ ಪ್ರಶ್ನೆಗಳನ್ನು ಕೇಳುವ ಮೊದಲು, ನಾವು ಅನಿಲ್ ಮಾಸಿಹ್ ಅವರಿಗೆ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದೆವು. ರಿಟರ್ನಿಂಗ್ ಆಫೀಸರ್ 8 ಮತಪತ್ರಗಳಲ್ಲಿ ತನ್ನ ಗುರುತನ್ನ ಹಾಕಿದ್ದು, ತನ್ನ ಅಧಿಕಾರ ವ್ಯಾಪ್ತಿಯನ್ನ ಮೀರಿ ವರ್ತಿಸಿದನು. ರಿಟರ್ನಿಂಗ್ ಆಫೀಸರ್ ಅಪರಾಧ ಎಸಗಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
BREAKING : ರಾಜ್ಯಸಭಾ ಅಭ್ಯರ್ಥಿಯಾಗಿ ‘ಸೋನಿಯಾ ಗಾಂಧಿ’ ಅವಿರೋಧ ಆಯ್ಕೆ
BREAKING : ರಾಜಸ್ಥಾನದಿಂದ ರಾಜ್ಯಸಭೆಗೆ ‘ಸೋನಿಯಾ ಗಾಂಧಿ ಸೇರಿ ಇಬ್ಬರು ಬಿಜೆಪಿ ಅಭ್ಯರ್ಥಿ’ಗಳು ಅವಿರೋಧ ಆಯ್ಕೆ