ಬೆಂಗಳೂರು: ಅನಧಿಕೃತ ಸಾಗುವಳಿ ಸಕ್ರಮೀಕರಣ (ಬಗರ್ ಹುಕುಂ ಸಾಗುವಳಿ) ಕೋರಿ ರಾಜ್ಯದಲ್ಲಿ 9.55ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 54ಲಕ್ಷ ಹೆಕ್ಟೇರ್ ಜಮೀನು ಸಕ್ರಮಕ್ಕೆ ಕೋರಲಾಗಿದೆ. ಆದರೇ ಅಚ್ಚರಿ ಎಂದರೆ ವಾಸ್ತವವಾಗಿ ಅಷ್ಟು ಪ್ರಮಾಣದ ಸರಕಾರಿ ಜಮೀನು ರಾಜ್ಯದಲ್ಲಿ ಲಭ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು.
ಹರಿಹರ ಶಾಸಕ ಹರೀಶ್ ಬಿ.ಪಿ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಡವರಿಗೆ ಸಹಾಯ ಮಾಡಲು ತಂದಿರುವ ಕಾನೂನು ದುರುಪಯೋಗ ಹೆಚ್ಚಾಗುತ್ತಿದೆ. ಒಂದು ಕಡೆ ಓರ್ವ ವ್ಯಕ್ತಿ 25 ಅರ್ಜಿ ಸಲ್ಲಿಸಿರುವುದನ್ನು, ಅರ್ಜಿ ಸಲ್ಲಿಸಿದ ವ್ಯಕ್ತಿ 1990 ಏಪ್ರಿಲ್ 14ಕ್ಕಿಂತ ಮುಂಚೆ ಕಡೆಯ ಪಕ್ಷ ಹಿಂದಿನ ಮೂರು ವರ್ಷಗಳ ಕಡಿಮೆಯಿಲ್ಲದ ಅವಧಿಯ ನಿರಂತರ ಭೂಮಿಯ ಅನಧಿಕೃತ ಅಧಿಬೋಗನಾಗಿರಬೇಕು ಎಂಬ ನಿಯಮವಿದೆ; ಬಂದಿರುವ ಕೆಲ ಅರ್ಜಿಗಳಲ್ಲಿ ಈಗμÉ್ಟೀ 18 ವರ್ಷ ತುಂಬಿದವರು ಸಹ ಇದ್ದಾರೆ ಎಂಬ ಬೇಸರವನ್ನು ಸಚಿವ ಕೃಷ್ಣಬೈರೇಗೌಡ ಅವರು ಹೊರಹಾಕಿದರು.
ಹರಿಹರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 138 ವಿಧಾನಸಭಾ ಕ್ಷೇತ್ರಗಳಲ್ಲಿ ಭೂ ನ್ಯಾಯಮಂಡಳಿಗಳನ್ನು ಈಗಾಗಲೇ ರಚಿಸಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ತಿಂಗಳಾಂತ್ಯಕ್ಕೆ ಭೂ ನ್ಯಾಯ ಮಂಡಳಿಗಳನ್ನು ರಚನೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಹರಿಹರ ತಾಲೂಕಿನಲ್ಲಿ ಕಳೆದ 3 ವರ್ಷಗಳಲ್ಲಿ ಫಾರಂ-57ರಲ್ಲಿ ಅನಧಿಕೃತ ಸಾಗುವಳಿ ಸಕ್ರಮೀಕರಣ ಕೋರಿ 1,317 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 1,173 ತಿರಸ್ಕøತವಾಗಿವೆ ಮತ್ತು 144 ಅರ್ಜಿಗಳು ಬಾಕಿ ಇವೆ ಎಂದು ವಿವರಿಸಿದ ಸಚಿವರು ಲಭ್ಯವಿರುವ ನಿಯಮಗಳಡಿ ನಿಯಮ ಮೀರಿ ಅನರ್ಹರಾಗಿದ್ದಾರೆ. ಅನರ್ಹ ಅರ್ಜಿಗಳನ್ನು ಪರಿಶೀಲನೆ ಮಾಡಿ, ಖಂಡಿತ ನ್ಯಾಯ ಒದಗಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಹರಿಹರ ತಾಲೂಕಿನಲ್ಲಿ ಕಳೆದ 3 ವರ್ಷಗಳಲ್ಲಿ ಬಗರ್‍ಹುಕುಂ ಸಾಗುವಳಿದಾರರಿಗೆ ಯಾವುದೇ ಭೂಮಿ ಹಂಚಿಕೆ ಮಾಡಲಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.