ನವದೆಹಲಿ : ಮಹಾರಾಷ್ಟ್ರದಲ್ಲಿ ರಿಯಲ್ ಎನ್ಸಿಪಿಯ ಹೋರಾಟಕ್ಕೆ ಸಂಬಂಧಿಸಿದಂತೆ ಶರದ್ ಪವಾರ್’ಗೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಅಜಿತ್ ಪವಾರ್ ಬಣವನ್ನ ನಿಜವಾದ ಎನ್ಸಿಪಿ ಎಂದು ಘೋಷಿಸುವ ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಈ ಪ್ರಕರಣದಲ್ಲಿ ಶರದ್ ಪವಾರ್ ಅವರ ಅರ್ಜಿಯನ್ನ ಪರಿಶೀಲಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಾಲಯವು ಅಜಿತ್ ಪವಾರ್ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, 2 ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಇದೀಗ ಈ ಪ್ರಕರಣದ ಮುಂದಿನ ವಿಚಾರಣೆ 3 ವಾರಗಳ ನಂತರ ನಡೆಯಲಿದೆ.
ಸುಪ್ರೀಂ ಕೋರ್ಟ್ನ ಮುಂದಿನ ವಿಚಾರಣೆಯ ತನಕ, ಶರದ್ ಪವಾರ್ ತಮ್ಮ ರಾಜಕೀಯ ಪಕ್ಷಕ್ಕೆ ‘ಎನ್ಸಿಪಿ ಶರದ್ ಚಂದ್ರ ಪವಾರ್’ ಹೆಸರನ್ನ ಬಳಸುತ್ತಾರೆ. ಪವಾರ್ ತಮ್ಮ ಪಕ್ಷದ ಎನ್ಸಿಪಿ ಶರದ್ ಚಂದ್ರ ಪವಾರ್ಗೆ ಚುನಾವಣಾ ಆಯೋಗದಿಂದ ಚಿಹ್ನೆಯನ್ನ ಕೋರಿದರೆ, ಚುನಾವಣಾ ಆಯೋಗವು ಒಂದು ವಾರದೊಳಗೆ ಚಿಹ್ನೆಯನ್ನ ಹಂಚಿಕೆ ಮಾಡಬೇಕು.
ರಾಜ್ಯದಲ್ಲಿ ‘ಟಾಟಾ ಗ್ರೂಪ್’ನಿಂದ ‘2300 ಕೋಟಿ ರೂಪಾಯಿ’ ಹೂಡಿಕೆ ; 1,650 ಉದ್ಯೋಗ ಸೃಷ್ಠಿ
BREAKING : ಷೇರುಪೇಟೆಯಲ್ಲಿ ಖುಷಿಯೋ ಖುಷಿ : ಸತತ 5ನೇ ದಿನವೂ ಸೆನ್ಸೆಕ್ಸ್ ಏರಿಕೆ, ಹೂಡಿಕೆದಾರರಿಗೆ 2 ಲಕ್ಷ ಕೋಟಿ ಲಾಭ
BREAKING : ಕಾಂಗ್ರೆಸ್ ನಾಯಕಿ ‘ಪ್ರಿಯಾಂಕಾ ಗಾಂಧಿ’ ಆರೋಗ್ಯದಲ್ಲಿ ಮತ್ತೆ ಏರುಪೇರು ; ಆಸ್ಪತ್ರೆಗೆ ದಾಖಲು